ಸ್ಥಳೀಯ

ರಸ್ತೆ ಬದಿ ಬೆಳೆದು ನಿಂತಿದ್ದ ಪೊದೆಗಳ ತೆರವುಗೊಳಿಸಿ, ಶ್ರಮದಾನ | ಸ್ವಾತಂತ್ರ್ಯೋತ್ಸವ ದಿನದಂದು ಸಂಪ್ಯ – ಒಳತ್ತಡ್ಕ ರಸ್ತೆಯಲ್ಲಿ ಶ್ರಮದಾನ

tv clinic
ಸಂಪ್ಯ: ಸ್ವಾತಂತ್ರ್ಯೋತ್ಸವ ದಿನದಂದು ಶ್ರೀ ಕೃಷ್ಣ ಯುವಕ ಮಂಡಲ, ನೇರಳಕಟ್ಟೆ ಶ್ರೀ ಅಮ್ಮನವರ ದೇವಸ್ಥಾನ, ಶ್ರೀ ಚಕ್ರರಾಜರಾಜೇಶ್ವರಿ ದೇವಸ್ಥಾನದ ವತಿಯಿಂದ ಸಂಪ್ಯದಿಂದ ವಳತ್ತಡ್ಕ ಸಂಪರ್ಕಿಸುವ ರಸ್ತೆಯ ಶುಚಿತ್ವ ಕಾರ್ಯ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಸಂಪ್ಯ: ಸ್ವಾತಂತ್ರ್ಯೋತ್ಸವ ದಿನದಂದು ಶ್ರೀ ಕೃಷ್ಣ ಯುವಕ ಮಂಡಲ, ಶ್ರೀ ಅಮ್ಮನವರ ಸೇವಾ ಸಮಿತಿ ಮತ್ತು ರೋಟರಿ ಕ್ಲಬ್ ಪುತ್ತೂರು ಸ್ವರ್ಣ ವತಿಯಿಂದ ಸಂಪ್ಯದಿಂದ ವಳತ್ತಡ್ಕ ಸಂಪರ್ಕಿಸುವ ರಸ್ತೆಯ ಶುಚಿತ್ವ ಕಾರ್ಯ ನಡೆಯಿತು.

ಇದೇ ಸಂದರ್ಭ ಕೊಲ್ಯ ಎಂಬಲ್ಲಿ ಮಳೆ ನೀರು ಹರಿದು ಅಪಾಯಕಾರಿ ಸ್ಥಿತಿಯಲ್ಲಿದ್ದ ರಸ್ತೆ ಬದಿಗೆ ಕೆಂಪು ಕಲ್ಲು ಹಾಸಲಾಯಿತು.

akshaya college

ರಸ್ತೆ ಬದಿ ಬೆಳೆದು ನಿಂತಿದ್ದ ಪೊದೆಗಳನ್ನು ಯಂತ್ರದ ಸಹಾಯದಿಂದ ತೆರವು ಮಾಡಲಾಯಿತು. ಕಸ-ಕಡ್ಡಿ, ತ್ಯಾಜ್ಯಗಳನ್ನು ತೆಗೆದು, ಸಂಚಾರಕ್ಕೆ ತೊಡಕಾಗದಂತೆ ಶುಚಿತ್ವ ಮಾಡಲಾಯಿತು.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಪಿ.ಎಸ್.ಐ. ಜಂಬೂರಾಜ್ ಹಾಗೂ ರೋಟರಿ ಕ್ಲಬ್ ಸ್ವರ್ಣ ಅಧ್ಯಕ್ಷ ಸುರೇಶ್ ಪಿ. ಅವರು ಶುಚಿತ್ವ ಕಾರ್ಯಕ್ಕೆ ಚಾಲನೆ ನೀಡಿದರು.

ಶ್ರೀ ಕೃಷ್ಣ ಯುವಕ ಮಂಡಲದ ಅಧ್ಯಕ್ಷ ಸಂತೋಷ ಸುವರ್ಣ ಮೇರ್ಲ, ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣೆಯ ಸಹಾಯಕ ನಿರೀಕ್ಷಕ ಶ್ರೀಧರ್, ಹೆಚ್.ಸಿ. ಪ್ರವೀಣ್ ರೈ, ಮತ್ತು ಠಾಣೆಯ ಸಿಬ್ಬಂದಿಗಳು ಲೋಕೇಶ್ ರೈ ಮೇರ್ಲ, ರಾಘವೇಂದ್ರ ರೈ ಮೇರ್ಲ, ಧನುಷ್ ಹೊಸಮನೆ, ಜಗನ್ನಾಥ ಪಿ, ಹರೀಶ ಪಿ, ಯೋಗೀಶ್ ಪಿ, ರಮೇಶ್ ಮೇಲಿನಕಾನ, ನವೀನ್ ನ್ಯಾಕ್ ಅಡ್ಡ, ಸೇಸಪ್ಪ ನ್ಯಾಕ್ ಅಡ್ಕ, ಧನುಷ್ ಪೆಲತ್ತಡಿ, ಕಂಬಳತ್ತಡ್ಡ ಅಂಗನವಾಡಿ ಶಿಕ್ಷಕಿ ಶ್ಯಾಮಲ, ಸಹಶಿಕ್ಷಕಿ ಪುಪ್ಪ, ಬಾಲವಿಕಾಸ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ರವೀಂದ್ರ ಶೆಟ್ಟಿ ಕಂಬಳತ್ತಡ್ಡ ಸಹಿತ ಹಲವಾರು ಉಪಸ್ಥಿತರಿದ್ದರು.

ಜಯಂತ ಶೆಟ್ಟಿ ಕಂಬಳತ್ತಡ್ಡ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 117