ಕರಾವಳಿಸ್ಥಳೀಯ

ಯಕ್ಷಗಾನ ಅರ್ಥಧಾರಿ ಗುಡ್ಡಪ್ಪ ಬಲ್ಯ ಅವರಿಗೆ ಸನ್ಮಾನ

ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮತ್ತು ಸೌಹಾರ್ದ ಯಕ್ಷಗಾನ ಸಮಿತಿ  ಸಹಯೋಗದಲ್ಲಿ   ಶ್ರೀ ಶಾರದಾ ಕಲಾಮಂಟಪದಲ್ಲಿ ಜರಗಿದ 30ನೇ ವರ್ಷದ ಶ್ರೀ ಶಾರದೋತ್ಸವ  ಕಾರ್ಯಕ್ರಮದಲ್ಲಿ ಉಪನ್ಯಾಸಕ, ಯಕ್ಷಗಾನ ಅರ್ಥಧಾರಿ ಗುಡ್ಡಪ್ಪ ಬಲ್ಯರನ್ನು ಸನ್ಮಾನಿಸಲಾಯಿತು.  

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಿನಂಗಡಿ : ರಾಮನಗರದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಮತ್ತು ಸೌಹಾರ್ದ ಯಕ್ಷಗಾನ ಸಮಿತಿ  ಸಹಯೋಗದಲ್ಲಿ   ಶ್ರೀ ಶಾರದಾ ಕಲಾಮಂಟಪದಲ್ಲಿ ಜರಗಿದ 30ನೇ ವರ್ಷದ ಶ್ರೀ ಶಾರದೋತ್ಸವ  ಕಾರ್ಯಕ್ರಮದಲ್ಲಿ ಉಪನ್ಯಾಸಕ, ಯಕ್ಷಗಾನ ಅರ್ಥಧಾರಿ ಗುಡ್ಡಪ್ಪ ಬಲ್ಯ ಅವರನ್ನು ಸನ್ಮಾನಿಸಲಾಯಿತು.

ಸೌಹಾರ್ದ ಯಕ್ಷಗಾನ ಸಮಿತಿಯ ಅಧ್ಯಕ್ಷ ಉಮೇಶ ಶೆಣೈ ಯನ್, ಶಾರದೋತ್ಸವ ಸಮಿತಿಯ ಕಾರ್ಯಾಧ್ಯಕ್ಷ  ರಾಮಚಂದ್ರ ಮಣಿಯಾಣಿ, ಅಧ್ಯಕ್ಷ ಚಂದ್ರಶೇಖರ ಮಡಿವಾಳ, ಖಜಾಂಜಿ ಕಂಗ್ವೆ ವಿಶ್ವನಾಥ ಶೆಟ್ಟಿ ಇವರು  ಗುಡ್ಡಪ್ಪ ಬಲ್ಯ ಅವರನ್ನು ಸನ್ಮಾನಿಸಿದರು.

SRK Ladders

ಕಾರ್ಯದರ್ಶಿ ದೀಪಕ್ ಪೈ,ಸಹ ಕಾರ್ಯದರ್ಶಿ ಗಣೇಶ್ ಭಂಡಾರಿ, ಭೂಸೇನೆಯ ಮಾಜಿ ಯೋಧರಾದ ವಿಶ್ವನಾಥ ಶೆಣೈ, ಹಿರೇಬಂಡಾಡಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಕೆ. ಶ್ರೀಧರ ಭಟ್, ಜಯಂತ ಪುರೋಳಿ, ಹರಿರಾಮಚಂದ್ರ, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಗುಡ್ಡಪ್ಪ ಬಲ್ಯ ತನ್ನ ಯಕ್ಷಗಾನ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಿದ  ಗುರುಹಿರಿಯರಿಗೆ ಸಂದ ಗೌರವ ಎಂದು ತಿಳಿಸಿದರು.

ಕಲಾವಿದ ಹರೀಶ್ ಆಚಾರ್ಯ ಬಾರ್ಯ ಅಭಿನಂದನಾ ನುಡಿಗಳಾನ್ನಡಿದರು. ನಿವೃತ್ತ ಉಪನ್ಯಾಸಕ  ಮಹಾಲಿಂಗೇಶ್ವರ ಭಟ್ ಪೆರಿಯಡ್ಕ ಸನ್ಮಾನ ಪತ್ರ ವಾಚಿಸಿದರು. ಕಾಳಿಕಾಂಬ ಯಕ್ಷಗಾನ ಸಂಘದ ಕಾರ್ಯದರ್ಶಿ ಶ್ರೀಪತಿ ಭಟ್ ಸ್ವಾಗತಿಸಿ, ಉಪಾಧ್ಯಕ್ಷ ಸಂಜೀವ ಪಾರೆಂಕಿ ವಂದಿಸಿದರು.

ಬಳಿಕ ಚಕ್ರವ್ಯೂಹ  ತಾಳಮದ್ದಳೆ ಜರಗಿತು. ಸೌಹಾರ್ದ ಯಕ್ಷಗಾನ ಸಮಿತಿಯ ಸಂಚಾಲಕ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3