Friday, November 22
Share News

ಬೆಂಗಳೂರು: ಆರೋಗ್ಯ ಕವಚ 108 ಆಂಬ್ಯುಲೆನ್ಸ್ ಸಿಬ್ಬಂದಿಗೆ ಮೂರು ತಿಂಗಳ ವೇತನ ಪಾವತಿಯಾಗದ ಕಾರಣಕ್ಕೆ ಮತ್ತೆ ಮುಷ್ಕರಕ್ಕೆ ಸಜ್ಜಾಗಿದ್ದಾರೆ. ಮೇ 6ರ ರಾತ್ರಿ 8 ಗಂಟೆಯಿಂದ ರಾಜ್ಯವ್ಯಾಪಿ ಆಂಬ್ಯುಲೆನ್ಸ್‌ ಸೇವೆ ಬಂದ್ ಆಗಲಿದೆ.

ಜಿವಿಕೆ ಸಂಸ್ಥೆ ಹಾಗೂ ರಾಜ್ಯ ಸರಕಾರದ ವಿರುದ್ಧ ಸಿಬ್ಬಂದಿ ತಿರುಗಿ ಬಿದ್ದಿದ್ದಾರೆ. ಮೂರು ತಿಂಗಳಿಂದ ವೇತನ ಸಿಗದೇ 108 ಸಿಬ್ಬಂದಿ ಜೀವನ ಹೈರಾಣಾಗಿದೆ. ಒಂದು ಕಡೆ ಮೂರು ತಿಂಗಳಿಂದ ಸಂಬಳವಿಲ್ಲ. ಮತ್ತೊಂದು ಕಡೆ ಜಿವಿಕೆ ಸಂಸ್ಥೆ ವೇತನ ಕಡಿತಗೊಳಿಸಿದೆ ಎಂದು ಕಿಡಿಕಾರಿದ್ದಾರೆ. ಈ ಎಲ್ಲ ಕಾರಣಗಳಿಗೆ ಸೋಮವಾರ ರಾತ್ರಿಯಿಂದ ಆಂಬ್ಯುಲೆನ್ಸ್ ಓಡಾಟವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ಕಳೆದ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳ ವೇತನ ಬಾಕಿಯಿದೆ. ಜಿವಿಕೆ ಸಂಸ್ಥೆ ಈಗಾಗಲೇ ಡಿಸೆಂಬರ್, ಜನವರಿ ತಿಂಗಳ ವೇತನದಲ್ಲಿ 30 ಸಾವಿರ ರೂ. ಕಡಿತ ಮಾಡಿ, ಕೇವಲ 13 ಸಾವಿರ ರೂ. ವೇತನ ನೀಡುತ್ತಿದೆ. ಹೀಗಾಗಿ ಸೋಮವಾರ ಸಂಜೆಯೊಳಗೆ ವೇತನ ಪಾವತಿ ಮಾಡುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಕಡಿತ ಮಾಡಿದ ವೇತನವನ್ನು ಬಿಡುಗಡೆ ಮಾಡಬೇಕು. ಒಂದು ವೇಳೆ ವೇತನ ಪಾವತಿ ಮಾಡದಿದ್ದರೆ ಮುಷ್ಕರದ ಎಚ್ಚರಿಕೆಯನ್ನು ಕರ್ನಾಟಕ ರಾಜ್ಯ ಆರೋಗ್ಯ ಕವಚ 108 ನೌಕರರ ಸಂಘ ನೀಡಿದೆ.


Share News

Comments are closed.

Exit mobile version