ಟ್ರೆಂಡಿಂಗ್ ನ್ಯೂಸ್

ಸಿಬಿಜಿ ಘಟಕ ಅಧ್ಯಯನಕ್ಕೆ ರಾಜ್ಯದಿಂದ ತಂಡ | ಕಂಪ್ರೆಸ್ಡ್ ಬಯೋ ಗ್ಯಾಸ್ ಘಟಕ ಲೋಕಾರ್ಪಣಾ ಸಮಾರಂಭದಲ್ಲಿ ಶಾಸಕ ಅಶೋಕ್ ರೈ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುತ್ತೂರಿನ ಕಂಪ್ರೆಸ್ಡ್ ಬಯೋಗ್ಯಾಸ್ ಘಟಕದ ಬಗ್ಗೆ ಬಿಬಿಎಂಪಿಯಲ್ಲೂ ಚರ್ಚೆ ನಡೆದಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಅನೇಕ ನಗರ ಸಂಸ್ಥೆಗಳಿಂದ ಪುತ್ತೂರಿನ ಘಟಕಕ್ಕೆ ಭೇಟಿ ನೀಡಲಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

chennai-shopping
maithri

ಪುತ್ತೂರು ನಗರದ ಬನ್ನೂರು ಡಂಪಿಂಗ್ ಯಾರ್ಡ್ ನಲ್ಲಿ ಕಾರ್ಯಾರಂಭಗೊಂಡ ಕಂಪ್ರೆಸ್ಡ್ ಬಯೋಗ್ಯಾಸ್ ಘಟಕವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

cng

ಪುತ್ತೂರಿನಲ್ಲಿ ಸ್ಥಾಪನೆಯಾಗಿರುವ ಕಸದಿಂದ ಗ್ಯಾಸ್ ಉತ್ಪಾದಿಸುವ ಘಟಕ ರಾಜ್ಯದ ನಗರಸಭೆಗಳ ಪೈಕಿ ಮೊದಲ ಪ್ರಯೋಗ ಎಂಬುದು ನಮಗೆಲ್ಲ ಹೆಮ್ಮಯ ವಿಚಾರ. ಬೆಂಗಳೂರಿನ ಬಿಬಿಎಂಪಿಯಲ್ಲಿ ಕೂಡ ಪುತ್ತೂರು ಘಟಕದ ವಿಚಾರ ಚರ್ಚೆಯಾಗಿದೆ. ಮುಂದಿನ ದಿನಗಳಲ್ಲಿ  ರಾಜ್ಯದ ಅನೇಕ ನಗರ ಸ್ಥಳೀಯ ಸಂಸ್ಥೆಗಳಿಂದ ಈ  ಘಟಕದ ಅಧ್ಯಯನಕ್ಕೆ ಬರಲಿದ್ದಾರೆ ಎಂದವರು ನುಡಿದರು.

ಪ್ರತೀ ದಿನ 8 ಟನ್ ಕಸವನ್ನು ಗ್ಯಾಸ್ ಆಗಿ ಪರಿವರ್ತಿಸುವ ಶಕ್ತಿ ಈ ಘಟಕಕ್ಕಿದೆ. ಈಗ 3 ಟನ್ ಮಾತ್ರ ಹಸಿ ತ್ಯಾತ್ಯ ಸಿಗುತ್ತಿದೆ ಎಂದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ 8 ಟನ್  ಹಸಿ ತ್ಯಾಜ್ಯ ಘಟಕಕ್ಕೆ ಸಿಗುವ ವ್ಯವಸ್ಥೆ ಆಗಬೇಕು. ಮಹಾಲಿಂಗೇಶ್ವರ ದೇವಸ್ಥಾನದಿಂದ ಸದ್ಯಕ್ಕೆ ಪ್ರತ್ಯೇಕ ಘಟಕ ಮಾಡುವುದು ಬೇಡ. ದೇವಳದವರು ಕೂಡ ಇಲ್ಲಿಗೆ ತಮ್ಮ ತ್ಯಾಜ್ಯವನ್ನು ಕೊಡುವುದು ಉತ್ತಮ ಎಂದರು.

ಕಸವನ್ನು ಸಿಕ್ಕ ಸಿಕ್ಕಲ್ಲಿ ಬಿಸಾಡಬಾರದು. ನಗರ ಸ್ವಚ್ಛತೆ ಅತ್ಯಂತ ಮುಖ್ಯವಾದುದು. ಈ ವಿಚಾರದಲ್ಲಿ  ನಾಗರಿಕರಲ್ಲಿ ಜಾಗೃತಿ ಇರುವುದು ಅಗತ್ಯ. ತ್ಯಾಜ್ಯ ಸಂಸ್ಕರಣೆ ಅತ್ಯಂತ ಮಹತ್ವದ್ದು. ಯಾವುದೇ ನಗರದಲ್ಲಿ ತ್ಯಾಜ್ಯ ಸಂಸ್ಕರಣೆ ವೈಜ್ಞಾನಿಕವಾಗಿ ನಡೆದರೆ ಮಾತ್ರ ಆ ನಗರ ಅಭಿವೃದ್ಧಿ ಪಥದತ್ತ ಹೋಗಲು ಸಾಧ್ಯವಿದೆ ಎಂದರು.

ಈ ಘಟಕದ ಆರಂಭಕ್ಕಾಗಿ ಎಷ್ಟು ಕಷ್ಟ ಆಗಿದೆ ಎಂಬುದು ಕೃಷ್ಣನಾರಾಯಣ ಮುಳಿಯ ಮತ್ತು ರಾಜೇಶ್ ಬೆಜ್ಜಂಗಳ ಅವರಿಗೆ ಮಾತ್ರ ಗೊತ್ತು. ಈ ಯೋಜನೆಗೆ ಸರಕಾರದಿಂದ ಜಾಗ ಮತ್ತು ಅನುಮತಿ ಮಾತ್ರ ನೀಡಲಾಗಿದೆ. ಉಳಿದ ಯಾವುದೇ ಆರ್ಥಿಕ ಸಹಾಯ ಒದಗಿಸಿಲ್ಲ. ಕೃಷ್ಣನಾರಾಯಣ ಮುಳಿಯ ಅವರು ಸುಮಾರು 3 ಕೋಟಿ ರೂ. ಸಾಲ ಮಾಡಿ ತಿಂಗಳಿಗೆ 6 ಲಕ್ಷ ರೂ. ಇಎಂಐ ಪಾವತಿಸಿ ಸಾರ್ವಜನಿಕರಿಗೆ ಪ್ರಯೋಜನ ಆಗಲಿ ಎಂದು ಕೆಲಸ ಮಾಡಿದ್ದಾರೆ ಎಂದರು.

ಸ್ವಯಂ ಪ್ರೇರಿತರಾಗಿ ಕಸ ವಿಂಗಡಿಸಿ ಕೊಡಿ: ಕಿಶೋರ್ ಕುಮಾರ್ ಪುತ್ತೂರು

ವಿಧಾನ ಪರಿಷತ್ ಸದಸ್ಯ ಕಿಶೋ‌ರ್ ಕುಮಾ‌ರ್ ಬೊಟ್ಯಾಡಿ ಅವರು ಮಾತನಾಡಿ, ಉದ್ಯಮದ ಜೊತೆಗೆ ಸ್ವಚ್ಚತಾ ಸೇವೆ ಮಾಡುತ್ತಿರುವ ಕೃಷ್ಣನಾರಾಯಣ ಮುಳಿಯ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ಮಹತ್ಮಾಗಾಂಧೀಜಿ, ಪ್ರಧಾನಿ ನರೇಂದ್ರ ಮೋದಿಯವರ ಸ್ವದೇಶಿ ಚಿಂತನೆಗೆ ಒತ್ತು ನೀಡಿದ್ದಾರೆ. ಶೌಚಾಲಯ, ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ರಸ್ತೆ ಬದಿ, ಎಲ್ಲೆಂದರಲ್ಲಿ ಕಸ ಹಾಕುವವರಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಮನೆ ಮನೆಯಲ್ಲಿ ಸ್ವಯಂ ಪ್ರೇರಿತರಾಗಿ ಕಸ ಕೊಡುವುದರೊಂದಿಗೆ ಕಸವನ್ನು ವಿಂಗಡಿಸಿ ಕೊಟ್ಟಾಗ ಕಸ ಸಂಸ್ಕರಣೆಗೆ ಪ್ರಯೋಜವಾಗಲಿದೆ. ಹೀಗೆ ಘಟಕದಲ್ಲಿ ಉತ್ಪತ್ತಿಯಾಗುವ ಗ್ಯಾಸ್ ಪರಿಸರಕ್ಕೆ ಪೂರಕವಾಗಿರುವುದು ಸಂತೋಷದ ವಿಚಾರ ಎಂದರು.

ಮಾಜಿ ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ, ಮುಳಿಯ ಗ್ರೀನ್ ಎನರ್ಜಿ ಎಲ್‌ಎಲ್‌ಪಿ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ಅಶ್ವಿನಿ ಕೃಷ್ಣ ಮುಳಿಯ, ಪುತ್ತೂರು ನಗರಸಭೆ ಪೌರಾಯುಕ್ತೆ  ವಿದ್ಯಾ ಎಂ. ಕಾಳೆ, ನಗರಸಭೆಯ ಮಾಜಿ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕö, ರೀಟ್ಯಾಪ್ ಸೊಲ್ಯೂಶನ್ ಪ್ರೆÊವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕಿ ಡಾ.ದಿವ್ಯಾ ಪ್ರಶಾಂತ್, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ಅಧ್ಯಕ್ಷ ಶಶಿಧರ ಕಿನ್ನಿಮಜಲು, ರೋಟರಿ ಸ್ವಚ್ಛಭಾರತ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ ಉಪಸ್ಥಿತರಿದ್ದರು. ಪ್ರಾಜೆಕ್ಟ್ ಡೈರೆಕ್ಟರ್  ಡಾ.ರಾಜೇಶ್ ಬೆಜ್ಜಂಗಳ ಸ್ವಾಗತಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಲೈವ್ ಜ್ಯೂಸ್ ಕೌಂಟರ್ ಆರಂಭಿಸಿದ ಪ್ರಭುಸ್! ಪ್ರಭುಸ್ ಆಗಿ ಮರುನಾಮಕರಣಗೊಂಡ ಪ್ರಭು ಚರುಂಬುರಿ!!

ಪುತ್ತೂರು: ಪ್ರಸಿದ್ಧ ಚರುಂಬುರಿ ಹಾಗೂ ಚಾಟ್ಸ್ ಸಂಸ್ಥೆ ಪ್ರಭು ಚರುಂಬುರಿ ಇದೀಗ ಪ್ರಭುಸ್ ಆಗಿ…