ಟ್ರೆಂಡಿಂಗ್ ನ್ಯೂಸ್ವಿಶೇಷಸ್ಥಳೀಯ

ಹೌದು ‘ಹುಲಿ’ಯಾ ಇದು ರಮ್!! ಹುಲಿ ಬ್ರ್ಯಾಂಡಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟ ಮೊದಲ ಕನ್ನಡದ ಮದ್ಯ ಬೆಲ್ಲದ ರಮ್!! ಸ್ವಾತಂತ್ರ್ಯ ದಿನಕ್ಕೆ ಮದ್ಯಪ್ರಿಯರಿಗೆ ಗುಡ್ ನ್ಯೂಸ್!!!

ಬೆಲ್ಲದಿಂದ ತಯಾರಿಸಿದ ಮೊದಲ ದೇಶೀಯ ರಮ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಬೆಲ್ಲದಿಂದ ತಯಾರಿಸಿದ ಮೊದಲ ದೇಶೀಯ ರಮ್ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ.

ಮದ್ಯಪ್ರಿಯರಿಗೆ ಗುಡ್ ನ್ಯೂಸ್. ಅದು ಸ್ವಾತಂತ್ರ್ಯೋತ್ಸವದ ದಿನವೇ. ಹೊಸ ಮದ್ಯದ ಬ್ರ್ಯಾಂಡ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ದೇಶೀಯವಾಗಿ ಉತ್ಪಾದನೆಯಾಗುವ ಮೊದಲ ರಮ್ ಇದಾಗಿದೆ ಎನ್ನುವುದು ವಿಶೇಷ.

SRK Ladders

ಬೆಲ್ಲದಿಂದ ತಯಾರಿಸಿದ ಮದ್ಯ ಇದು ಎನ್ನುವುದು ಮತ್ತೊಂದು ವಿಶೇಷ. ಮದ್ಯಪ್ರಿಯರು ಬೆಲ್ಲದ ರಮ್’ನ ಸ್ವಾದ ಆಸ್ವಾದಿಸಲು ಸಿದ್ಧರಾಗಿದ್ದಾರೆ.

ರಾಜ್ಯದಲ್ಲಿ ಆಗಸ್ಟ್ 15ರಂದು ಹುಲಿ ಹೆಸರಿನಲ್ಲಿ ರಮ್ ಮಾರುಕಟ್ಟೆಗೆ ಬರಲಿದೆ. ಬೆಲ್ಲದಿಂದ ತಯಾರಿಸಿದ ಈ ಮೈಸೂರು ಸ್ಪೆಷಲ್ ಬ್ರಾಂಡ್ ಸವಿಯಲು ಮದ್ಯಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

ಇನ್ನು ಈ ಹುಲಿ ಹೆಸರಿನ ರಮ್ ಮೈಸೂರಿನ ನಂಜನಗೂಡಿನಲ್ಲಿ ಉತ್ಪಾದನೆಯಾಗಿದೆ. ಬರೋಬ್ಬರಿ 8 ವರ್ಷಗಳ ಸತತ ಪರಿಶ್ರಮದ ನಂತರ ಇದೀಗ ಕನ್ನಡ ಹೆಸರಿನ ಮದ್ಯ ಮಾರುಕಟ್ಟೆಗೆ ಬಿಡುಗಡೆಯಾಗಲು ಸಜ್ಜಾಗಿದೆ.

750ಎಂಎಲ್ ಬಾಟಲಿಯು 630 ರೂಪಾಯಿ ಮೂಲ ಬೆಲೆಯನ್ನು ಹೊಂದಿದೆ. ಅಬಕಾರಿ ಸುಂಕ ಮತ್ತು ಚಿಲ್ಲರೆ ಮಾರ್ಜಿನ್‌ಗಳ ಕಾರಣ ಜನರಿಗೆ 2,800 ರೂಪಾಯಿಗೆ ಲಭ್ಯವಿರುತ್ತದೆ.

ಮೈಸೂರಿನ ನಂಜನಗೂಡು ತಾಲೂಕಿನಲ್ಲಿರುವ ಭಾರತದ ಮೊದಲ ಮೈಕ್ರೋ-ಡಿಸ್ಟಿಲರಿಯಲ್ಲಿ ಇದನ್ನ ತಯಾರಿಸಲಾಗುತ್ತದೆ. ಸುಮಾರು 2,000 ಬಾಟಲಿಗಳನ್ನು ಒಳಗೊಂಡಿರುವ ಮೊದಲ ಬ್ಯಾಚ್ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಈ ರಮ್ ಮೊದಲು ಬೆಂಗಳೂರು ಮತ್ತು ಮೈಸೂರು ಮಾರುಕಟ್ಟೆಗಳಲ್ಲಿ ಲಭ್ಯವಾಗಲಿದೆ.

ಭಾರತದಲ್ಲಿ ಹಲವು ಬ್ರ್ಯಾಂಡ್ ರಮ್‌ಗಳಿವೆ. ರಮ್ ಹುಟ್ಟಿಕೊಂಡಿದ್ದು ಕೆರಿಬಿಯನ್ ರಾಷ್ಟ್ರದಲ್ಲಾದರೂ ಭಾರತದಲ್ಲಿ ಅತೀ ಹೆಚ್ಚು ಬಳಕೆಯಾಗುತ್ತಿದೆ. ಇದೀಗ ಭಾರತದಲ್ಲೇ ತಯಾರಾದ ರಮ್ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಾಲಿಡಲು ಸಜ್ಜಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3