ಮೋದಿ, ಯೋಗಿಯ ಹೊಗಳಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್!!
G L Acharya Jewellers
ದೇಶಸ್ಥಳೀಯ

ಮೋದಿ, ಯೋಗಿಯ ಹೊಗಳಿದ್ದಕ್ಕೆ ಪತ್ನಿಗೆ ತ್ರಿವಳಿ ತಲಾಖ್!!

Karpady sri subhramanya
ವಿವಾಹಿತ ಮುಸ್ಲಿಂ ಮಹಿಳೆಯೊಬ್ಬರು ಅಯೋಧ್ಯೆಯಳ್ಳಿ ನಡೆದ ಅಭಿವೃದ್ಧಿ ಕೆಲಸಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದಕ್ಕೆ ಕೋಪಗೊಂಡ ಪತಿ ತನ್ನ ಪತ್ನಿಗೆ “ತ್ರಿವಳಿ ತಲಾಖ್” ನೀಡಿರುವ ಪ್ರಸಂಗವೊಂದು ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

Karpady jathre

ವಿವಾಹಿತ ಮುಸ್ಲಿಂ ಮಹಿಳೆಯೊಬ್ಬರು ಅಯೋಧ್ಯೆಯಳ್ಳಿ ನಡೆದ ಅಭಿವೃದ್ಧಿ ಕೆಲಸಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದಕ್ಕೆ ಕೋಪಗೊಂಡ ಪತಿ ತನ್ನ ಪತ್ನಿಗೆ “ತ್ರಿವಳಿ ತಲಾಖ್” ನೀಡಿರುವ ಪ್ರಸಂಗವೊಂದು ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ ಬೆಳಕಿಗೆ ಬಂದಿದೆ.
ಇದೀಗ ಘಟನೆಗೆ ಸಂಬಂಧಿಸಿ ಮಹಿಳೆ ತನ್ನ ಪತಿ, ಅತ್ತೆ, ಮಾವ ಸೇರಿದಂತೆ ಕುಟುಂಬ ಸದಸ್ಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

SRK Ladders

ಮಹಿಳೆ ನೀಡಿರುವ ದೂರಿನಲ್ಲಿ “ನಾನು ಬಹ್ರೈಚ್‌ನ ಥಾನಾ ಜರ್ವಾಲ್ ರಸ್ತೆಯ ಮೊಹಲ್ಲಾ ಸರೈ ನಿವಾಸಿಯಾಗಿದ್ದು. ಕಳೆದ ಡಿಸೆಂಬರ್ 13, 2023 ರಂದು, ನಾನು ಅಯೋಧ್ಯೆಯ ಕೊತ್ವಾಲಿ ನಗರದ ಮೊಹಲ್ಲಾ ದೆಹಲಿ ದರ್ವಾಜಾ ನಿವಾಸಿಯಾಗಿರುವ ಇಸ್ಲಾಂ ಅವರ ಮಗ ಅರ್ಷದ್ ಅವರನ್ನು ವಿವಾಹವಾಗಿದ್ದು. ನನ್ನ ತಂದೆ ಇಬ್ಬರ ಒಪ್ಪಿಗೆಯ ಮೇರೆಗೆ ಹುಡುಗನ ಮನೆಯವರ ಆಸೆಯಂತೆ ಅದ್ದೂರಿಯಾಗಿ ಮದುವೆ ಮಾಡಿಸಿಕೊಟ್ಟಿದ್ದರು. ಇದಾದ ಬಳಿಕ ಊರಿಗೆ ಹೋದಾಗ ಅಯೋಧ್ಯಾ ಧಾಮದ ರಸ್ತೆಗಳು, ಸೌಂದರ್ಯೀಕರಣ, ಅಭಿವೃದ್ಧಿ, ಅಲ್ಲಿನ ವಾತಾವರಣ ಇಷ್ಟವಾಯಿತು. ಈ ಕುರಿತು ನಾನು ನನ್ನ ಪತಿಯ ಮುಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದೇನೆ ಇಷ್ಟಕ್ಕೆ ಕೋಪಗೊಂಡ ಪತಿ ಹಾಗೂ ಮನೆಮಂದಿ ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಅಲ್ಲದೆ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದು ಇದಾದ ಬಳಿಕ ಪತಿ ನನ್ನ ಬಳಿ ಮೂರೂ ಬಾರಿ ತಲಾಖ್ ಹೇಳಿ ನನ್ನನ್ನು ತವರು ಮನೆಗೆ ಕಳುಹಿಸಿಕೊಟ್ಟಿರುವುದಾಗಿ ದೂರು ನೀಡಿದ್ದಾಳೆ.

ಸದ್ಯ ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಮಹಿಳೆಯ ಪತಿ ಅರ್ಷದ್, ಅತ್ತೆ ರೈಶಾ, ಮಾವ ಇಸ್ಲಾಂ, ಅತ್ತಿಗೆ ಕುಲ್ಸುಮ್, ಸೋದರ ಮಾವ ಸೇರಿದಂತೆ ಎಂಟು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Kerala Astrologer

Related Posts

ಪುತ್ತೂರು ಪಿಎಲ್‌ ಡಿ ಬ್ಯಾಂಕ್ ಚುನಾವಣೆ;ಎರಡು ನಾಮಪತ್ರ ತಿರಸ್ಕೃತ!! ಅಧಿಕಾರಿಯನ್ನು ತರಾಟೆಗೆತ್ತಿಕೊಂಡ ಶಾಸಕರು.!

ಪುತ್ತೂರು ಪಿಎಲ್ ಡಿ ಬ್ಯಾಂಕ್‌ನ ಚುನಾವಣೆಯಲ್ಲಿ ಸ್ಪರ್ದಿಸಲು ಸಲ್ಲಿಸಲಾಗಿದ್ದ ನಾಮಪತ್ರಗಳ ಪೈಕಿ…

ನೆಲ ಜಲ ಸಂರಕ್ಷಣೆ ಉಪನ್ಯಾಸ;  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಜೂರುಪಂಜ ಒಕ್ಕೂಟ ಆಯೋಜನೆ

ನೆಲ ಜಲ ಸಂರಕ್ಷಣೆ ಉಪನ್ಯಾಸ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಜೂರುಪಂಜ…