Friday, November 22
Share News

ನೇಪಾಳದ 18 ವರ್ಷದ ನಿಮಾ ರಿಂಜಿ ಶೆರ್ಪ ವಿಶ್ವದ ಎಲ್ಲಾ 14 ಅತೀ ಎತ್ತರದ ಶಿಖರಗಳನ್ನು ಏರಿದ ಅತ್ಯಂತ ಕಿರಿಯ ಪರ್ವತಾರೋಹಿ ಎಂಬ ದಾಖಲೆ ಬರೆದಿರುವುದಾಗಿ ವರದಿಯಾಗಿದೆ.

ನೇಪಾಳದ ಮನಾಸ್ತು ಪರ್ವತವನ್ನು ಚಳಿಗಾಲದಲ್ಲಿ ಆಮ್ಲಜನಕ ಅಥವಾ ಹಗ್ಗದ ನೆರವಿಲ್ಲದೆ ಏರುವುದು ತನ್ನ ಮುಂದಿನ ಯೋಜನೆಯಾಗಿದೆ ಎಂದು ನಿಮಾ ರಿಂಜಿ ಹೇಳಿದ್ದಾರೆ. ಈ ಸಾಹಸದಲ್ಲಿ ಇಟಲಿಯ ಸಿಮೋನ್ ಮೊರೊ ಅವರೂ ಜತೆಗಿರುತ್ತಾರೆ.

ಸಹ ಪರ್ವತಾರೋಹಿ ಪಸಂಗ್ ನುರ್ಬು ಶೆರ್ಪ ಜತೆ ನೇಪಾಳದ 8,027 ಮೀಟರ್ ಎತ್ತರದ ಶಿಶಾಪಾಂಗ್ಲಾ ಶಿಖರವನ್ನು ಯಶಸ್ವಿಯಾಗಿ ಏರುವ ಮೂಲಕ ನಿಮಾ ರಿಂಜಿ ಈ ಸಾಧನೆ ಪೂರ್ಣಗೊಳಿಸಿದ್ದಾರೆ.


Share News

Comments are closed.

Exit mobile version