ಕರಾವಳಿಸ್ಥಳೀಯ

ಲಾರಿಯಲ್ಲಿ ಮಲಗಿದ ಸ್ಥಿತಿಯಲ್ಲಿ ಚಾಲಕನ  ಶವ ಪತ್ತೆ!

ಮರವಂತೆ ಬೀಚ್ ಬದಿಯ ವರಾಹ ಸ್ವಾಮಿ ದೇವಸ್ಥಾನದ ಎದುರಿನ ಹೆದ್ದಾರಿಯಲ್ಲಿ ತಾಂತ್ರಿಕ ದೋಷದ ಕಾರಣ 6 ದಿನಗಳಿಂದ ನಿಂತಿದ್ದ ಲಾರಿಯೊಂದರಲ್ಲಿ ಚಾಲಕನ ಶವ ಮಲಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆ.

ಈ ಸುದ್ದಿಯನ್ನು ಶೇರ್ ಮಾಡಿ

ತ್ರಾಸಿ ಮರವಂತೆ ಬೀಚ್ ಬದಿಯ ವರಾಹ ಸ್ವಾಮಿ ದೇವಸ್ಥಾನದ ಎದುರಿನ ಹೆದ್ದಾರಿಯಲ್ಲಿ ತಾಂತ್ರಿಕ ದೋಷದ ಕಾರಣ 6 ದಿನಗಳಿಂದ ನಿಂತಿದ್ದ ಲಾರಿಯೊಂದರಲ್ಲಿ ಚಾಲಕನ ಶವ ಮಲಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಹಿಂದೆ ಕುಂದಾಪುರ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದ ಲಾರಿ ಚಾಲಕ ಬುಧವಾರ ಬೆಳಗ್ಗೆ ಮೃತಪಟ್ಟಿರುವ ಶಂಕೆ ಇದೆ. ಸ್ಥಳಕ್ಕೆ ಗಂಗೊಳ್ಳಿ ಠಾಣಾ ಧಿಕಾರಿ ಬಸವ ಕನಶೆಟ್ಟಿ, ಸಹಾಯಕ ಠಾಣಾಧಿಕಾರಿ ಅಮೃತೇಶ್‌, ಸಿಬ್ಬಂದಿಗಳಾದ ನಾಗರಾಜ್ ಶೇರಿರ್ಗಾ, ರಿತೇಶ್ ಮುನಿಯಾಲ್ ರಾಘವೇಂದ್ರ ಮುಖ್ಯ ಪೇದೆ ನಾಗರಾಜ್ ನಾಯಕವಾಡಿ, ಆಂಬ್ಯುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ಮಿದಲಾದವರು ಭೇಟಿ ನೀಡಿ ಶವ ಸಾಗಾಟಕ್ಕೆ ಸಹಕರಿಸಿದರು. ಸದ್ಯ ಶವವನ್ನು ಮಣಿಪಾಲ ಆಸ್ಪತ್ರೆಯ ಶವ ಶೀತಲೀಕರಣ ಘಟಕದಲ್ಲಿ ಇರಿಸಲಾಗಿದೆ. ಮೃತ ಚಾಲಕನ ಹೆಸರು ಆಂಧ್ರಪ್ರದೇಶ ಮೂಲದ ಬಾಬು ರಾಯ್ ಎಂದು ಜತೆಯಲ್ಲಿದ್ದ ಕ್ಲೀನರ್ ಶಿವಾಸ್ ತಿಳಿಸಿದ್ದಾರೆ.

SRK Ladders

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3