ಸ್ಥಳೀಯ

ಕಡಬ: ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗ ಥಳಿಸಿದ ಉಪನ್ಯಾಸಕ: ಓರ್ವ ಆಸ್ಪತ್ರೆಗೆ ದಾಖಲು!!

ಕಡಬ: ರಾಮಕುಂಜದ ಖಾಸಗಿ ಕಾಲೇಜಿನ ಉಪನ್ಯಾಸಕನೋರ್ವ ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗ ಥಳಿಸಿದ್ದು ಓರ್ವ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾದ ಘಟನೆ ನ.20 ರಂದು ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಕಡಬ: ರಾಮಕುಂಜದ ಖಾಸಗಿ ಕಾಲೇಜಿನ ಉಪನ್ಯಾಸಕನೋರ್ವ ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗ ಥಳಿಸಿದ್ದು ಓರ್ವ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾದ ಘಟನೆ ನ.20 ರಂದು ನಡೆದಿದೆ.

ವಿದ್ಯಾರ್ಥಿಗಳಿಬ್ಬರು ಕಾಲೇಜಿಗೆ ಬೈಕ್ ತಂದ ವಿಚಾರದಲ್ಲಿ ಉಪನ್ಯಾಸಕನೊಬ್ಬ ಪ್ರಶ್ನಿಸಿ ಬುಧವಾರ ದಿನ ಮುಂಜಾನೆ ವೇಳೆ ಹೊಡೆದಿರುವುದಾಗಿ ಆರೋಪಿಸಲಾಗಿದೆ.

SRK Ladders

ದ್ವಿತೀಯ ಪಿಯುಸಿ,ರಾಮಕುಂಜದ ವಿದ್ಯಾರ್ಥಿ ಕವನ್ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿ.ವಿದ್ಯಾರ್ಥಿಯ ಹೇಳಿಕೆ ಪ್ರಕಾರ ಎಂಟು ವಿದ್ಯಾರ್ಥಿಗಳಿಗೆ ಹೊಡೆದಿರುವುದಾಗಿ ಆರೋಪ ವ್ಯಕ್ತಪಡಿಸಿದ್ದಾರೆ.

ತಡ ರಾತ್ರಿ ಕಡಬ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವ ಸಂದರ್ಭದಲ್ಲಿ ಉಪನ್ಯಾಸಕನೂ ಆಗಮಿಸಿದ್ದು, ಸ್ಥಳದಲ್ಲಿದ್ದ ಯುವಕರ ಗುಂಪು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಆಸ್ಪತ್ರೆಯೊಳಗೆ ಕೆಲ ಹೊತ್ತು ಭಾರಿ ಮಾತಿನ ಚಕಮಕಿ ನಡೆದಿತ್ತು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2