Thursday, December 12
Share News

ತಿರುವನಂತಪುರಂ: ತಾಂತ್ರಿಕ ತೊಂದರೆಯಿಂದ ತಿರುವನಂತಪುರಂನಿಂದ ಕಾಸರಗೋಡಿಗೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹಳಿಯಲ್ಲೇ ಬಾಕಿಯಾದ ಘಟನೆ ನಡೆದಿದೆ.

ಬುಧವಾರ ತಿರುವನಂತಪುರಂ ನಿಂದ ಹೊರಟಿದ್ದ ರೈಲು ಶೊರ್ನೂರು ಸ್ಟೇಷನ್‌ ಬಳಿಕ ಮುಂದಕ್ಕೆ ಬರುತ್ತಿದ್ದಂತೆ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ಪರಿಣಾಮ ರೈಲಿನ ಬಾಗಿಲು ಮತ್ತು ಎಸಿ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಇದರಿಂದ ಪ್ರಯಾಣಕರು ರೈಲಿನೊಳಗಡೆ ಬಾಕಿಯಾಗಿದ್ದರು.

ಬಳಿಕ ಡೀಸೆಲ್ ಇಂಜಿನ್ ಬಳಸಿ ರೈಲನ್ನು ಮತ್ತೆ ಶೊರ್ನೂರು ಸ್ಟೇಷನ್ ಗೆ ಕೊಂಡೊಯ್ಯಲಾಯಿತು.

ರೈಲಿನ ತಾಂತ್ರಿಕ ತೊಂದರೆಗೆ ಕಾರಣ ಹುಡುಕಲಾಗುತ್ತದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.


Share News

Comments are closed.

Exit mobile version