ಕರಾವಳಿರಾಜ್ಯ ವಾರ್ತೆಸ್ಥಳೀಯ

ಮುಂಬೈಯಲ್ಲಿ ‘ವಾ ಗಳಿಗೆಡ್ ಪುಟುದನಾ’ ಯಶಸ್ವಿ ಪ್ರದರ್ಶನ

ಕೊಲ್ಲಿ ರಾಷ್ಟ್ರದ ತುಳು ರಂಗ ಭೂಮಿಯಲ್ಲಿ ಚೊಚ್ಚಲ ಪ್ರದರ್ಶನದಲ್ಲೇ ಜನಮನ‌ಸೂರೆಗೊಂಡ ಗಮ್ಮತ್ ಕಲಾವಿದರ "ವಾ ಗಳಿಗೆಡ್ ಪುಟುದನಾ" ತುಳು ಸಾಂಸಾರಿಕ ಹಾಸ್ಯಮಯ ನಾಟಕ - ಮುಂಬೈ ಮಹಾನಗರದಲ್ಲಿ ಭಾನುವಾರ 27 ಅಕ್ಟೋಬರ್ 2024 ರಂದು ತಮ್ಮ ದ್ವಿತೀಯ ಪ್ರದರ್ಶನದೊಂದಿಗೆ ಅಭೂತಪೂರ್ವ ಯಶಸ್ವಿ ದಾಖಲೆಗಳೊಂದಿಗೆ ಮುಂಬೈ ತುಳುವರ ಮನಗೆದ್ದು ಹೊಸ ಭಾಷ್ಯ ಬರೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಕೊಲ್ಲಿ ರಾಷ್ಟ್ರದ ತುಳು ರಂಗ ಭೂಮಿಯಲ್ಲಿ ಚೊಚ್ಚಲ ಪ್ರದರ್ಶನದಲ್ಲೇ ಜನಮನ‌ಸೂರೆಗೊಂಡ ಗಮ್ಮತ್ ಕಲಾವಿದರ “ವಾ ಗಳಿಗೆಡ್ ಪುಟುದನಾ” ತುಳು ಸಾಂಸಾರಿಕ ಹಾಸ್ಯಮಯ ನಾಟಕ – ಮುಂಬೈ ಮಹಾನಗರದಲ್ಲಿ ಭಾನುವಾರ 27 ಅಕ್ಟೋಬರ್ 2024 ರಂದು ತಮ್ಮ ದ್ವಿತೀಯ ಪ್ರದರ್ಶನದೊಂದಿಗೆ ಅಭೂತಪೂರ್ವ ಯಶಸ್ವಿ ದಾಖಲೆಗಳೊಂದಿಗೆ ಮುಂಬೈ ತುಳುವರ ಮನಗೆದ್ದು ಹೊಸ ಭಾಷ್ಯ ಬರೆಯಿತು.

ಕನ್ನಡ ಸಂಘ ಸಯನ್ ಮುಂಬೈ ಆಶ್ರಯದಲ್ಲಿ, ಅಧ್ಯಕ್ಷ ರಾದ ಶ್ರೀ ಡಾ. ಎಂ.ಜೆ. ಪ್ರವೀಣ್ ಭಟ್ ರವರ ಗೌರವಾನ್ವಿತ ನೇತೃ ತ್ವ ದಲ್ಲಿ ಮುಂಬೈನ ಕುರ್ಲಾ ಬಂಟರ ಭವನದಲ್ಲಿ ಪ್ರದರ್ಶನಗೊಂಡ ಈ ಯಶಸ್ವಿ ಕಲಾ ಕುಸುಮ 1,000ಕ್ಕೂ ಹೆಚ್ಚು ತುಳು ನಾಟಕ ಅಭಿಮಾನಿಗಳ ಮನಸೂರೆಗೊಂಡು ಮುಕ್ತ ಕಂಠದಿಂದ ಪ್ರಶಂಸಲ್ಪಟ್ಟಿತು. ಈ ಐತಿಹಾಸಿಕ ನಾಟಕ ಪ್ರದರ್ಶನವು ದುಬೈ ಕಲಾವಿದರರಿಂದ ಮುಂಬೈಯಲ್ಲಿ ಪ್ರದರ್ಶಿಸಲ್ಪಟ್ಟ ಪ್ರಥಮ ತುಳು ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಅಪಾರ ಪ್ರಶಂಸೆಯನ್ನು ಪಡೆಯಿತು.

SRK Ladders

ದುಬೈಯ ಸುಪ್ರಸಿದ್ದ ನಾಟಕ ನಿರ್ದೇಶಕ “ರಂಗ ಸಾರಥಿ” ವಿಶ್ವನಾಥ್ ಶೆಟ್ಟಿ ಯವರ ಪರಿಕಲ್ಪನೆಯಲ್ಲಿ ಮೂಡಿರುವ ಈ ಯಶಸ್ವಿ ಕಲಾಕುಸುಮ ಮುಂಬೈ ಮಹಾನಗರಡಾ ತುಳು ರಂಗಭೂ ಮಿಯಲ್ಲಿ ಹೊಸ ಮುನ್ನುಡಿ ಬರೆಯಿತು. ಸಂದೀಪ್ ಶೆಟ್ಟಿ ರಾಯಿ ರಚನೆಯಲ್ಲಿ ಮೂಡಿಬಂದಿರುವ ಈ ನಾಟಕಕ್ಕೆ ಶುಭಕರ್ ಬೆಳಪು ಸಂಗೀತ ನೀಡಿ್ದರೆ , ವಿಶೇಷವಾಗಿ ಹಿರಿಯ ರಂಗ ಕರ್ಮಿ ಶ್ರೀ ಜಗದೀಶ್ ಶೆಟ್ಟಿ ಕೆಂಚನಕೆರೆಯವರ ರಂಗಾನುಭವ ಮತ್ತು ಸಂಪೂರ್ಣ ಮಾರ್ಗದರ್ಶನ ನಾಟಕದ ಧ್ವನಿ ಮತ್ತು ಬೆಳಕುಗಳೆರಡನ್ನೂ ಯಶಸ್ವಿಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿತು .

ವಾಸ್ತವ ಕಾಲಕ್ಕೆ ಅನ್ವಯವಾಗುವ ಪೋಷಕರ ಕಡೆಗಣಿಸುವ ಮಕ್ಕಳು ಮತ್ತು ಸ್ತ್ರೀ ಶೋಷಣೆ ವಿಚಾರಗಳ ಮೇಲೆ ಆಧಾರಿತವಾಗಿರುವ ಈ ನಾಟಕದಲ್ಲಿ ನವಿರಾದ ಹಾಸ್ಯ ಹಾಗೂ ವಾಸ್ತವ ಕಥಾ ಹಂದರವನ್ನು ಒಳಗೊಂಡಿದ್ದು,ಹಾಸ್ಯ ಕಲಾವಿದರು ನೆರೆದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸುವಲ್ಲಿ ಯಶಸ್ವಿಯಾದರೆ , ತಂಡದ ಹಿರಿಯ ಪೋಷಕ ಕಲಾವಿದರು ಪ್ರೇಕ್ಷಕರನ್ನು ತಮ್ಮ ನೈಜ ಕರುಣಾಭಾವ ಅಭಿನಯದ ಮೂಲಕ ಮಂತ್ರ ಮುಗ್ದಗೊಳಿಸಿದ್ದು ನಿಜ.

ಮುಂಬೈ ಯ ಸುಪ್ರಸಿದ್ದ ಗಣ್ಯರುಗಳು ಹಾಗೂ ಉದ್ಯಮಿಗಳ ಉಪಸ್ಥಿತಿಯಲ್ಲಿ ಸಂಪನ್ನಗೊಂಡ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕೇಮಾರು ಈಶ ವಿಠಲದಾಸ ಸ್ವಾಮೀಜಿಯವರು ಆಶೀರ್ವಚಿಸಿದರು ಮತ್ತು ಜಿಲ್ಲೆಯ ಸುಪ್ರಸಿದ್ದ ಹಾಸ್ಯ ಕಲಾವಿದ ಶ್ರೀ ಸತೀಶ್ ಬಂದಲೆ, ನಾಟಕ ತಂಡಗಳ ಯಜಮಾನರೂ , ಕಲಾಪೋಷಕರೂ ಆಗಿರುವ “ಸವ್ಯಸಾಚಿ” ಶ್ರೀ ಲಯನ್ ಕಿಶೋರ್ ಡಿ. ಶೆಟ್ಟಿ, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸತೀಶ್ ಪೂಜಾರಿ, ಯವರುಗಳು ಪಾಲ್ಗೊಂಡು ಸಮಾರಂಭದ ಮೆರುಗನ್ನು ಹೆಚ್ಚಿಸಿದರು .

ಈ ಸಂದರ್ಭದಲ್ಲಿ ಗಮ್ಮತ್ ಕಲಾವಿದೆರ್ ಯುಎಇ ವತಿಯಿಂದ ಸಯನ್ ಕನ್ನಡ ಸಂಘ ಮುಂಬೈನ ಅಧ್ಯಕ್ಷರೂ, ಸಂಘಟಕರೂ ಆದ ಶ್ರೀ ಡಾ. ಎಂ.ಜೆ. ಪ್ರವೀಣ್ ಭಟ್ ರವರನ್ನು ತಂಡಕ್ಕೆ ನೀಡಿದ ಅವಕಾಶವನ್ನು ಸ್ಮರಿಸಿ ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಗಮ್ಮತ್ ಕಲಾವಿದೆರ್ ಯುಎಇ ತಂಡದ ಅಧ್ಯಕ್ಷರಾದ ಶ್ರೀಮತಿ ಲವೀನಾ ಫೆರ್ನಾಂಡಿಸ್ ರವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದು ಮುಂಬೈಯಲ್ಲಿ ನಾಟಕದ ಯಶಸ್ವಿ ಪ್ರದರ್ಶನಕ್ಕೆ ಕಾರಣಕರ್ತರಾದ ಕನ್ನಡ ಸಂಘದ ಅಧ್ಯಕ್ಷರು , ಸರ್ವ ಸದಸ್ಯರು ಮತ್ತು ಕಲಾಪೋಷಕರ ಕೊಡುಗೆಯನ್ನು ಮತ್ತು ಒದಗಿಸಿದ ಅವಕಾಶವನ್ನು ಸ್ಮರಿಸಿ ಅಭಿನಂದಿಸಿದರು. ಮುಂದೆಯೂ ತುಳು , ಭಾಷೆ ಮತ್ತು ತುಳುನಾಡಿನ ಸಂಸ್ಕೃತಿಯ ಉಳಿವಿಗಾಗಿ ಈ ಭಾಗದಲ್ಲಿ ಅವಿರತ ಕಾರ್ಯಕ್ರಮಗಳ ಸಹಯೋಗವನ್ನು ಸರ್ವ ಧರ್ಮದ ಕಲಾಪೋಷಕರಿಂದ ಬಯಸಿದರು. ಈ ಸಂದರ್ಭದಲ್ಲಿ ಕ ನ್ನಡ ಸಂಘ ಸಾಯನ್ ವತಿಯಿಂದ ಅವರನ್ನೂ ಕೂಡ ಪ್ರೀತಿಪೂರ್ವಕವಾಗಿ ಗೌರವಿಸಲಾಯಿತು.

ಗಮ್ಮತ್ ಕಲಾವಿದರ್ ಯುಎಇ ಪ್ರತಿಭಾನ್ವಿತ ಹವ್ಯಾಸಿ ಕಲಾವಿದರಾದ ಶ್ರೀಮತಿ ಸುವರ್ಣ ಸತೀಶ್, ವಾಸುಕುಮಾರ್ ಶೆಟ್ಟಿ, ಗಿರೀಶ್ ನಾರಾಯಣ್, ಸಮಂತಾ ಗಿರೀಶ್, ದೀಪ್ತಿ ದಿನರಾಜ್, ಐರಿನ್ ಸಿಂಥಿಯಾ ಮೆಂಡೋನ್ಸಾ , ಜಾನೆಟ್ , ಮೊನಪ್ಪ ಪೂಜಾರಿ, ರಮೇಶ್ ಸುವರ್ಣ, ಗೌತಮ್ ಬಂಗೇರ, ಜಸ್ಮಿತಾ ವಿವೇಕ್, ಸನ್ನಿಧಿ ವಿಶ್ವನಾಥ್ ಶೆಟ್ಟಿ, ರೂಪೇಶ್ ಶೆಟ್ಟಿ, ಸಂದೀಪ್ ಬರ್ಕೆ, ಜೇಶ್ ಬಯಾರ್, ದೀಕ್ಷಾ ರೈ, ಹರೀಶ್ ಕಾಮತ್, ಗಣೇಶ್ ಕೋಟ್ಯಾನ್ ಯವರ ಪಾತ್ರಗಳು ನಿಜಕ್ಕೂ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಿಸಿತು, ವಿನ್ಸಿ ಲೋಬೋ ರವರು ರಂಗದಲ್ಲಿ ಸಹಕರಿಸಿದರು .

ಮುಂದಿನ ದಿನಗಳಲ್ಲಿ ಗಮ್ಮತ್ ಕಲಾವಿದೆರ್ ತಂಡದಿಂದ ಯಶಸ್ವಿಯಾಗಿ ಮೂಡಿಬಂದಿರುವ ಈ ಚೊಚ್ಚಲ ನಾಟಕ “ವಾ ಗಳಿಗೆಡ್ ಪುಟುದನಾ” ಮಂಗಳೂರು ಮಹಾನಗರಗಳಲ್ಲಿ ಪ್ರದರ್ಶನಗೊಳ್ಳುವ ನಿರೀಕ್ಷೆಯನ್ನು ವಿವಿಧ ಸಂಘಟಕರು ಈಗಾಗಲೇ ವ್ಯಕ್ತಪಡಿಸಿದ್ದಾರೆ


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

1 of 5