ಧಾರ್ಮಿಕಸ್ಥಳೀಯ

ಉಪ್ಪಿನಂಗಡಿಯಲ್ಲಿ ಮಹಾಭಾರತ ಸರಣಿ ತಾಳಮದ್ದಳೆ ರಾಯಭಾರ, ರಣವೀಳ್ಯ ಮತ್ತು ಸನ್ಮಾನ

ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘ ಉಪ್ಪಿನಂಗಡಿ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 43ನೇ ಕಾರ್ಯಕ್ರಮವಾಗಿ ಸಂಜಯ ರಾಯಭಾರ ಮತ್ತು ರಣವೀಳ್ಯ ತಾಳಮದ್ದಳೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ
ಸಂಘ ಉಪ್ಪಿನಂಗಡಿ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 43ನೇ ಕಾರ್ಯಕ್ರಮವಾಗಿ ಸಂಜಯ ರಾಯಭಾರ ಮತ್ತು ರಣವೀಳ್ಯ ತಾಳಮದ್ದಳೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.

akshaya college

ಯಕ್ಷಗಾನ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಇವರನ್ನು ಯಕ್ಷಗಾನ ಸಂಘಟನೆಗಾಗಿ ಕಾರ್ಯಕ್ರಮದ ಪ್ರಾಯೋಜಕರಾದ ಅಮ್ಮಿ ಗೌಡ ನಾಲ್ಗುತ್ತು ಗೌರವಿಸಿದರು. ಯಕ್ಷಗಾನ ಕಲಾವಿದ, ಉಪನ್ಯಾಸಕ ಗುಡ್ಡಪ್ಪ ಬಲ್ಯ ಅಭಿನಂದನ ನುಡಿಗಳನ್ನಾಡಿದರು.

ಬಲ್ಯ ಶ್ರೀ ವಿನಾಯಕ ಯಕ್ಷಗಾನ ಸಂಘದ ಅಧ್ಯಕ್ಷ ಜಯರಾಮ ಗೌಡ, ನಿವೃತ್ತ ಉಪನ್ಯಾಸಕ ಮಹಾಲಿಂಗೇಶ್ವರ ಭಟ್, ಸಂಜೀವ ಪಾರೆಂಕಿ, ಹರೀಶ ಆಚಾರ್ಯ ಬಾರ್ಯ ಶ್ರೀಪತಿ ಭಟ್ ಉಪ್ಪಿನಂಗಡಿ ಉಪಸ್ಥಿತರಿದ್ದರು.ತಾಳಮದ್ದಳೆಯಲ್ಲಿ ಭಾಗವತರಾಗಿ ಪದ್ಮನಾಭ ಕುಲಾಲ್ ಇಲಂತಿಲ, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಬಿ.ಸುರೇಶ ರಾವ್, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ ಸಹಕರಿಸಿದರು.

ಸಂಜಯ ರಾಯಭಾರದಲ್ಲಿ ಶ್ರೀಧರ ಎಸ್ ಪಿ ಸುರತ್ಕಲ್ (ಸಂಜಯ ), ಹರೀಶ್ ಆಚಾರ್ಯ ಬಾರ್ಯ(ಶ್ರೀಕೃಷ್ಣ ), ಜಯರಾಮ ಬಲ್ಯ (ಭೀಮ ), ಸಂಜೀವ ಅನುಗ್ರಹ ಪಾರೆಂಕಿ(ಧರ್ಮರಾಯ ), ಮಹಾಲಿಂಗೇಶ್ವರ ಭಟ್ (ದ್ರುಪದ), ಪುಷ್ಪಲತಾ .ಯಂ (ದ್ರೌಪದಿ ), ಶ್ರುತಿ ವಿಸ್ಮಿತ್ (ಅರ್ಜುನ ) ಸಹಕರಿಸಿದರು.

ರಣವೀಳ್ಯದಲ್ಲಿ ಅಮ್ಮಿ ಗೌಡ ನಾಲ್ಗುತ್ತು, (ಕೌರವ ), ತಿಮ್ಮಪ್ಪ ಕೋಟೆಕಾರು (ಶ್ರೀಕೃಷ್ಣ), ದಿವಾಕರ ಆಚಾರ್ಯ ನೇರೆಂಕಿ (ವಿದುರ ) ಭಾಗವಹಿಸಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕಡಬ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿಗರಿಂದಲೇ ಬಿಜೆಪಿ ಮುಕ್ತ | ಪತ್ರಿಕಾಗೋಷ್ಠಿಯಲ್ಲಿ ನೂರುದ್ದೀನ್ ಸಾಲ್ಮರ

ಪುತ್ತೂರು: ಹೊಸದಾಗಿ ಮೇಲ್ದರ್ಜೆಗೇರಿದ ಕಡಬ ತಾಲೂಕಿನ ಪಟ್ಟಣ ಪಂಚಾಯತ್ ಚುನಾವಣೆಯ ಗೆಲುವಿನಿಂದ ಆ…

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ…

1 of 123