ಆಗುಂಬೆ ಘಾಟಿಯ 12ನೇ ತಿರುವಿನಲ್ಲಿ ಕಲ್ಲಂಗಡಿ ತುಂಬಿದ ಲಾರಿಯೊಂದು ಉರುಳಿ ಬಿದ್ದ ಘಟನೆ ನಡೆದಿದೆ.
ಅಗುಂಬೆಯಿಂದ ಉಡುಪಿ ಕಡೆಗೆ ಇಳಿಯುತ್ತಿದ್ದಾಗ ಏಕಾಏಕಿ ಲಾರಿ ಮಗುಚಿ ಬಿದ್ದಿದೆ. ಲಾರಿಯಲ್ಲಿ ತುಂಬಿದ್ದ ಕಲ್ಲಂಗಡಿ ಚೀಲಗಳು ರಸ್ತೆಗೆ ಉರುಳಿವೆ.
ಸಾವಿರಾರು ರೂಪಾಯಿ ಮೌಲ್ಯದ ಕಲ್ಲಂಗಡಿ ನಷ್ಟವಾಗಿದ್ದು, ಆಗುಂಬೆ ಪರಿಸರದ ಕೋತಿಗಳು ಕಲ್ಲಂಗಡಿ ಹಣ್ಣುಗಳಿಗೆ ಮುಗಿಬಿದ್ದಿದೆ.