Gl harusha
ಸ್ಥಳೀಯ

ಇನ್ನು ಟ್ರಾಫಿಕ್ ಕಾನೂನು ಉಲ್ಲಂಘಿಸಿದರೆ ಹುಷಾರ್…!!ಹದ್ದಿನ ಕಣ್ಣಿನ ಅತ್ಯಾಧುನಿಕ ಪಾಕೆಟ್ ಕ್ಯಾಮೆರಾದಲ್ಲಿದೆ ಹಲವು ವೈಶಿಷ್ಟ್ಯ!

ಮಂಗಳೂರು ನಗರದಲ್ಲಿ ದ್ವಿಚಕ್ರ ವಾಹನ ಚಲಾಯಿಸುವವರು ವಾಹನ ಚಾಲನೆಯ ವೇಳೆ ಮೊಬೈಲ್ ಫೋನ್ ಬಳಸಿ ಇನ್ನು ದಕ್ಕಿಸಿಕೊಳ್ಳುವಂತಿಲ್ಲ. ಕಾರಣ ಅತ್ಯಾಧುನಿಕ ಪೋಕೆಟ್ ಕ್ಯಾಮರಾ ಪೋಲೀಸರ ಕೈಸೇರಿವೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು ನಗರದಲ್ಲಿ ದ್ವಿಚಕ್ರ ವಾಹನ ಚಲಾಯಿಸುವವರು ವಾಹನ ಚಾಲನೆಯ ವೇಳೆ ಮೊಬೈಲ್ ಫೋನ್ ಬಳಸಿ ಮಾತನಾಡುವಂತಿಲ್ಲ. ಕಾರಣ ಅತ್ಯಾಧುನಿಕ ಪೋಕೆಟ್ ಕ್ಯಾಮರಾ ಪೋಲೀಸರ ಕೈಸೇರಿವೆ.

srk ladders
Pashupathi
Muliya

ಯಾವುದೇ ಘಟನೆ ನಡೆದರೂ ಅದರ ಸಾಕ್ಷ್ಯ ಸಂಗ್ರಹಕ್ಕೆ ಹೆಣಗುತಿದ್ದ,ಪೋಲೀಸರಿಗೆ ಆಧುನಿಕ ತಂತ್ರಜ್ಞಾನದ ಉಪಕರಣಗಳು ಕೆಲಸದ ಒತ್ತಡವನ್ನು ಲಘಕರಿಸಲಿದೆ.

ದೇಶದಲ್ಲಿ ಈ ವರ್ಷ ಚಾಲ್ತಿಗೆ ಬಂದ ಬಾಡಿ ವೋರ್ನ್ ಕ್ಯಾಮರಾಗಳು ಈಗ ಪೋಲೀಸರಿಗೆ ಸಿಕ್ಕಿದ್ದು, ಇದರಿಂದ ವಾಹನ ಸಂಚಾರ ಶಿಸ್ತು ಉಲ್ಲಂಘನೆ ನಿಯಂತ್ರಣವಾಗಲಿದೆ.

ಮಂಗಳೂರು ಪೋಲೀಸ್ ವಿಭಾಗಕ್ಕೆ ಒಟ್ಟು 121 ಕ್ಯಾಮರಾಗಳು ದೊರೆತಿದ್ದು, ಈ ಪೈಕಿ 65 ಕ್ಯಾಮರಾಗಳು ಸಂಚಾರ ವಿಭಾಗದಲ್ಲಿವೆ. ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಂಗವಾಗಿ 2022ರಲ್ಲಿ 15 ಸರ್ವೈಲೈನ್ಸ್‌ ಕೆಮರಾಗಳನ್ನು ನಗರದಲ್ಲಿ ಸ್ಥಾಪಿಸಲಾಗಿತ್ತು. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯಂತೆ ಅಪರಾಧ ಪ್ರಕರಣದ ಮಹಜರು ಸಂದರ್ಭವನ್ನು ಸಂಪೂರ್ಣ ಚಿತ್ರೀಕರಿಸಬೇಕೆಂಬ ಆದೇಶ ಜ್ಯಾರಿಯಾದ ಹಿನ್ನೆಲೆಯಲ್ಲಿ ನೂತನ ಕೆಮರಾಗಳು ಪೋಲೀಸ್‌ ಕೈಸೇರುತ್ತಿದೆ.

ನಗರದಲ್ಲಿ ಹೆಲ್ಮೆಟ್ ರಹಿತ ಪ್ರಯಾಣ, ಸಂಚಾರ ಕಾನೂನು ಉಲ್ಲಂಘನೆ, ದ್ವಿಚಕ್ರದಲ್ಲಿ ಮೂವರ ಪ್ರಯಾಣ, ಮೊಬೈಲ್‌ ಫೋನ್ ಬಳಕೆ, ಸೀಟ್ ಬೆಲ್ಟ್ ಧರಿಸದೇ ಕಾರು ಚಾಲನೆ ಮುಂತಾದುವುಗಳ ಮೇಲೆ ಈ ಕೆಮರಾ ಕಣ್ಣುಗಳು ನಿಗಾ ವಹಿಸಿ ದೃಶ್ಯ ಸಾಕ್ಷ್ಯ ನೀಡುತ್ತಿದೆ. ಇದರ ಹೊರತಾಗಿ ರಾಡಾರ್ ಮೂಲಕ ಸಂಕೇತ ರವಾನಿಸುವ ಅತ್ಯಾಧುನಿಕ ಕೆಮರಾಗಳು ವಾಹನದ ಮೇಲೆ ಹದ್ದಿನ ಕಣ್ಣಿಟ್ಟಿವೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ