ಪುತ್ತೂರು: ಕಡಬ ಸುಬ್ರಹ್ಮಣ್ಯ ನಡುವಿನ ಕೈಕಂಬ ಎಂಬಲ್ಲಿ Ksrtc ಬಸ್ ಗಳೆರಡು ಮುಖಾಮುಖಿ ಢಿಕ್ಕಿಯಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಕಡಬ ಕಿದು Cpcri ಸಮೀಪದಲ್ಲಿ ಈ ಘಟನೆ ಸಂಭವಿಸಿದೆ.
ಅಪಘಾತದ ತೀವ್ರತೆಗೆ ರಸ್ತೆ ಬ್ಲಾಕ್ ಆಗಿದ್ದು, ಸಣ್ಣ – ಪುಟ್ಟ ವಾಹನಗಳಿಗಷ್ಟೇ ವಾಹನ ಸಂಚಾರ ಸಾಧ್ಯ ಎಂದು ತಿಳಿದು ಬಂದಿದೆ.
ಘಟನೆಯಿಂದ ಬಸ್ ನ ಚಾಲಕ, ಪ್ರಯಾಣಿಕರಿಗೆ ಗಾಯವಾಗಿದ್ದು, ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.