ಸ್ಥಳೀಯ

ಸ.ಹಿ.ಪ್ರಾ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ | ಹಿರಿಯರ ತ್ಯಾಗ ಬಲಿದಾನದ ಫಲ ಸ್ವಾತಂತ್ರ್ಯದ ಹಿಂದಿದೆ: ಯಶೋಧ

ಸ.ಹಿ ಪ್ರಾ ಶಾಲೆ ಸಜಂಕಾಡಿ ಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಸ.ಹಿ ಪ್ರಾ ಶಾಲೆ ಸಜಂಕಾಡಿ ಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು.

ಶಾಲಾ ಎಸ್ .ಡಿ.ಎಂ.ಸಿ ಅಧ್ಯಕ್ಷೆ ಯಶೋಧ ರಾಷ್ಟ್ರ ಧ್ವಜಾರೋಹಣಗೈದು, ಹಿರಿಯರ ಪರಿಶ್ರಮ,ತ್ಯಾಗದ ಫಲವಾಗಿ ನಾವು ಇಂದು ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದೇವೆ ಎಂದರು.

SRK Ladders

ಬಳಿಕ ನಡೆದ ತಿರಂಗಾ ಯಾತ್ರೆಗೆ ಎಸ್‌.ಡಿ‌.ಎಂ.ಸಿ‌ ಉಪಾಧ್ಯಕ್ಷ ರಝಾಕ್ ಚಾಲನೆ ನೀಡಿ ಶುಭಹಾರೈಸಿದರು.

ತಿರಂಗಾ ಯಾತ್ರೆಯಲ್ಲಿ ಭಾರತ ಮಾತೆ, ಗಾಂಧೀಜಿ , ಒನಕೆ ಓಬವ್ವ , ಸುಭಾಶ್ಚಂದ್ರ ಭೋಸರ ವೇಷ ತೊಟ್ಟು ವಿದ್ಯಾರ್ಥಿಗಳು ಹೆಜ್ಜೆ ಹಾಕಿದ್ದು ಆಕರ್ಷಕವಾಗಿತ್ತು.

ಬಳಿಕ ಎಸ್ .ಡಿ.ಎಂ.ಸಿ ಅಧ್ಯಕ್ಷೆ ಯಶೋಧರವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆ ಗಳಲ್ಲಿ ವಿಜೇತರಾದವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಂದ ದೇಶ ಭಕ್ತಿ ಗಾಯನ ಕಾರ್ಯಕ್ರಮ ನಡೆಯಿತು.

ಶಾಲಾ ಪ್ರಭಾರ ಮುಖ್ಯಗುರು ಸುಮಲತಾ ಪಿ.ಕೆ ಸ್ವಾಗತಿಸಿ, ಶಿಕ್ಷಕಿ‌ ಶಶಿಕಲಾ ವಂದಿಸಿದರು. ಶಿಕ್ಷಕ ಗಣೇಶ ನಾಯಕ್ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2