ಧಾರ್ಮಿಕಸ್ಥಳೀಯ

ಕನ್ನಡ ರಥಕ್ಕೆ ಪುತ್ತೂರಿನಲ್ಲಿ ಸಂಭ್ರಮದ ಸ್ವಾಗತ

ಪುತ್ತೂರು: ಪ್ರಪಂಚದಲ್ಲೇ ಅತೀ ಶ್ರೀಮಂತ ಭಾಷೆ ಕನ್ನಡ. ಇದರ ಹಬ್ಬ ಅಥವಾ ಆಚರಣೆಯಿಂದ ಭಾಷೆಯ ಶ್ರೀಮಂತಿಕೆ ಮುಂದಿನ ಪೀಳಿಗೆಗೆ ತಲುಪುತ್ತದೆ ಎಂದು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಹೇಳಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪ್ರಪಂಚದಲ್ಲೇ ಅತೀ ಶ್ರೀಮಂತ ಭಾಷೆ ಕನ್ನಡ. ಇದರ ಹಬ್ಬ ಅಥವಾ ಆಚರಣೆಯಿಂದ ಭಾಷೆಯ ಶ್ರೀಮಂತಿಕೆ ಮುಂದಿನ ಪೀಳಿಗೆಗೆ ತಲುಪುತ್ತದೆ ಎಂದು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಹೇಳಿದರು.

ಡಿ. 20, 21, 22ರಂದು ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕುರಿತಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ ಭುವನೇಶ್ವರಿಯ ರಥವು ಪುತ್ತೂರಿಗೆ ಶುಕ್ರವಾರ ಮಧ್ಯಾಹ್ನ ಕನ್ನಡ ರಥ ಆಗಮಿಸಿದ್ದು, ಭುವನೇಶ್ವರಿ ತಾಯಿಯ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

SRK Ladders

ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಶ್ರೀನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಜ್ಯೋತಿ ಹೊತ್ತ ರಥ ಸಿದ್ಧಾಪುರದ ಭುವನಗಿರಿಯಿಂದ ಹೊರಟಿದ್ದು, ಇದೀಗ ಪುತ್ತೂರು ತಲುಪಿದೆ. ಕನ್ನಡ ನಾಡು ನುಡಿ ರಕ್ಷಿಸುವ ಹಿನ್ನೆಲೆಯಲ್ಲಿ ಪ್ರತಿ ಗ್ರಾಮಕ್ಕೆ ರಥ ಬರುತ್ತಿದೆ. ನಾಳೆ ಬೆಳಿಗ್ಗೆ ಬೆಳ್ತಂಗಡಿ, ಸಂಜೆ ಸುಳ್ಯ, ಬಳಿಕ ಕೊಡಗು ಪ್ರವೇಶಿಸಲಿದೆ. ಬಳಿಕ ಸಕ್ಕರೆ ನಗರಿ ಮಂಡ್ಯದಲ್ಲಿ ಅದ್ದೂರಿ ಸಮಾವೇಶ ಜರುಗಲಿಕ್ಕಿದೆ ಎಂದರು.

ತಹಸೀಲ್ದಾರ್ ಪುರಂದರ ಹೆಗ್ಡೆ, ತಾಪಂ ಇಓ ನವೀನ್ ಕುಮಾರ್ ಭಂಡಾರಿ, ಪುತ್ತೂರು ನಗರಸಭೆ ಉಪಾಧ್ಯಕ್ಷ ಬಾಲಚಂದ್ರ, ಪೌರಾಯುಕ್ತ ಮಧು ಎಸ್. ಮನೋಹರ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಐತ್ತಪ್ಪ ನಾಯ್ಕ್, ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಿಮ್ಮಪ್ಪ ಪೂಜಾರಿ, ರಜಾಕ್ ಬಪ್ಪಳಿಗೆ ಮಹಮ್ಮದ್ ಬಡಗನ್ನೂರು, ಸುಬ್ಬಪ್ಪ ಕೈಕಂಬ, ಹರಿಣಾಕ್ಷಿ ಕೇವಳ, ಕೃಷ್ಣಪ್ರಸಾದ್ ಆಳ್ವ, ಎಂ.ಜಿ. ರಫೀಕ್, ಮಲ್ಲಿಕಾ ಜೆ. ರೈ ಮೊದಲಾದವರು ಉಪಸ್ಥಿತರಿದ್ದು, ಪುಷ್ಪಾರ್ಚನೆಗೈದರು.

ಕಸಾಪ ಪುತ್ತೂರು ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3