ರಾಜ್ಯದ ಉತ್ತರ ಕರ್ನಾಟಕ ಹಾಗೂ ಅರೆ ಮಲೆನಾಡಿನ ಕೆಲವೆಡೆ ಮತ್ತು ಬಳ್ಳಾರಿ, ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮೆಣಸನ್ನು ಒಂದು ಪ್ರಮುಖ ಬೆಳೆಯನ್ನಾಗಿ ಬೆಳೆಯುತ್ತಾರೆ. ಸಾಮಾನ್ಯವಾಗಿ ಉತ್ತರ ಕರ್ನಾಟಕದಲ್ಲಿ ಕರಾವಳಿಯಂತೆ ಮಳೆ ಬಾರದ ಕಾರಣ ಉತ್ತರ ಕರ್ನಾಟಕ ಮೆಣಸು (spicy chilly usages) ಬೆಳೆಗೆ ಹೆಚ್ಚು ಸೂಕ್ತ.
ಹಾಗೆಂದು ಕರಾವಳಿಯಲ್ಲಿ ಮೆಣಸು (spicy chilly usages) ಬೆಳೆಯುವುದಿಲ್ಲ ಎಂದಲ್ಲ. ಆದರೆ ಕರಾವಳಿಯಲ್ಲಿ ಮೆಣಸು ಬೆಳೆದ ಯಶೋಗಾಥೆ ಇಲ್ಲವೇ ಇಲ್ಲ ಅಂದಾಜಿಸಬಹುದು. ಕಪ್ಪು, ಮೆಕ್ಕಲು, ಮರಳು ಮಿಶ್ರಿತ ಕೆಂಪುಗೋಡು ಮಣ್ಣಿನಲ್ಲಿ ಉತ್ತಮ ಇಳುವರಿಯನ್ನು ಪಡೆಯಬಹುದು.
ಮೆಣಸು (spicy chilly usages) ಬೆಳೆಗಾರನ ಬದುಕಿಗೆ ಸಿಹಿ ನೀಡಬೇಕಾದರೆ ಮೆಣಸು ಬೆಳೆಯುವ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ಇರಬೇಕಾದುದು ಅಗತ್ಯ. ತಳಿಯಿಂದ ತಳಿಗೆ ಬೆಳೆಯುವಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಿರುತ್ತವೆ. ಮೆಣಸು ಬೆಳೆಯಲು 10ರಿಂದ 30 ಸೆಂ. ಉಷ್ಣಾಂಶ ಬೇಕು. ಇನ್ನು ಖರ್ಚಿನ ವಿಷಯ ಮಾತನಾಡುವುದಾದರೆ, ಒಂದು ಎಕರೆಯಲ್ಲಿ ಮೆಣಸು ಬೆಳೆಯಲು ಕನಿಷ್ಠವೆಂದರೂ 1.50 ಲಕ್ಷ ರೂ. ಖರ್ಚು ಬರುತ್ತದೆ.
ಸಸಿ ತಯಾರಿ :
ಒಂದು ಎಕರೆಗೆ 100 ಗ್ರಾಂ. ಮೆಣಸಿನ (spicy chilly usages) ಬೀಜ ಬೇಕು. ಮೆಣಸಿನ ಬೀಜಕ್ಕೆ 100ಗ್ರಾಂ.ಗೆ ರೂ. 1500 ದರವಿರುತ್ತದೆ. ನಾಟಿಗೆ ಬೇಕಾದ ಸಸಿಗಳು ನರ್ಸರಿಗಳಲ್ಲಿ ಲಭ್ಯ. ಅಥವಾ ಸಸಿಗಳನ್ನು ಸ್ವತಹ ತಯಾರಿಸಿಕೊಳ್ಳಬಹುದಾಗಿದೆ. ಬೀಜ ಖರೀದಿಸಿ ಕೊಟ್ಟರೆ ಸಸಿಗಳನ್ನು ತಯಾರಿಸಿ ಕೊಡುವವರು ಇದ್ದಾರೆ. ಮೂವತ್ತೈದರಿಂದ ನಲವತ್ತು ದಿನದ ಒಂದು ಸಸಿ ತಯಾರಿಗೆ ರೂ. 60 ಪೈಸೆಯಿಂದ 70 ಪೈಸೆಯಿದೆ. ಉಮೇಶ್ ರೆಡ್ಡಿಯವರು ಸಸಿ ತಯಾರಿಸಲು ಬೀಜ ನೀಡಿ ಅವರಿಂದಲೇ ಸಸಿ ಖರೀದಿಸುತ್ತಾರೆ.
ಇದನ್ನು ಓದಿ: ನಮಾಜ್ ಮಾಡಿ ಪ್ರಾಯಶ್ಚಿತ: ಗಲ್ಲುಶಿಕ್ಷೆ ರದ್ದು ಪಡಿಸಿದ ಹೈಕೋರ್ಟ್!!
ನಾಟಿ :
ಜುಲೈ ತಿಂಗಳು ನಾಟಿಗೆ ಸೂಕ್ತ. ಮೊದಲು ಭೂಮಿಯನ್ನು ಉಳುಮೆ ಮಾಡಿ, ಸಾಲು ತೆಗೆದು ಗಿಡದಿಂದ ಗಿಡಕ್ಕೆ ಒಂದು ಅಡಿ ಅಂತರಬಿಟ್ಟು ಸಸಿಗಳನ್ನು ನೆಡುತ್ತಾರೆ. ರೆಡ್ಡಿಯವರು ಗುಂಟೂರು. ಬ್ಯಾಡಗಿ, ಡಬ್ಬಿ ಬ್ಯಾಡಗಿ ಮೆಣಸನ್ನು ಬೆಳೆಯುತ್ತಾರೆ.
ಗೊಬ್ಬರ :
ನೆಟ್ಟು ಹದಿನೈದು ದಿನದ ನಂತರ ರಾಸಾಯನಿಕ ಗೊಬ್ಬರವನ್ನು ನೀಡುತ್ತಾರೆ. ವಾರದಲ್ಲಿ ನಾಲ್ಕರಿಂದ ಐದು ಬಾರಿ ಔಷಧಗಳನ್ನು ಸಿಂಪಡಿಸಬೇಕು. (10 ಎಂ.ಎಲ್. ಔಷಧಕ್ಕೆ ರೂ. 10 ಸಾವಿರ ದರವಿದೆ.) ಮೂರು ಬಾರಿ ಕಟಾವಿಗೆ ಲಭ್ಯವಾಗುವುದರಿಂದ ವಾರಕ್ಕೊಮ್ಮೆ ಗೊಬ್ಬರ ನೀಡುವುದು ಉತ್ತಮ.
ರೋಗಗಳ ರಾಜ ‘ಮೆಣಸು’ :
ಮೆಣಸಿಗೆ (spicy chilly usages) ಬರುವಷ್ಟು ರೋಗಗಳು ಬೇರೆ ಯಾವ ಬೆಳೆಗೂ ಬರುವುದಿಲ್ಲ ಎಂದರೆ ತಪ್ಪಾಗದು. ಮಚ್ಚೆ ರೋಗ, ಬೂದಿರೋಗ, ಹೂವು ಉದುರುವ ರೋಗ, ಕಾಯಿ ಉದ್ದ ಬಾರದಿರುವ, ಒಣರೋಗ ಹೀಗೆ ಇಪ್ಪತ್ತಕ್ಕೂ ಅಧಿಕ ರೋಗಗಳು ಮೆಣಸಿಗೆ ಬರುತ್ತವೆ. ಸ್ಕಿರ್ಟೊಡ್ರಿಪ್ಸ್ ಡಾರ್ಸಾಲಿಸ್ ಎಂಬ ಕೀಟದಿಂದ ವೈರಸ್ ರೋಗ ಬರುತ್ತದೆ. ಈ ರೋಗ ಬಂದರೆ ಎಲೆಮುರುಟುಗೊಂಡು ಗಿಡದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ರೆಂಬೆಗಳ ತುದಿಗಳು ಅಂಟು ದ್ರವದಿಂದ ಆವೃತವಾಗುತ್ತವೆ. ಕೊಲೆಟೊ ಕಮ್ ಕ್ಯಾಪ್ಪಿಸಿ ಎಂಬ ಬೂಸ್ಟಿನಿಂದ ಕೊಳೆರೋಗ ಮತ್ತು ಕೊಲೆಟೊ ಕಮ್ ನೈಗಮ್ನಿಂದ ಅಂತ್ರಾಕ್ಸ್ ರೋಗ ಬರುತ್ತದೆ. ಅವುಗಳಿಂದ ಬೆಳೆಗಳನ್ನು ಸಂರಕ್ಷಿಸಿಕೊಳ್ಳುವುದೇ ಸವಾಲಿನ ಕೆಲಸ.
ಇದನ್ನು ಓದಿ: ಹೇರಳೆ ಮಾಲಕತ್ವದ ಪುತ್ತೂರಿನ ಪ್ರಸಿದ್ಧ ಹೋಟೆಲ್ ತೆರೆಮರೆಗೆ!!
ನೀರಾವರಿ :
ಮಣ್ಣು ಮತ್ತು ಹವಾಮಾನವನ್ನು ನೋಡಿಕೊಂಡು ನೀರು ಹಾಯಿಸುತ್ತಾರೆ. ಕೆಂಪು ಮಣ್ಣಿನಲ್ಲಿ ನೆಟ್ಟರೆ ವಾರದಲ್ಲಿ ಎರಡು ಬಾರಿ, ಕರಿಮಣ್ಣಾದರೆ ವಾರಕ್ಕೊಮ್ಮೆ ನೀರು ನೀಡಬೇಕಾಗುತ್ತದೆ. ತುಂಬಾ ಮಳೆ ಬಂದರೆ ಗಿಡ ಕೊಳೆಯುತ್ತದೆ. ನೀರು ಕಡಿಮೆಯಾದರೆ ಗಿಡ ಒಣಗುತ್ತದೆ. ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಮಳೆ ಬಂದರೆ ಕಾಯಿಗಳು ಗಿಡದಲ್ಲೆ ಕೊಳೆತು ಬೆಳೆಗಾರ ಕೈಸುಟ್ಟುಕೊಳ್ಳಬೇಕಾಗುತ್ತದೆ.
ಇಳುವರಿ :
ಮೆಣಸಿನ (spicy chilly usages) ಗಿಡಗಳು ಪೊದೆ ರೂಪದಲ್ಲಿ ಬೆಳೆಯುತ್ತವೆ. ಸಸಿಗಳನ್ನು ನೆಟ್ಟು ಮೂರು ತಿಂಗಳ ನಂತರ ಗೊಂಚಲು ಮತ್ತು ಎಲೆಗಳ ಕಕ್ಷಗಳಲ್ಲಿ ಹೂವು ಬರುತ್ತದೆ. ಹೂ ಬಿಟ್ಟ ಒಂದುವರೆ ತಿಂಗಳ ನಂತರ ಕಾಯಿ ಆರಂಭವಾಗುತ್ತದೆ. ಆರು ತಿಂಗಳಲ್ಲಿ ಗಿಡಪೂರ್ತಿ ಕಾಯಿ ತುಂಬಿಕೊಳ್ಳುತ್ತದೆ. ಸಾಮಾನ್ಯವಾಗಿ ನಾಟಿ ಮಾಡಿದ ಒಂಭತ್ತನೆ ತಿಂಗಳಲ್ಲಿ ಮೆಣಸು ಮೊದಲ ಕಟಾವಿಗೆ ದೊರೆಯುತ್ತದೆ. ಡಿಸೆಂಬರ್ನಿಂದ ಮೇ ತಿಂಗಳವರೆಗೆ ಮೂರು ಬಾರಿ ಕಟಾವು ಮಾಡಬಹುದಾಗಿದೆ.
ಕಟಾವು :
ಕಟಾವು ಮಾಡಿದ ನಂತರ ಹೊಲದಲ್ಲಿ ಹಾಕಿ ಹಸಿ ಮೆಣಸನ್ನು ಬಿಸಿಲಿಗೆ ಒಣಗಿಸಲಾಗುತ್ತದೆ. ಮೆಣಸು ಸರಿಯಾಗಿ ಒಣಗಲು ಹದಿನೈದರಿಂದ ಇಪ್ಪತ್ತು ದಿನ ಬೇಕು. ಹತ್ತು ಎಕರೆಯಲ್ಲಿ ಬೆಳೆದ ಮೆಣಸು ಒಣಗಲು ಇಪ್ಪತ್ತು ಎಕರೆ ಜಮೀನು ಬೇಕಾಗುತ್ತದೆ. ಒಣಗುವ ಸಮಯದಲ್ಲಿ ಮಳೆ ನೀರು ಬಿದ್ದರೆ ಮೆಣಸು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಒಣಗಿದ ನಂತರ ಮೆಣಸನ್ನು ಗಾತ್ರಕ್ಕನುಗುಣವಾಗಿ ಗ್ರೇಡಿಂಗ್ ಮಾಡುತ್ತಾರೆ.
ಮಾರುಕಟ್ಟೆ :
ಸಾಮಾನ್ಯವಾಗಿ ದಲ್ಲಾಳಿಗಳಿಗೆ ಇವರು ಮಾರಾಟ ಮಾಡುತ್ತಾರೆ. ಮೆಣಸಿನ ತಳಿ, ಗಾತ್ರ ಮತ್ತು ಋತುಗಳಿಗನುಗುಣವಾಗಿ ಬೆಲೆ ನಿರ್ಧರಿತವಾಗುತ್ತದೆ. ಬಾಡಿಗೆ ನೀಡಿ ಹವಾನಿಯಂತ್ರಿತ ಗೋದಾಮುನಲ್ಲಿ ಮೂರು ವರ್ಷಗಳವರೆಗೆ ಸಂಗ್ರಹಿಸಿಡುವ ವ್ಯವಸ್ಥೆಯೂ ಇದೆ. ಹೀಗೆ ಸಂಗ್ರಹಿಸಿಟ್ಟರೆ ಬೇಡಿಕೆ ಇರುವಾಗ ಮಾರಾಟ ಮಾಡಬಹುದಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಮೆಣಸಿನ ಬೆಲೆ ಗಗನಕ್ಕೇರುತ್ತದೆ.
ಸಾಗಾಟ :
ಮೆಣಸನ್ನು ಬಿಸಿಲಿನಲ್ಲಿ ಒಣಗಿಸಿದ ನಂತರ ಅದನ್ನು ಗೋಣಿಗೆ ತುಂಬಿಸುವುದು ಸವಾಲಿನ ಕೆಲಸ. ಮೆಣಸು ತುಂಡಾಗುವುದನ್ನು ತಡೆಯುವ ನಿಟ್ಟಿನಲ್ಲಿ ಒಂದು ಕ್ವಿಂಟಾಲ್ ಮೆಣಸಿಗೆ ಎಂಟು ಲೀಟರ್ ನೀರನ್ನು ಚುಮುಕಿಸುತ್ತಾರೆ. ಹೊಲದಿಂದ ಮಾರುಕಟ್ಟೆಗೆ ಸಾಗಿಸುವಾಗ ಈ ನೀರಿನಾಂಶ ಆವಿಯಾಗಿ ಒಂದು ಕ್ವಿಂಟಾಲ್ ಇದ್ದ ಮೆಣಸು 90 ಕೆ.ಜಿ. ತೂಗುತ್ತದೆಯಂತೆ.
ಸವಾಲುಗಳು ಹಲವಾರು :
ಮೆಣಸು ಬೆಳೆಗಾರನಿಗೆ ತಾಳ್ಮೆ ಮತ್ತು ನಷ್ಟವನ್ನು ತಡೆದುಕೊಳ್ಳುವ ಶಕ್ತಿ ಇರಲೇಬೇಕು. ಮೆಣಸು ಮಾರಾಟವಾಗುವವರೆಗೂ ಲಾಭ ಬರುತ್ತದೆ ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತಿಲ್ಲ. ‘ಬಂದರೆ ಲಕ್ಷಾಧಿಪತಿ ಕೈಕೊಟ್ಟರೆ ಭಿಕ್ಷಾಧಿಪತಿ’ ಎಂಬ ಮಾತೇ ಇದೆ. ರೋಗಕ್ಕೆ ಔಷಧ ಸಿಂಪಡಿಸುವಾಗ ಒಂದೆರಡು ದಿನದಲ್ಲಿ ವ್ಯತ್ಯಯಗಳಾದರೂ ಪೂರ್ತಿ ಬೆಳೆಯೇ ನಾಶವಾಗಿ ಬಿಡುತ್ತದೆ. ಎಲ್ಲೆಡೆ ಇಳುವರಿ ಬರುವ ಸಮಯದಲ್ಲಿ ಬೆಲೆಯೂ ಕಡಿಮೆ ಇರುತ್ತದೆ. ಔಷಧಗಳನ್ನು ನೆಚ್ಚಿಕೊಂಡೇ ಬೆಳೆಯುವ ಮೆಣಸನ್ನು ಬೆಳೆಯುವುದು ಬಹುದೊಡ್ಡ ಸವಾಲಿನ ಕೆಲಸ. ಉತ್ತರ ಕರ್ನಾಟಕದಲ್ಲಿ ಗೇಣಿಗೆ ಜಮೀನು ಪಡೆದು ಮೆಣಸು ಬೆಳೆಯುವುದು ವಾಡಿಕೆಯಾಗಿದೆ. ಹಿಂದೆ ಎಕರೆಗೆ 10 – 15 ಸಾವಿರ ರೂಪಾಯಿ ಇದ್ದ ಗೇಣಿ ಈಗ 30 ಈ ಸಾವಿರದಿಂದ 60 ಸಾವಿರಕ್ಕೆ ತಲುಪಿದೆ. ಔಷಧ ಸಿಂಪಡಿಸಲು ರ ಸಾವಿರಾರು ರೂಪಾಯಿ ಬೇಕು. ಫೆಬ್ರವರಿ ಮೇವರೆಗೆ ಕೊಳವೆ ಬಾವಿಗಳು ಕೈಕೊಡುತ್ತವೆ. ಆಗ ಟ್ರಾಕ್ಟರ್ ಬಾಡಿಗೆ ಪಡೆದು, ಹಣ ನೀಡಿ ದೂರದ ಊರುಗಳಿಂದ ನೀರನ್ನು ಖರೀದಿಸುವ ಮೂಲಕ 2 ಗಿಡಗಳನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ. ಎಲ್ಲೆಡೆ ಏಕಕಾಲದಲ್ಲಿ 2 ಕಟಾವು ಆಗುವುದರಿಂದ ಕಟಾವಿಗೆ ಕೂಲಿಯಾಳುಗಳು ಸಿಗುವುದು 2 ಕಷ್ಟವಾಗುತ್ತದೆ. ಒಂದು ಎಕರೆ ಕಟಾವು ಮಾಡಲು ಕೂಲಿ ಮೊತ್ತವೇ 2 ರೂ. 12 ರಿಂದ 15 ಸಾವಿರ ದಾಟುತ್ತದೆ. ಯಾವುದೇ ಆಪತ್ತುಗಳು = ಬಾರದಿದ್ದರೆ ಎಕರೆಗೆ ರೂ. 3 ಲಕ್ಷ ಆದಾಯ ಕೈ ಸೇರುತ್ತದೆ. – ಬಳ್ಳಾರಿಯಲ್ಲಿ ಸಾಮಾನ್ಯವಾಗಿ ಹೆಚ್ಚಿನ ಬೆಳೆಗಾರರು 40 ರಿಂದ 50 ಎಕರೆ ಜಮೀನನ್ನು ಗೇಣಿಗೆ ಪಡೆದು ಮೆಣಸು ಬೆಳೆಯುತ್ತಾರೆ. ಇಳುವರಿ ಬಂದ ನಂತರ ಹಣ ನೀಡುತ್ತೇವೆಂದು ಸಾಲ ಮಾಡಿ – ಔಷಧ, ಗೊಬ್ಬರವನ್ನು ಖರೀದಿಸುತ್ತಾರೆ. ಒಂದು ವೇಳೆ ಇಳುವರಿ ಅಥವಾ ಮಾರುಕಟ್ಟೆ ಕೈಕೊಟ್ಟರೆ ದೊಡ್ಡ ಮಟ್ಟದ ಸಾಲದ ಸುಳಿಗೆ ” ಹೆಗಲು ನೀಡಬೇಕಾಗುತ್ತದೆ.
ವಿಜ್ಞಾನಿಗಳು ಏನು ಹೇಳುತ್ತಾರೆ?
ಕೃಷಿ ವಿಜ್ಞಾನಿಗಳು ಮೆಣಸು ಬೆಳೆಗಾರರಿಗೆ ಕೆಲವೊಂದು ಉಪಾಯಗಳನ್ನು ತಿಳಿಸಿದ್ದಾರೆ. ಮೆಣಸಿನಲ್ಲಿ ಸಸಿ ತಯಾರಿ ಒಂದು ಪ್ರಮುಖ ಭಾಗ. ಬೀಜಗಳನ್ನು ಬಿತ್ತಲು ನೆಲದಿಂದ 15 ಸೆಂ.ಮೀ. ಎತ್ತರವಾಗಿ ಹಾಸಿಗೆಯಂತೆ ಮಣ್ಣನ್ನು ರಾಶಿ ಮಾಡಿಕೊಂಡು ಅದಕ್ಕೆ ಸೆಗಣಿ ಹಾಕಿ ಅದರಲ್ಲಿ ಬೀಜ ಬಿತ್ತಿದರೆ ಸಸಿ ಚೆನ್ನಾಗಿ ಬೆಳೆಯುತ್ತದೆ. ಗಿಡದ ಬುಡದಲ್ಲಿ ನೀರು ನಿಲ್ಲದ ರೀತಿಯಲ್ಲಿ ಜಮೀನನ್ನು ಸಿದ್ಧಪಡಿಸಿಕೊಳ್ಳಿರಿ. ನೇರವಾಗಿ ಬೀಜಗಳನ್ನು ಬಿತ್ತುವವರು ಬೀಜಗಳನ್ನು ಆಳವಾಗಿ ಬಿತ್ತಬಾರದು. ಬೀಜ ಬಿತ್ತಿದ ನಂತರ ಒಣ ಹುಲ್ಲಿನಿಂದ ಮುಚ್ಚಿ ನೀರು ಸಿಂಪಡಿಸುತ್ತಿರಬೇಕು. ಮೊಳಕೆ ಬಂದ ನಂತರ ಹುಲ್ಲನ್ನು ತೆಗೆದು ಹಾಕಿರಿ. ನಂತರ ಸಂಜೆ ಮತ್ತು ಬೆಳಗ್ಗೆ ನೀರು ಸಿಂಪಡಿಸಬೇಕು. ಬೀಜ ಬಿತ್ತುವ ಸಮಯದಲ್ಲಿ 30 – 32 ಡಿಗ್ರಿಗಳಷ್ಟು ತಾಪಮಾನ ಇರುವಂತೆ ನೋಡಿಕೊಳ್ಳಿ ನೇರವಾಗಿ ಬಿತ್ತುವುದಕ್ಕಿಂತ ಸಸಿ ತಯಾರಿಸಿ ನಾಟಿ ಮಾಡುವುದು ಉತ್ತಮ. ಯಾವುದಾದರೂ ಒಂದು ಗಿಡಕ್ಕೆ ರೋಗ ಬಂದರೆ ತಕ್ಷಣ ಆ ಗಿಡವನ್ನು ಕಿತ್ತು ತೆಗೆಯಿರಿ. ಇಲ್ಲವಾದರೆ ಇತರ ಗಿಡಗಳಿಗೂ ಹರಡುವ ಸಾಧ್ಯತೆಗಳಿರುತ್ತವೆ.
ಈ ಬಾರಿ ಬ್ಯಾಡಗಿಗೆ ಬೇಡಿಕೆ ಕಡಿಮೆ :
ಕಳೆದ ವರ್ಷ ಕೆ.ಜಿ.ಗೆ ರೂ. 600 ರಿಂದ 800ರವರೆಗೆ ದರವಿತ್ತು. ಈ ವರ್ಷ ರೂ. 380 ರಿಂದ ರೂ. 450ಕ್ಕೆ ಇಳಿಮುಖವಾಗಿದೆ. ಆದ್ದರಿಂದ ಬ್ಯಾಡಗಿ ಬೆಳೆಗಾರ ಈ ಬಾರಿ ಹೆಚ್ಚು ಲಾಭವನ್ನು ನಿರೀಕ್ಷಿಸುವಂತಿಲ್ಲ.
ಮೆಣಸಿನ ಉಪಯೋಗ :
ಹಸಿಯಾಗಿ, ಬೇಯಿಸಿ, ಒಣಗಿದ ರೂಪದಲ್ಲಿ, ಒಣಗಿದ ರೂಪದಲ್ಲಿ, ಖಾರದ ಪುಡಿಯಾಗಿ ಹೀಗೆ ಮಸಾಲೆಗಳ ತಯಾರಿಕೆಯ ಉದ್ದೇಶದಲ್ಲಿ ಇದರ ಬಳಕೆಯಾಗುತ್ತದೆ, ಮೆಣಸಿನ ಕಾಯಿಯ ಖಾರದ ರುಚಿಗೆ ಇದರಲ್ಲಿರುವ ‘ಕ್ರಾಪ್ರೈಸಿನ್’ ಎಂಬ ರಾಸಾಯನಿಕ ಕಾರಣ, ಮೆಣಸಿನ ಫಾಟಿಗೂ ಇದೇ ಕಾರಣ. ಮೆಣಸಿನಲ್ಲಿ ಆತ್ಯಧಿಕ ವಿಟಿಮಿನ್ ‘ಎ’ ಮತ್ತು ‘ಸಿ’ ಜೀವಸತ್ವ ಇದೆ.
ಬಣ್ಣ ತಯಾರಿಗೆ ಬ್ಯಾಡಗಿ ಮೆಣಸು :
ನೈಸರ್ಗಿಕ ಬಣ್ಣ ತಯಾರಿಯಲ್ಲಿ ಮೆಣಸು ಮುಖ್ಯ ಪಾತ್ರ ವಹಿಸುತ್ತದೆ. ಅದರಲ್ಲೂ ಬ್ಯಾಡಗಿ ಮೆಣಸು ಬಣ್ಣ ತಯಾರಿಕೆಯ ಉದ್ದೇಶಕ್ಕೆ ಹೆಚ್ಚು ರಫ್ತಾಗುತ್ತದೆ. ಇದರಲ್ಲಿ ‘ಒಲಿಯೊರೆಸಿನ್’ ಅಂಶವು ಹೆಚ್ಚಿದೆ. ಅಲ್ಲ ಪ್ರಮಾಣದಲ್ಲಿ ಇತರ ಮೆಣಸುಗಳನ್ನು ಬಣ್ಣ ತಯಾರಿಗೆ ಬಳಸುತ್ತಾರೆ.
ಬಣ್ಣ ತಯಾರಿ ಹೇಗೆ? :
ಸೂಕ್ತ ದ್ರಾವಣವನ್ನು ಬಳಸಿ ‘ಒಲಿಯೊರೆಸಿನ್’ 303 ಅಂಶವನ್ನು ಹೊರ ತೆಗೆಯುತ್ತಾರೆ. ಅದನ್ನು ಶುದ್ದೀಕರಿಸಿ ಆಯಾ ದೇಶಗಳ ಆಹಾರ ಸುರಕ್ಷತಾ ಕ್ರಮಗಳನ್ನು তথ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ. ಬಣ್ಣದ ಬಳಕೆಯಲ್ಲಿ ಇದನ್ನು ಉಪಯೋಗಿಸಲಾಗುತ್ತದೆ. ಟೊಮೊಟೊ, ಕಾಳು ಮೆಣಸು. ಅರಶಿಣ, ಶುಂಠಿ, ಏಲಕ್ಕಿ. ಚೆಂಡು ಹೂವು ಮುಂತಾದವುಗಳಲ್ಲೂ ‘ಒಲಿಯೊರೆಸಿನ್’ ಅಂಶ ಇದೆ.
ಮೆಣಸಿನಿಂದ ತಯಾರಾದ ಬಣ್ಣಗಳ ಬಳಕೆ :
ಆಹಾರ ಸಂರಕ್ಷಕಗಳು. ಸಿದ್ಧ ಆಹಾರ ತಯಾರಿಕಾ ಉದ್ಯಮ, ಪಾನೀಯ, ಸಾಸ್, ಸಿಹಿ ತಿನಿಸು, ಔಷಧ ತಯಾರಿಕೆಯಲ್ಲಿ ಮೆಣಸಿನಿಂದ ತಯಾರಿಸಿದ ಬಣ್ಣಗಳನ್ನು ಬಳಸಲಾಗುತ್ತದೆ.
ಮೆಣಸಿನ ಬಣ್ಣದ ವಿಶೇಷತೆ :
ಆಹಾರ ತಯಾರಿಕೆಯಲ್ಲಿ ಮೆಣಸಿಗಿಂತ ಕಡಿಮೆ ಪ್ರಮಾಣದಲ್ಲಿ ‘ಒಲಿಯೊರೆಸಿನ್’ ಅನ್ನು ಬಳಿಸಿದರೂ ಮೆಣಸು ಬಳಸಿ ತಯಾರಿಸಿದ ಆಹಾರದಷ್ಟೇ ರುಚಿ, ಪರಿಮಳ, ಖಾರದಂಶವನ್ನು ಪಡೆಯಲು ಸಾಧ್ಯ. ಅಲ್ಲದೆ ಒಲಿಯೊರೆಸಿನ್ ಬೇಗ ಕೆಡುವುದಿಲ್ಲ. ಇದರ ಸಾಗಾಣಿಕೆ ಮತ್ತು ಸಂಗ್ರಹಣೆ ಸರಳ ಮತ್ತು ಸುಲಭ.
ಭಾರತದಲ್ಲಿ ಬಣ್ಣದ ವ್ಯಾಪಾರ :
ವಿಶ್ವದ ಒಟ್ಟು ‘ಒಲಿಯೊರೆಸಿನ್’ ತಯಾರಿಕೆಯಲ್ಲಿ ಭಾರತದ ಪಾಲು ಬರೋಬ್ಬರಿ ಶೇ. 70. ಭಾರತದ ‘ಒಲಿಯೊರೆಸಿನ್’ ವಹಿವಾಟು ರೂ. 600 ಕೋಟಿಗೂ ಅಧಿಕ. ಚೀನಾ, ಅಮೆರಿಕ ದೇಶಗಳು ಇದರ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಇತರ ದೇಶಗಳಾಗಿವೆ.
ಒಲಿಯೊರೆಸಿನ್ ಬಳಕೆ :
ಮನೆಯಲ್ಲಿ ದಿನನಿತ್ಯದ ಆಹಾರ, ಮಸಾಲೆ ಪುಡಿ ತಯಾರಿಕೆಗೆ ಒಲಿಯೊರೆಸಿನ್ ಬಳಸಬಹುದು. ಆದರೆ ಅತಿ ಕಡಿಮೆ ಪ್ರಮಾಣದಲ್ಲಿ ಬಳಸಬೇಕು. ಜನರಲ್ಲಿ ಇದರ ಬಳಕೆಯ ಬಗ್ಗೆ ಸರಿಯಾದ ಮಾಹಿತಿಯೂ ಇಲ್ಲದ ಕಾರಣ ಒಲಿಯೊರೆಸಿನ್ ಅನ್ನು ಮನೆ ಬಳಕೆಗಿಂತ ವಿವಿಧ ಉದ್ಯಮಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ.
‘ಬ್ಯಾಡಗಿ ಮೆಣಸು’ ವಿಶೇಷತೆಗಳೇನು?
ಗಾಢ ಕೆಂಪು, ಕೊಂಚ ಖಾರ, ಅಧಿಕ ಪರಿಮಳವನ್ನು ಹೊಂದಿರುವ ‘ಬ್ಯಾಡಗಿ’ಯ ತವರೂರು ದೂರದ ಮೆಕ್ಸಿಕೊ. ಈ ಮೆಣಸನ್ನು ಪೋರ್ಚುಗೀಸರು ತಮ್ಮ ಆಹಾರದ ಜೊತೆ ಗೋವಾಕ್ಕೆ ತಂದರು. ನಂತರ ಕರ್ನಾಟಕಕ್ಕೂ ಕಾಲೀರಿಸಿತು. ಈ ಮೆಣಸು ಎಲ್ಲಿಂದಲೋ ಬಂದು ಹೆಸರು ಮಾಡಿದ್ದು ಮಾತ್ರ ಬ್ಯಾಡಗಿಯಲ್ಲಿ, ‘ಬ್ಯಾಡಗಿ’ ಎಂಬುವುದು ಹಾವೇರಿ ಜಿಲ್ಲೆಯ ಒಂದು ತಾಲೂಕು. ಈ ಪ್ರದೇಶದಲ್ಲಿ ಬೆಳೆಯುವ ಮೆಣಸಿನ ಕಾಯಿಗೆ ‘ಬ್ಯಾಡಗಿ ಮೆಣಸು’ ಎಂದು ಕರೆಯುತ್ತಾರೆ. ಗುಣಮಟ್ಟಕ್ಕಾಗಿ ಇಂದಿಗೂ ‘ಬ್ಯಾಡಗಿ ಮೆಣಸಿಗೆ’ ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರಿದೆ. ಇದರ ಬೆಲೆಯೂ ತುಸು ಜಾಸ್ತಿ. ಉಳಿದ ಮೆಣಸುಗಳಂತೆ ಬೇಗ ಹಾಳಾಗುವುದಿಲ್ಲ. ರುಚಿ ಕಳೆದುಕೊಳ್ಳುವುದಿಲ್ಲ. ಬ್ಯಾಡಗಿ ಮೆಣಸು ರಫ್ತು ವಿಚಾರದಲ್ಲಿ ಭಾರತ ಚೀನಾ ದೇಶಕ್ಕೆ ಪ್ರಬಲ ಪೈಪೋಟಿಯನ್ನು ಒಡ್ಡುತ್ತಿದೆ.
ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಮೊದಲು ಡಬ್ಬಿ ಮತ್ತು ಕಡ್ಡಿ ಮೆಣಸಿನಕಾಯಿ ಮಾತ್ರ ಆವಕವಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಹೈಬ್ರಿಡ್ ತಳಿಗಳು ಕೂಡ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಬ್ಯಾಡಗಿಯ ಮೂಲ ತಳಿಯಾದ ಡಬ್ಬಿ ಮತ್ತು ಕಡ್ಡಿ ಮೆಣಸಿನಕಾಯಿ ಅವಸಾನದ ಹಂಚಿನಲ್ಲಿದೆ. ಇದೀಗ ಬ್ಯಾಡಗಿ ಮಾರುಕಟ್ಟೆಗೆ 50ಕ್ಕೂ ಹೆಚ್ಚು ತಳಿಗಳು ಬರುತ್ತಿವೆ. ಬ್ಯಾಡಗಿ ಮೆಣಸಿನಕಾಯಿ ಬೆಳೆ ಹಾವೇರಿ ಜಿಲ್ಲೆಯಲ್ಲಿ ಬಹುತೇಕ ಕಣ್ಮರೆಯಾಗಿದೆ. ಇದೀಗ ಧಾರವಾಡದ ಕುಂದಗೋಳ, ಸಂಶಿ, ಗುಡಗೇರಿ, ಗದಗ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ರಾಯಚೂರು ಜಿಲ್ಲೆಗಳ ರೈತರು ಹೆಚ್ಚಾಗಿ ಬ್ಯಾಡಗಿ ಮೆಣಸಿನಕಾಯಿಯನ್ನು ಬೆಳೆಯುತ್ತಿದ್ದಾರೆ.
ಮೆಣಸಿನಿಂದ ಲಿಪ್ಸ್ಟಿಕ್ ತಯಾರಿ
ಭಾರತದಲ್ಲಿ ಬೆಳೆಯುವ ಗುಣಮಟ್ಟದ ಬ್ಯಾಡಗಿ, ಡಬ್ಬಿ, ಕಡ್ಡಿ ಮತ್ತು ಗುಂಟೂರು ಮೆಣಸುಗಳನ್ನು ಲಿಪ್ಸ್ಟಿಕ್ ಮತ್ತು ನೈಲ್ ಪಾಲೀಶ್ ಮುಂತಾದ ಸೌಂದರ್ಯವರ್ಧಕಗಳ ತಯಾರಿಯಲ್ಲಿ ಮತ್ತು ಎಣ್ಣೆ ತಯಾರಿಯಲ್ಲಿ ಬಳಸಲಾಗುತ್ತದೆ. ಆದ್ದರಿಂದ ಭಾರತದ ಮೆಣಸುಗಳಿಗೆ ಜಾಗತೀಕ ಮಟ್ಟದಲ್ಲಿ ಬಹುಬೇಡಿಕೆಯಿದೆ.
ಔಷಧಿಯಾಗಿ ಮೆಣಸು :
ಮೆಣಸಿನಲ್ಲಿ ಔಷಧೀಯ ಗುಣಗಳು ಇವೆ. ಜೀರ್ಣಕ್ರಿಯೆಗೆ ಇದು ಸಹಕಾರಿ. ಅಜೀರ್ಣದ ಕೆಲವು ಬಗೆಯ ಚಿಕಿತ್ಸೆಯಲ್ಲಿ, ಕೀಲುನೋವುಗಳ ಉಪಶಮನಕ್ಕೆ, ಗಂಟಲು ನೋವಿಗೆ ಉಪಯೋಗಿಸುವ ಔಷಧಿಗಳಲ್ಲಿ ಉಪಯೋಗಿಸುತ್ತಾರೆ. ಕಫ, ಶೀತ ನಿವಾರಣೆಗಾಗಿ ಹಸುಗಳಿಗೆ ನೀಡುವ ಮಾತ್ರೆಗಳಲ್ಲಿ ಇದರ ಬಳಕೆಯಾಗುತ್ತದೆ.
ಹಸಿ ಮೆಣಸು ಒಣ ಮೆಣಸು :
ರಾಜ್ಯದಲ್ಲಿ ಹಸಿ ಮೆಣಸಿನಕಾಯಿ ಬೆಳೆಯುವವರು ಸಾಕಷ್ಟು ಮಂದಿ ಇದ್ದಾರೆ. ಒಣ ಮೆಣಸಿಗಾಗಿ ಬೆಳೆಯುವ ಮೆಣಸು ಮತ್ತು ಹಸಿ ಮೆಣಸು ಇವು ಬೇರೆ ಬೇರೆಯಾಗಿದೆ. ಹಸಿ ಮೆಣಸಿನ ಕಾಯಿ ಮೂರು ನಾಲ್ಕು ತಿಂಗಳ ಬೆಳೆ. ಹಸಿ ಮೆಣಸಿನಲ್ಲಿ ಉದ್ದದ ಮೆಣಸಿನಕಾಯಿ, ಚಿಕ್ಕ ಮೆಣಸು ಹೀಗೆ ಎರಡು ವಿಧಗಳಿವೆ. ಇದರಲ್ಲಿ ಚಿಕ್ಕ ಮೆಣಸು ಹೆಚ್ಚು ಖಾರವಾಗಿರುತ್ತದೆ. ಸಸಿಗಳು ನರ್ಸರಿಗಳಲ್ಲಿ ಲಭ್ಯ. ಸಾಲುಗಳ ಮೂಲಕ ನಾಟಿ ಮಾಡುತ್ತಾರೆ. ಎರಡು ಅಡಿ ಅಂತರಕ್ಕೆ ಒಂದು ಸಸಿಯಂತೆ ನಾಟಿ ಮಾಡಬೇಕು. ಹತ್ತರಿಂದ ಹದಿನೈದು ದಿನಕ್ಕೊಂದು ಭಾರಿ ಹಸಿಮೆಣಸು ಕಟಾವಿಗೆ ದೊರೆಯುತ್ತದೆ. ಭಾರತದಲ್ಲಿ ಹಸಿ ಮೆಣಸಿನ ಕಾಯಿಯನ್ನು ಹೆಚ್ಚಾಗಿ ಬಳಸುತ್ತಾರೆ.
ಮೆಣಸು ಉಪಯೋಗಿಸುವ ಮುನ್ನ
ಸಾಮಾನ್ಯವಾಗಿ ಮೆಣಸನ್ನು ನೇರವಾಗಿ ಪದಾರ್ಥಗಳಲ್ಲಿ ಉಪಯೋಗಿಸುವುದು ವಾಡಿಕೆ. 2018 ಮೆಣಸಿಗೆ ನೀರು ತಾಗಿದರೆ ಮೆಣಸು ಬೇಗ ಹಾಳಾಗುತ್ತದೆಯೆಂದು ಜಾಗೃತೆವಹಿಸುತ್ತಾರೆ. ಆದರೆ ಬೆಳೆಗಾರರೇ ಹೇಳುವಂತೆ ಮೆಣಸಿನ ಬೆಳೆಗೆ ಉಪಯೋಗಿಸುವಷ್ಟು ಔಷಧವನ್ನು ಬೇರೆ ಯಾವ ಬೆಳೆಗೂ ಬಳಸುವುದಿಲ್ಲವಂತೆ. ಮೆಣಸಿಗೆ ನಾಟಿಯಿಂದ ಕಟಾವಿನವರೆಗೂ ಪ್ರತಿ ಹಂತಗಳಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ವಿವಿಧ ಔಷಧಗಳ ಬಳಕೆಯಾಗುವುದರಿಂದ ಮಾರುಕಟ್ಟೆಯಿಂದ ತಂದ ಮೆಣಸನ್ನು ನೇರವಾಗಿ ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ಸರಿಯಾದ ಕ್ರಮವಲ್ಲ. ಮೆಣಸನ್ನು ನೀರಿನಲ್ಲಿ ಸರಿಯಾಗಿ ತೊಳೆದು ಸ್ವಚ್ಛ ಜಾಗದಲ್ಲಿ ಒಣಗಿಸಿ ಉಪಯೋಗಿಸಿರಿ. ಒಮ್ಮೆಲೆ ಕೆ.ಜಿ.ಗಟ್ಟಲೆ ಮೆಣಸನ್ನು ನೀರಿನಲ್ಲಿ ತೊಳೆದರೆ ಮೆಣಸಿನಲ್ಲಿ ಬೂಸ್ಟ್ ಬರುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಒಂದು ವಾರಕ್ಕೆ ಬೇಕಾದಷ್ಟು ಮೆಣಸನ್ನು ತೊಳೆದು ಒಣಗಿಸಿಡುವುದು ಉತ್ತಮ.
ಒಂದು ವರ್ಷ ಬೆಳೆ ಕೈಕೊಟ್ಟರೂ ಮುಂದಿನ ವರ್ಷ ಇಮ್ಮಡಿ ಲಾಭ ಕೈಸೇರುತ್ತದೆ. ಎಲ್ಲಾ ಬೆಳೆಗಳಂತೆ ಮಾರುಕಟ್ಟೆ ಸಮಸ್ಯೆ ಇಲ್ಲೂ ಇದೆ. ಆದರೆ ಮೆಣಸನ್ನು ಸುಮಾರು ಮೂರು ವರ್ಷಗಳವರೆಗೆ ಸಂರಕ್ಷಿಸಿಡಬಹುದಾಗಿದೆ. ಎಲ್ಲೆಡೆ ಶೈತ್ಯಾಗಾರಗಳ ವ್ಯವಸ್ಥೆಯಾಗಬೇಕು ಎನ್ನುತ್ತಾರೆ ಬೆಳೆಗಾರರು. ಮೆಣಸು ಬೆಳೆಯಿಂದಲೇ ಕೋಟಿಗಟ್ಟಲೆ ಸಂಪಾದಿಸುವ ಬೆಳೆಗಾರರು ರಾಜ್ಯದಲ್ಲಿದ್ದಾರೆ. ಗೇಣಿಗೆ ಭೂಮಿ ಪಡೆದು ಬೆಳೆಯುವವರ ಪ್ರಮಾಣವು ದೊಡ್ಡದಿದೆ.
ವರ್ಷದಿಂದ ವರ್ಷಕ್ಕೆ ಔಷಧಗಳ ಬೆಲೆ ಏರುತ್ತಿದ್ದು ಉತ್ತಮ ಇಳುವರಿ ಬಂದು ಮಾರುಕಟ್ಟೆ ಚೆನ್ನಾಗಿದ್ದರೆ ಮೆಣಸು ಬೆಳೆಗಾರ ಗೆಲ್ಲುತ್ತಾನೆ. ಕಟಾವು, ಮೆಣಸನ್ನು ಬೇರ್ಪಡಿಸುವ, ಒಣಗಿಸುವ ಕೆಲಸಗಳಿಗೆ ಕೂಲಿಯಾಳುಗಳ ಸಮಸ್ಯೆ ಇಲ್ಲೂ ಇದೆ. ಲಾಭ ನಷ್ಟವನ್ನು ಒಂದೇ ತಕ್ಕಡಿಯಲ್ಲಿ ತೂಗಬಲ್ಲವರು ಮೆಣಸು ಬೆಳೆಯಲ್ಲಿ ಯಶಸ್ಸನ್ನು ಪಡೆದಿದ್ದಾರೆ ಎನ್ನುವುದಂತೂ ಸತ್ಯ. ಮೆಣಸು ಭಾರತದ ವಿದೇಶಿ ವಾಹಿವಾಟಿನಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುವ ಮೂಲಕ ಭಾರತದ ಹೆಸರನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.