ಪುತ್ತೂರು: ಪಶುಪತಿ ಲೈಟ್ಸ್, ಫ್ಯಾನ್ಸ್, ಎಲೆಕ್ಟ್ರಿಕಲ್ಸ್’ನಲ್ಲಿ ನಡೆದ ಎಂಡ್ ಆಫ್ ಸೀಸನ್ ಸೇಲ್ ನ ಲಕ್ಕಿ ಡ್ರಾವನ್ನು ಶನಿವಾರ ನಡೆಸಲಾಯಿತು.
ಡ್ರಾ ಫಲಿತಾಂಶವನ್ನು ನೆರವೇರಿಸಿಕೊಟ್ಟ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಕುಸುಮಾಧರ್ ಮಾತನಾಡಿ, ಕಳೆದ 6 ವರ್ಷಗಳಿಂದ ಪಶುಪತಿ ಲೈಟ್ಸ್ ಪುತ್ತೂರಿನಲ್ಲಿ ಉತ್ತಮ ಸೇವೆ ನೀಡುತ್ತಾ ಬಂದಿದೆ. ಪ್ರತಿವರ್ಷದಂತೆ ವರ್ಷಾಂತ್ಯಕ್ಕೆ ಎಂಡ್ ಆಫ್ ಸೀಸನ್ ಸೇಲ್ ಆಯೋಜಿಸಿದ್ದು, ಅದರಲ್ಲಿ ಕೂಪನ್ ಪಡೆದುಕೊಂಡವರಿಗೆ ಡ್ರಾ ನಡೆಸಲಾಗಿದೆ ಎಂದ ಅವರು, ಬಹುಮಾನ ಪಡೆದುಕೊಂಡವರಿಗೆ ಅಭಿನಂದನೆ ಸಲ್ಲಿಸಿದರು.
ರೋಟರಿ ಯುವ ಪೂರ್ವಾಧ್ಯಕ್ಷ ಡಾ. ಹರ್ಷ ಕುಮಾರ್ ರೈ ಮಾತನಾಡಿ, ಪಶುಪತಿ ಲೈಟ್ಸ್, ಫ್ಯಾನ್ಸ್, ಎಲೆಕ್ಟ್ರಿಕಲ್ಸ್ ವಿಭಿನ್ನವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಈ ಬಾರಿಯೂ ಗ್ರಾಹಕರಿಗೆ ಕೊಡುಗೆ ನೀಡಬೇಕು ಎನ್ನುವ ದೃಷ್ಟಿಯಿಂದ ಲಕ್ಕಿ ಕೂಪನ್ ಡ್ರಾ ನಡೆಸಿಕೊಟ್ಟಿದ್ದಾರೆ. ಮುಂದೆಯೂ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತಾಗಲಿ, ಗ್ರಾಹಕರ ವಿಶ್ವಾಸ ಗಳಿಸಲಿ ಎಂದು ಶುಭಹಾರೈಸಿದರು.
ರೋಟರಿ ಯುವ ಪೂರ್ವಾಧ್ಯಕ್ಷ ರತ್ನಾಕರ್ ರೈ, ಕ್ಲಬ್’ನ ಸಾಯಿರಾಂ ಬಾಳಿಲ, ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಶುಪತಿ ಲೈಟ್ಸ್, ಫ್ಯಾನ್ಸ್, ಎಲೆಕ್ಟ್ರಿಕಲ್ಸ್ ಮಾಲಕ ಪಶುಪತಿ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.
ಲಕ್ಕಿ ಕೂಪನ್ ಫಲಿತಾಂಶ:
ಪ್ರಥಮ ಬಹುಮಾನ ಟಿವಿಯನ್ನು ಈಶ್ವರ ನಾಯ್ಕ್ (486) ಪಡೆದುಕೊಂಡರು. ದ್ವಿತೀಯ ಬಹುಮಾನವಾಗಿ ಸೀಲಿಂಗ್ ಫ್ಯಾನನ್ನು ಚಿದಾನಂದ (088) ಹಾಗೂ ತೃತೀಯ ಬಹುಮಾನವಾಗಿ ವಾಲ್ ಫ್ಯಾನನ್ನು ರಾಮಚಂದ್ರ (043) ಬಹುಮಾನವಾಗಿ ಪಡೆದರು.
ಸಮಾಧಾನಕರ ಬಹುಮಾನವನ್ನು ಅಬ್ದುಲ್ ಖಾದರ್ (105), ಅರುಣ್ ಕುಮಾರ್ (075), ಗೌತೇಶ್ (319), ರುತನ್ ನಾಯ್ಕ್ (375), ವಿಶ್ವೇಶ್ವರ ಭಟ್ (394) ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.






















