ಟ್ರೆಂಡಿಂಗ್ ನ್ಯೂಸ್

ಲೈವ್ ಜ್ಯೂಸ್ ಕೌಂಟರ್ ಆರಂಭಿಸಿದ ಪ್ರಭುಸ್! ಪ್ರಭುಸ್ ಆಗಿ ಮರುನಾಮಕರಣಗೊಂಡ ಪ್ರಭು ಚರುಂಬುರಿ!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪ್ರಸಿದ್ಧ ಚರುಂಬುರಿ ಹಾಗೂ ಚಾಟ್ಸ್ ಸಂಸ್ಥೆ ಪ್ರಭು ಚರುಂಬುರಿ ಇದೀಗ ಪ್ರಭುಸ್ ಆಗಿ ಮರುನಾಮಕರಣಗೊಂಡಿದ್ದು, ಶುಕ್ರವಾರ ಸಂಜೆ ಲೈವ್ ಜ್ಯೂಸ್ ಕೌಂಟರ್ ಅನ್ನು ಸಂಸ್ಥೆಯ ಆವರಣದಲ್ಲಿ ಅನಾವರಣಗೊಳಿಸಲಾಯಿತು.

chennai-shopping
Shani-pooja

ಸಂಸ್ಥೆಯ ಮಾಲಕ ರಾಜೇಶ್ ಪ್ರಭು ಮಾತನಾಡಿ, ಈಗಾಗಲೇ ನಾವು ಲೈಮ್ ಜ್ಯೂಸ್, ಚಾಟ್ಸ್ ಗಳನ್ನು ಮದುವೆ, ಸಭೆ ಮೊದಲಾದ ಸಮಾರಂಭಗಳಲ್ಲಿ ಲೈವ್ ಆಗಿ ನೀಡುತ್ತಾ ಇದ್ದೇವು. ಇದರ ಜೊತೆಗೆ ಇದೀಗ ಜ್ಯೂಸ್ ಕೌಂಟರ್ ವ್ಯವಸ್ಥೆಯನ್ನು ಆರಂಭಿಸುತ್ತಿದ್ಧೇವೆ. ಯಾವ ಫ್ಲೇವರ್ ಬೇಕೆಂದು ಮೊದಲೇ ತಿಳಿಸಿದರೆ, ಅದೇ ರೀತಿಯ ಫ್ಲೇವರ್ ಗಳುಳ್ಳ ಫ್ರೆಶ್ ಜ್ಯೂಸ್ ಅನ್ನು ನೀಡಿ, ಸಮಾರಂಭ ಸಂಭ್ರಮಕ್ಕೆ ಪಾತ್ರರಾಗಲಿದ್ದೇವೆ.

ಸಂಸ್ಥೆಯ ಆದರ್ಶ್ ಮಾತನಾಡಿ, ಕಾರ್ಯಕ್ರಮಗಳಲ್ಲಿ ಫ್ರೆಶ್ ಜ್ಯೂಸ್ ನೀಡುವ ಉದ್ದೇಶದಿಂದ ಹೊಸದಾಗಿ ಲೈವ್ ಜ್ಯೂಸ್ ಕೌಂಟರ್ ಅನ್ನು ಪ್ರಭುಸ್ ವತಿಯಿಂದ ಆರಂಭಿಸಲಾಗಿದೆ. ಫೈನಪಲ್, ಗ್ರೇಪ್ ಸೇರಿದಂತೆ ಯಾವುದೇ ರೀತಿಯ ಫ್ರುಟ್ ಜ್ಯೂಸ್ ಗಳನ್ನು ಸ್ಥಳದಲ್ಲೇ ಮಾಡಿಕೊಡಲಾಗುವುದು ಎಂದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts