ಸ್ಥಳೀಯ

ಸ್ವತಂತ್ರ ಭಾರತದಲ್ಲಿ ಹೊಸ ಸಾಧನೆಗಳ ಪಥ ನಮ್ಮ ಮುಂದಿದೆ: ಎಸ್.ಕೆ.ಆನಂದ್ | ಧ್ವಜಾರೋಹಣ ನೆರವೇರಿಸಿದ ವರ್ಷದ ವ್ಯಕ್ತಿ ಪುರಸ್ಕೃತ ಅವಿನಾಶ್ ಪೂಜಾರಿ | ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಪುತ್ತೂರು: ಸ್ವಾತಂತ್ರ್ಯ ಪಡೆದ ಈ 77 ವರ್ಷಗಳಲ್ಲಿ ಭಾರತ ಅನೇಕ ಮೈಲಿಗಲ್ಲುಗಳನ್ನು ಕ್ರಮಿಸಿದೆ. ಇನ್ನಷ್ಟು ಹೊಸ ಸಾಧನೆಗಳ ಪಥ ನಮ್ಮ ಮುಂದಿದೆ ಎಂದು ಮಾಸ್ಟರ್ ಪ್ಲಾನರಿ ಮಾಲಕ ಆನಂದ್ ಕುಮಾರ್ ಎಸ್.ಕೆ. ಹೇಳಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸ್ವಾತಂತ್ರ್ಯ ಪಡೆದ ಈ 77 ವರ್ಷಗಳಲ್ಲಿ ಭಾರತ ಅನೇಕ ಮೈಲಿಗಲ್ಲುಗಳನ್ನು ಕ್ರಮಿಸಿದೆ. ಇನ್ನಷ್ಟು ಹೊಸ ಸಾಧನೆಗಳ ಪಥ ನಮ್ಮ ಮುಂದಿದೆ ಎಂದು ಮಾಸ್ಟರ್ ಪ್ಲಾನರಿ ಮಾಲಕ ಆನಂದ್ ಕುಮಾರ್ ಎಸ್.ಕೆ. ಹೇಳಿದರು.

SRK Ladders

ಪುತ್ತೂರು ಮಾಸ್ಟರ್ ಪ್ಲಾನರಿ, ಪುತ್ತೂರು ರೋಟರ್ಯಾಕ್ಟ್ ಕ್ಲಬ್, ಎಂ.ವಿ. ಸೋಷಲ್ ಸರ್ವಿಸ್, ಪುತ್ತೂರು ಸರಕಾರಿ ಆಸ್ಪತ್ರೆ ಸಹಯೋಗದಲ್ಲಿ ನೆಹರುನಗರ ಮಾಸ್ಟರ್ ಪ್ಲಾನರಿ ಆವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಹಾಗೂ ಆರೋಗ್ಯ ಮಾಹಿತಿ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೊದಲು ಜಾತಿಯಿಂದ ವ್ಯಕ್ತಿಯಿಂದ ಗುರುತಿಸುತ್ತಿದ್ದರು. ಆದರೆ ಇಂದು ವ್ಯಕ್ತಿಯ ಕೆಲಸದಿಂದ ಗುರುತಿಸುತ್ತಿದ್ದಾರೆ. ಇದು ಸ್ವತಂತ್ರ ಭಾರತದಲ್ಲಿ ಆದ ಬೆಳವಣಿಗೆ ಎಂದರು.

ಪ್ರತಿವರ್ಷ ಉತ್ತಮ ಕೆಲಸಗಾರರನ್ನು ಗುರುತಿಸುವ ಕೆಲಸ ಮಾಡುತ್ತೇವೆ. ಅವರ ಪ್ರಾಮಾಣಿಕ, ನಿಷ್ಠೆಯನ್ನು ಗುರುತಿಸಿ, ಅವರಿಗೆ ಕೊಡುಗೆ ನೀಡುವುದರ ಜೊತೆಗೆ ವರ್ಷದ ವ್ಯಕ್ತಿ ಎಂದು ಗುರುತಿಸಲಾಗುತ್ತದೆ ಎಂದರು.

ವರ್ಷದ ವ್ಯಕ್ತಿಯಾಗಿ ಸಂಸ್ಥೆಯಿಂದ ಗುರುತಿಸಲ್ಪಟ್ಟ ಅವಿನಾಶ್ ಪೂಜಾರಿ ಅವರು ಧ್ವಜಾರೋಹಣ ನೆರವೇರಿಸಿದರು.

ಆರೋಗ್ಯ ಇಲಾಖೆಯ ತಾರನಾಥ ಮಾತನಾಡಿ, ಆರೋಗ್ಯ ತುಂಬಾ ಅಗತ್ಯ.‌ ಮುನ್ನೆಚ್ಚರಿಕಾ ಕ್ರಮವಾಗಿ ಆಗಿಂದಾಗ್ಗೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮಾತ್ರವಲ್ಲ, ನಮ್ಮ ಆವರಣವನ್ನು ಶುಚಿಯಾಗಿಡಬೇಕು. ಇದಕ್ಕೆ ಮಾಸ್ಟರ್ ಪ್ಲಾನರಿ ಮಾದರಿ. ದೊಡ್ಡ ಸಂಸ್ಥೆಯಾದರೂ, ನೂರಾರು ಮಂದಿ ನೌಕರರು ಇದ್ದರು, ಆವರಣವನ್ನು ಶುಚಿಯಾಗಿ ಇಟ್ಟಿದ್ದಾರೆ ಎಂದು ಶ್ಲಾಘಿಸಿದರು.

ಅಧ್ಯಕ್ಷತೆ ವಹಿಸಿದ್ದ ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ಸುಬ್ರಮಣಿ ಮಾತನಾಡಿ, ಸ್ವಾತಂತ್ರ್ಯೋತ್ಸವದ ಹಬ್ಬದ ದಿನದಂದೇ ಆರೋಗ್ಯ ಕಾಳಜಿಯ ದೃಷ್ಟಿಯಿಂದ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಸಭಾಪತಿ ಶ್ರೀಧರ್ ಕೆ., ಹಿರಿಯ ಸಿಬ್ಬಂದಿ ಎಂ.ಎನ್. ಪ್ರಭಾಕರ್ ಶುಭಹಾರೈಸಿದರು.

ಡಾ. ಶ್ವೇತಾ ಅವರು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.

ಸಂಸ್ಥೆಯ ನಿರ್ದೇಶಕರಾದ ಅಕ್ಷಯ್ ಎಸ್.ಕೆ., ಅರ್ಜುನ್ ಎಸ್.ಕೆ., ಆಕಾಶ್ ಎಸ್.ಕೆ., ಹಿರಿಯ ಸಿಬ್ಬಂದಿ ಚಂದ್ರಶೇಖರ್ ಭಟ್, ಸ್ನೇಹಾ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಿಇಓ ರೇಖಾ ಆನಂದ್, ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಸದಸ್ಯರು, ಮಾಸ್ಟರ್ ಪ್ಲಾನರಿಯ ಅಂಗಸಂಸ್ಥೆಗಳ ನೌಕರರು ಉಪಸ್ಥಿತರಿದ್ದರು.

ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನ ಎಡ್ವರ್ಡ್ ವಂದಿಸಿದರು. ಸಂಸ್ಥೆಯ ರಿಸೆಪ್ಷನಿಸ್ಟ್ ಮೀನಾಕ್ಷಿ, ಎಚ್.ಆರ್. ಕಿಶೋರ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2