ದೇಶಸ್ಥಳೀಯ

ನೀರಜ್ ಚೋಪ್ರಾ – ಮನು ಭಾಕರ್ ವಿವಾಹ ಪ್ರಸ್ತಾಪ?? ಒಲಿಂಪಿಕ್ ಪದಕ ವಿಜೇತರ ಪೋಷಕರ ಮಾತು ಹೀಗಿದೆ…

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾರೊಂದಿಗೆ ಭಾರತೀಯ ಶೂಟರ್ ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್ ಅವರು ಮಾತುಕತೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವದಂತಿಗಳಿಗೆ ಕಾರಣವಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾರೊಂದಿಗೆ ಭಾರತೀಯ ಶೂಟರ್ ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್ ಅವರು ಮಾತುಕತೆ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವದಂತಿಗಳಿಗೆ ಕಾರಣವಾಗಿದೆ.

ಕೆಲವರು, ಮನು ಭಾಕರ್ ಅವರ ತಾಯಿಯು ನೀರಜ್ ಚೋಪ್ರಾರು ತಮ್ಮ ಪುತ್ರಿಗೆ ಸಮರ್ಪಕವಾಗಿ ಹೊಂದಾಣಿಕೆಯಾಗಬಹುದೇ ಎಂದು ಮೌಲ್ಯಮಾಪನ ಮಾಡುತ್ತಿದ್ದಾರೆ ಎಂದು ತಮಾಷೆ ಮಾಡಿದ್ದಾರೆ.

SRK Ladders

ಈ ವೈರಲ್ ವಿಡಿಯೋಗಳ ಕುರಿತು ಪ್ರತಿಕ್ರಿಯಿಸಿರುವ ಮನು ಭಾಕರ್ ತಂದೆ ರಾಮ್ ಕಿಶನ್ ಭಾಕರ್, ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಮನು ಭಾಕರ್ ಇನ್ನೂ ತೀರಾ ಕಿರಿಯಳಾಗಿದ್ದು, ಆಕೆಯ ವಿವಾಹದ ಕುರಿತು ನಮ್ಮ ಕುಟುಂಬ ಇದುವರೆಗೆ ಯಾವುದೇ ಯೋಚನೆ ಮಾಡಿಲ್ಲ. ಮನು ಭಾಕರ್ ಅವರ ವೃತ್ತಿ ಜೀವನ ಹಾಗೂ ವೈಯಕ್ತಿಕ ಬೆಳವಣಿಗೆಯ ಕುರಿತು ಮಾತ್ರ ನಮ್ಮ ಕುಟುಂಬವು ಗಮನ ಕೇಂದ್ರೀಕರಿಸಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ನೀರಜ್ ಚೋಪ್ರಾರೊಂದಿಗೆ ತಮ್ಮ ಪತ್ನಿ ನಡೆಸಿರುವ ಮಾತುಕತೆ ಕುರಿತು ಪ್ರತಿಕ್ರಿಯಿಸಿರುವ ರಾಮ್ ಕಿಶನ್ ಭಾಕರ್, “ಮನುವಿನ ತಾಯಿಯು ನೀರಜ್ ಚೋಪ್ರಾರನ್ನು ತಮ್ಮ ಪುತ್ರನಂತೆ ಭಾವಿಸಿದ್ದಾರೆ. ನಮ್ಮ ನಡುವೆ ಕೌಟುಂಬಿಕ ಬಾಂಧವ್ಯವಿದ್ದು, ಇದರಲ್ಲಿ ಯಾವುದೇ ಪ್ರೇಮದ ಸಂಗತಿ ಒಳಗೊಂಡಿಲ್ಲ” ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ನೀರಜ್ ಚೋಪ್ರಾರ ಚಿಕ್ಕಪ್ಪ, “ನೀರಜ್ ಚೋಪ್ರಾ ಪದಕ ತಂದ ನಂತರ ಹೇಗೆ ಇಡೀ ದೇಶಕ್ಕೆ ಪರಿಚಿತರಾದರೋ, ಹಾಗೆಯೇ ಅವರು ವಿವಾಹವಾದ ನಂತರ ಆ ಸಂಗತಿ ಎಲ್ಲರಿಗೂ ತಿಳಿಯಲಿದೆ” ಎಂದು ಹೇಳಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3