Gl harusha
ಸ್ಥಳೀಯ

ಬೇಡಿಕೆ ಈಡೇರಿಕೆಯ ಭರವಸೆ: ವಿಎಗಳ ಅನಿರ್ದಿಷ್ಟಾವಧಿ ಮುಷ್ಕರ ಅಂತ್ಯ!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ 13 ದಿನಗಳಿಂದ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಮುಷ್ಕರ ಕೊನೆಗೂ ಅಂತ್ಯಗೊಂಡಿದೆ. ಕಂದಾಯ ಇಲಾಖೆಯ ಕಾರ್ಯದರ್ಶಿ ರಾಜೇಂದ್ರ ಕುಮಾ‌ರ್ ಕಠಾರಿಯಾರವರು ಮುಷ್ಕರ ನಿರತ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಪ್ರಮುಖರೊಂದಿಗೆ ಮಾತುಕತೆ ನಡೆಸಿ, ಗ್ರಾಮ ಆಡಳಿತ ಅಧಿಕಾರಿಗಳ ವಿವಿಧ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಕೊನೆಗೊಳಿಸಿರುವ ಗ್ರಾಮ ಆಡಳಿತ ಅಧಿಕಾರಿಗಳು ಫೆ.24ರಿಂದ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

Muliya
srk ladders
Pashupathi

ಕರ್ನಾಟಕ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಕರೆಯಂತೆ ಪುತ್ತೂರು, ಕಡಬ ಸೇರಿದಂತೆ ರಾಜ್ಯವ್ಯಾಪಿ ಮುಷ್ಕರ ನಡೆಸಲಾಗಿತ್ತು. ಪುತ್ತೂರಿನಲ್ಲಿ ತಾಲೂಕು ಆಡಳಿತ ಸೌಧದ ಮುಂದೆ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರ ನಿರತರಾಗಿದ್ದರು. ಶಾಸಕರು, ವಿವಿಧ ಪಕ್ಷಗಳ ಮುಖಂಡರು, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಭೇಟಿ ನೀಡಿ ಮುಷ್ಕರ ನಿರತರ ಮನವಿ ಸ್ವೀಕರಿಸಿ ಮಾತನಾಡಿದ್ದರು. ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ರಾಧಾಕೃಷ್ಣ ಕೆ.ಎನ್, ಪ್ರಧಾನ ಕಾರ್ಯದರ್ಶಿ ನರಿಯಪ್ಪ, ಕೋಶಾಧಿಕಾರಿ ಅಶ್ವಿನಿ ಮತ್ತಿತರರು ಮುಷ್ಕರದಲ್ಲಿ ಭಾಗವಹಿಸಿದ್ದರು. ಶೈಕ್ಷಣಿಕ ಉದ್ದೇಶಕ್ಕೆ ತುರ್ತು ಜಾತಿ, ಆದಾಯ ದೃಢೀಕರಣದ ಅಗತ್ಯವಿದ್ದ ವಿದ್ಯಾರ್ಥಿಗಳಿಗೆ ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟ ಮುಷ್ಕರದಿಂದಾಗಿ ಸಮಸ್ಯೆಯಾಗಬಾರದು ಸಮಸ್ಯೆಯಾಗಬಾರದು ಎನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಗಿತ್ತು. ತಾಲೂಕು ಕಚೇರಿಯಲ್ಲಿಯೂ ಈ ಕುರಿತು ಅಗತ್ಯ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರ ಕೊನೆಗೊಳಿಸಿ ಮತ್ತೆ ಕರ್ತವ್ಯಕ್ಕೆ ಹಾಜರಾಗಲಿರುವುದರಿಂದ ಜಾತಿ, ಆದಾಯ ದೃಢೀಕರಣ ಪತ್ರ ಸಹಿತ ಇತರ ದಾಖಲೆ ನೀಡಿಕೆ ವ್ಯವಸ್ಥೆ ಹಿಂದಿನಂತೆ ಮುಂದುವರಿಯಲಿದೆ.

ನಮ್ಮ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಕುರಿತು ಕಂದಾಯ ಇಲಾಖೆಯ ಕಾರ್ಯದರ್ಶಿಯವರು ಭರವಸೆ ನೀಡಿದ್ದಾರೆ. ಅವರ ಭರವಸೆ ಮೇಲೆ ನಂಬಿಕೆಯಿರಿಸಿ ಮುಷ್ಕರ ಕೊನೆಗೊಳಿಸಿ ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗಲಿದ್ದೇವೆ ಎಂದು  ಗ್ರಾಮ ಆಡಳಿತ ಜಿಲ್ಲಾಧ್ಯಕ್ಷ  ಉಮೇಶ್ ಕವಾಡಿ  ತಿಳಿಸಿದ್ದಾರೆ. 


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ