ಕರ್ನಾಟಕದ ಮೂರು ವಿಧಾನಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಅವರನ್ನು ಮಣಿಸಿ ಕಾಂಗ್ರೆಸ್ನ ಸಿಪಿ ಯೋಗೇಶ್ವರ್ ಗೆಲುವು ದಾಖಲಿಸಿದ್ದಾರೆ. ಅದರೊಂದಿಗೆ, ಕೊನೇ ಕ್ಷಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಸ್ಪರ್ಧಿಸಿದ್ದ ಯೋಗೇಶ್ವರ್ ಅವರನ್ನು ಮತದಾರರು ‘ಕೈ’ ಹಿಡಿದಿದ್ದಾರೆ.
Browsing: karnataka
ವಾತಾವರಣ ವೈಪರೀತ್ಯ ಮತ್ತು ವಾಯುಭಾರದ ಕುಸಿತದಿಂದ ಕೇರಳ-ಕರ್ನಾಟಕ ತೀರದಲ್ಲಿ ತೀವ್ರ ಮಳೆ ಸುರಿಯುವ ಸಂಭವ
ಮುಂದಿನ ವರ್ಷದಿಂದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಅಥವಾ ಐಸಿಎಸ್ಇ (ICSE) ಅಡಿಯಲ್ಲಿ ಪ್ರಾರಂಭವಾಗುವ ಎಲ್ಲಾ ಶಾಲೆಗಳಿಗೆ ಕನ್ನಡ ಕಲಿಕೆಯ ಕಡ್ಡಾಯ ಹೊಸ ನಿಯಮ ಅನ್ವಯವಾಗಲಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಪ್ರತಿನಿಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರದ, ತೋವಿನಕೆರೆ ಗ್ರಾಪಂ ವ್ಯಾಪ್ತಿಯ ಬಿಸಾಡಿಹಟ್ಟಿ ಗ್ರಾಮದಲ್ಲಿ ಮೂಢನಂಬಿಕೆಯಿಂದಾಗಿ ಮಳೆ-ಚಳಿ ಲೆಕ್ಕಿಸದೇ ಊರಹೊರಗಿನ ಕೃಷ್ಣ ಕುಟೀರದಲ್ಲಿಟ್ಟಿದ್ದ, ಮೂವರು ಬಾಣಂತಿ ಮತ್ತು ಮಕ್ಕಳನ್ನು ಸೋಮವಾರ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮನೆಗೆ ಸೇರಿಸಿದ್ದಾರೆ.
ನಂದಿನಿ ಹಾಲಿನ ದರ ಹೆಚ್ಚಿಸಿ ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್ (KMF) ಮಹತ್ವದ ನಿರ್ಧಾರ ಪ್ರಕಟಿಸಿದೆ. ಕೆಎಂಎಫ್ ಮುಖ್ಯ ಕಚೇರಿಯಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸುದ್ದಿಗೋಷ್ಠಿ ನಡೆಸಿ ದರ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದರು.
2020 ರಿಂದ ವರದಿಯಾದ ಆನ್‌ಲೈನ್ ಉದ್ಯೋಗ ವಂಚನೆಗಳಲ್ಲಿ ಸುಮಾರು ಶೇ 73 ರಷ್ಟು ಬೆಂಗಳೂರಿನಲ್ಲೇ ನಡೆದಿವೆ. ಇಂಥ ಆನ್ಲೈನ್ ಉದ್ಯೋಗ ವಂಚನೆಗೆ ಒಳಗಾದವರಲ್ಲಿ ಟೆಕ್ಕಿಗಳು ಮತ್ತು ವಿದ್ಯಾರ್ಥಿಗಳು ಶೇ 20-30 ರಷ್ಟಿದ್ದರೆ ಉಳಿದವರು ನಿರುದ್ಯೋಗಿಗಳು ಮತ್ತು ಪವೀಧರರು ಎಂಬುದು ರಾಜ್ಯ ಅಪರಾಧ ದಾಖಲೆಗಳ ಬ್ಯೂರೋ (SCRB) ದತ್ತಾಂಶಗಳಿಂದ ತಿಳಿದುಬಂದಿದೆ.
ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್ ಗೆ (KMF) ಹಾಲು ಸರಬರಾಜು ಮಾಡುವ ಬಿ.ಎಂ.ಸಿ ಹಾಲಿನ ಡೈರಿಯೊಂದಲ್ಲಿ ಕೆಲಸ ಮಾಡುವ ಡೈರಿ ಗುಮಾಸ್ತ ಹಾಗೂ ಕಾರ್ಯದರ್ಶಿ ಸೇರಿಕೊಂಡು ರೈತರು ತಂದು ಕೊಡುವ ಹಾಲಿಗೆ ನೀರು ಮಿಶ್ರಣ ಮಾಡಿ ಹೆಚ್ಚುವರಿ ಹಾಲಿನ ಲೆಕ್ಕ ತೋರಿಸಿದ್ದಾರೆ. ನಂತರ ಹೆಚ್ಚುವರಿಯಾಗಿ ಬಂದ ಹಾಲಿನ ಹಣವನ್ನು ಬೇನಾಮಿ ಅಕೌಂಟ್ ಗಳಿಗೆ ವರ್ಗಾವಣೆ ಮಾಡಿ ಲಕ್ಷ ಲಕ್ಷ ಹಣ ಗುಳಂ ಮಾಡಿರುವ ಘಟನೆ ನಡೆದಿದೆ.
ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಸಂಗ್ರಹಿಸಲು ಮಹಿಳಾ ಸ್ವಸಹಾಯ ಗುಂಪುಗಳ (ಎಸ್‌ಎಚ್‌ಜಿ) ನೆರವು ಪಡೆಯುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
ಇತ್ತೀಚೆಗಷ್ಟೇ ಸ್ಯಾಂಡಲ್ವುಡ್ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರು ವಿಚ್ಛೇದನ ಪಡೆದಿದ್ದಾರೆ. ಈ ಬೆನ್ನಲ್ಲೇ ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ವಿಚ್ಛೇದನ ನಡೆದಿದೆ. ರಾಜ್ಕುಮಾರ್ ಕುಟುಂಬದ ಕುಡಿ ಯುವ ಅವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ಪತ್ನಿ ಶ್ರೀದೇವಿಯಿಂದ ಡಿವೋರ್ಸ್ ಕೋರಿ ಅವರು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇಬ್ಬರ ಮಧ್ಯೆ ಕೆಲವು ವಿಚಾರಕ್ಕೆ ಮನಸ್ತಾಪ ಬಂದಿತ್ತು ಎನ್ನಲಾಗಿದೆ. ಈ ಕಾರಣಕ್ಕೆ ಇವರು ಬೇರೆ ಆಗುತ್ತಾರೆ.
ಪುತ್ತೂರು: ಸಜಂಕಾಡಿ ಸರಕಾರಿ ಶಾಲೆಯಲ್ಲಿ ಮನೆಗೊಂದು ಗಿಡ ಎನ್ನುವ ವಿಶಿಷ್ಟ ಪರಿಕಲ್ಪನೆಯಡಿ ಪರಿಸರ ದಿನವನ್ನು ಆಚರಿಸಲಾಯಿತು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಯಶೋಧ ಅವರು ವಿಶ್ವ ಪರಿಸರ ದಿನದ ಅಂಗವಾಗಿ ಶಾಲಾ ಆವರಣದಲ್ಲಿ ಸಂಪಿಗೆ ಗಿಡ ನೆಟ್ಟು…