ಪ್ರಾಸ್ತಾವಿಕ ಮಾತಿನಲ್ಲಿ ವಿಷಯ ಉಲ್ಲೇಖಿಸಿದ ಶಾಸಕ ಅಶೋಕ್ ಕುಮಾರ್ ರೈ, ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಕೆ ಬೇಕು. ದೂರದ ಮಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಇದೆ. ಆದರೆ, ಪುತ್ತೂರಿನಿಂದ ಮಂಗಳೂರಿಗೆ ಅನಾರೋಗ್ಯ ಪೀಡಿತರನ್ನು ಕೊಂಡೊಯ್ದರೆ, ಬರುವಾಗ ಡೆಡ್ ಬಾಡಿಯನ್ನೇ ತರುವ ಸ್ಥಿತಿ ಇದೆ. ಆದ್ದರಿಂದ ಪುತ್ತೂರಿಗೆ ಮೆಡಿಕಲ್ ಕಾಲೇಜು ಬೇಕೇ ಬೇಕು ಎಂದರು.
ಈಗಾಗಲೇ 40 ಎಕರೆ ಜಾಗ ಗುರುತಿಸಲಾಗಿದೆ. ಬಜೆಟಿನಲ್ಲಿ ಅನುದಾನ ನೀಡಿದರೆ, ಪುತ್ತೂರಿನಲ್ಲಿ ಸುಸಜ್ಜಿತ ಮೆಡಿಕಲ್ ಕಾಲೇಜು ನಿರ್ಮಾಣ ಆಗಲಿದೆ ಎಂದ ಅವರು, ಜನರೆಲ್ಲರೂ ಎದ್ದು ನಿಂತು ಮೆಡಿಕಲ್ ಕಾಲೇಜು ಮಂಜೂರು ಮಾಡುವಂತೆ ಜನರೂ ಕೂಗಬೇಕು ಎಂದು ಮನವಿ ಮಾಡಿಕೊಂಡರು.
ಇದೇ ಸಂದರ್ಭ ಸೇರಿದ್ದ ಜನರು ಎದ್ದು ನಿಂತು, ಮೆಡಿಕಲ್ ಕಾಲೇಜು ನೀಡುವಂತೆ ಆಗ್ರಹಿಸಿದರು. ಆಗ “We want medical college” ಘೋಷಣೆ ಕೇಳಿಬಂದಿತು.
ಬಳಿಕ ಡಿಸಿಎಂ ಡಿಕೆ ಶಿವ ಕುಮಾರ್ ಅವರಿಗೆ ಮೆಡಿಕಲ್ ಕಾಲೇಜು ಮಂಜೂರು ಮಾಡುವಂತೆ ಮನವಿ ನೀಡಲಾಯಿತು.