ರಾಜ್ಯ ವಾರ್ತೆಸ್ಥಳೀಯ

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣಕ್ಕೆ ಯಾತ್ರಾರ್ಥಿಗಳಿಗೆ ಬಿಗ್ ಶಾಕ್!! ರೈಲು ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಬೇಕಾಬಿಟ್ಟಿ ಟಿಕೇಟ್ ದರ ಏರಿಸುತ್ತಿರುವ ಬಸ್’ಗಳು!!

ಟಿಕೇಟ್ ಏರಿಕೆ ಸಂದರ್ಭ ಸಹಾಯಕ್ಕೆ ಧಾವಿಸುತ್ತಿದ್ದ ರೈಲ್ವೇ ಇಲಾಖೆ, ಈ ಬಾರಿಯ ಗುಡ್ಡ ಕುಸಿತಕ್ಕೆ ರೈಲು ಸಂಪರ್ಕ ಸ್ಥಗೊತಗೊಳಿಸಿದೆ. ಪರಿಣಾಮ, ಖಾಸಗಿ ಬಸ್ ಟಿಕೇಟ್ ದರ ಎರಡು - ಮೂರು ಪಟ್ಟು ಹೆಚ್ಚಳ ಮಾಡಿವೆ.

ಈ ಸುದ್ದಿಯನ್ನು ಶೇರ್ ಮಾಡಿ

ಟಿಕೇಟ್ ಏರಿಕೆ ಸಂದರ್ಭ ಸಹಾಯಕ್ಕೆ ಧಾವಿಸುತ್ತಿದ್ದ ರೈಲ್ವೇ ಇಲಾಖೆ, ಈ ಬಾರಿಯ ಗುಡ್ಡ ಕುಸಿತಕ್ಕೆ ರೈಲು ಸಂಪರ್ಕ ಸ್ಥಗೊತಗೊಳಿಸಿದೆ. ಪರಿಣಾಮ, ಖಾಸಗಿ ಬಸ್ ಟಿಕೇಟ್ ದರ ಎರಡು – ಮೂರು ಪಟ್ಟು ಹೆಚ್ಚಳ ಮಾಡಿವೆ.

akshaya college

ಅದರಲ್ಲೂ ಧರ್ಮಸ್ಥಳ – ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಯಾತ್ರಾರ್ಥಿಗಳು ತಲೆ ಮೇಲೆ ಕೈ ಹೊತ್ತು ಕುಳಿತು ಕೊಳ್ಳುವಂತೆ ಆಗಿದೆ. ಖಾಸಗಿ ಬಸ್ಗಳು ಬೇಕಾಬಿಟ್ಟಿಯಾಗಿ ಟಿಕೆಟ್ ದರ ನಿಗದಿಪಡಿಸುತ್ತಿದ್ದು, ಮಂಗಳೂರು ಕಡೆ ತೆರಳುವ ಬಸ್ ಟಿಕೆಟ್ ದರ ದುಪ್ಪಟ್ಟು ಹಾಗೂ ಅದಕ್ಕಿಂತಲೂ ಹೆಚ್ಚಾಗಿರುವುದು ಬೆಳಕಿಗೆ ಬಂದಿದೆ.

ರಾಜ್ಯಾದ್ಯಂತ ಭಾರಿ ಮಳೆಯಿಂದ ಹಲವೆಡೆ ಭೂಕುಸಿತವಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಎಡಕುಮೇರಿ ಬಳಿ ರೈಲು ಹಳಿ ಇರುವ ಜಾಗದಲ್ಲಿ ಭೂಕುಸಿತ ಉಂಟಾಗಿ ರೈಲು ಸಂಚಾರ ಸ್ಥಗಿತಗೊಂಡಿದೆ. ಒಟ್ಟಾರೆಯಾಗಿ 14 ರೈಲುಗಳ ಸಂಚಾರ ಸ್ಥಗಿತಗೊಂಡಿದೆ.

ಖಾಸಗಿ ಬಸ್ ಟಿಕೆಟ್ ದರ ಹೆಚ್ಚಳ?
ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ಟಿಕೆಟ್ ದರ ದುಪ್ಪಟ್ಟಾಗಿದ್ದು, ಕೆಲವು ಬಸ್ಗಳಂತೂ ಎರಡ್ಮೂರು ಪಟ್ಟು ದರ ಏರಿಕೆ ಮಾಡಿವೆ. ಉಭಯ ನಗರಗಳ ಮಧ್ಯೆ ಬಸ್ ಪ್ರಯಾಣಕ್ಕೆ 500-600 ರೂ. ಇದ್ದ ಟಿಕೆಟ್ ದರ ಈಗ 1000 ರೂ.ನಿಂದ 1,200 ರೂ.ಗೆ ಏರಿಕೆಯಾಗಿದೆ.

ಎಸಿ ಬಸ್ ಟಿಕೆಟ್ ದರ 2000 ರೂ.ನಿಂದ 4000 ರೂ.ಗೆ ಏರಿಕೆಯಾಗಿದೆ. ಪರಿಣಾಮವಾಗಿ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಕಡೆ ಹೊರಟ ಜನರಿಗೆ ತೊಂದರೆಯಾಗಿದೆ.

ಇದೇ ಮೊದಲಲ್ಲ
ಅನಿವಾರ್ಯ ಸಂದರ್ಭಗಳಲ್ಲಿ ಬೆಂಗಳೂರು ಮಂಗಳೂರು ಖಾಸಗಿ ಬಸ್ಗಳು ಟಿಕೆಟ್ ದರ ವಿಪರೀತ ಏರಿಕೆ ಮಾಡುತ್ತಿರುವುದು ಇದೇ ಮೊದಲಲ್ಲ. ಹಬ್ಬಗಳ ಸಂದರ್ಭ, ಸರಣಿ ರಜೆಗಳ ಸಂದರ್ಭದಲ್ಲಿ ಖಾಸಗಿ ಬಸ್ಗಳು ಟಿಕೆಟ್ ದರವನ್ನು ಎರಡ್ಮೂರು ಪಟ್ಟು ಏರಿಕೆ ಮಾಡುತ್ತವೆ. ಇದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಪ್ರತಿ ಬಾರಿ ವ್ಯಕ್ತವಾಗುತ್ತಿದೆ. ಆದರೆ, ಟಿಕೆಟ್ ದರ ಏರಿಕೆ ಮುಂದುವರಿದೇ ಇದೆ.

ಬೆಂಗಳೂರು ಮಂಗಳೂರು ವಿಮಾನ ಟಿಕೆಟ್ ಕೂಡ ದುಬಾರಿ
ರೈಲು ಸಂಚಾರ ರದ್ದಾದ ಬೆನ್ನಲ್ಲೇ, ಖಾಸಗಿ ಬಸ್ಗಳ ಜೊತೆಗೆ ಬೆಂಗಳೂರು ಮಂಗಳೂರು ವಿಮಾನ ಟಿಕೆಟ್ ದರ ಕೂಡ ದುಪ್ಪಟ್ಟಾಗಿದೆ. ಸಾಮಾನ್ಯವಾಗಿ ಉಭಯ ನಗರಗಳ ನಡುವಣ ವಿಮಾನ ಪ್ರಯಾಣ ದರ 3 ರಿಂದ 4 ಸಾವಿರ ರೂ. ಇರುತ್ತಿದ್ದರೆ ಈಗ ಏಕಾಏಕಿ ವಿಮಾನಯಾನ ದರ 10,000 ರೂ.ಗೆ ಏರಿಕೆಯಾಗಿದೆ. ಇಂದಿನ ಕೆಲ ವಿಮಾನಗಳಲ್ಲಿ 7,500 ರಿಂದ 16 ಸಾವಿರ ರೂ.ವರೆಗೆ ಟಿಕೆಟ್ ದರ ವಸೂಲಿ ಮಾಡಲಾಗಿದೆ.

ಕಳೆದ ವಾರವಷ್ಟೇ ಶಿರಾಡಿ ಘಾಟ್ ರಸ್ತೆಯಲ್ಲಿ ಭೂಕುಸಿತ ಸಂಭವಿಸಿ ರಸ್ತೆ ಸಂಚಾರ ಕೆಲವು ದಿನಗಳ ಕಾಲ ಬಂದ್ ಆಗಿತ್ತು. ಅತ್ತ ಸಂಪಾಜೆ ಘಾಟಿಯಲ್ಲಿಯೂ ರಾತ್ರಿ ಸಂಚಾರ ಬಂದ್ ಆಗಿದ್ದರಿಂದ ಬೆಂಗಳೂರು ಮಂಗಳೂರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಈ ವೇಳೆ ವಿಶೇಷ ರೈಲುಗಳನ್ನು ಹೊರಡಿಸಿದ್ದ ರೈಲ್ವೆ ಇಲಾಖೆ ಪ್ರಯಾಣಿಕರ ನೆರವಿಗೆ ಧಾವಿಸಿತ್ತು. ಇದೀಗ ರೈಲು ಸಂಪರ್ಕವೂ ಕಡಿತಗೊಂಡಿರುವುದರಿಂದ ಪ್ರಯಾಣಿಕರಿಗೆ ಬಸ್ಸೇ ಆಧಾರವಾಗಿದೆ. ಆದರೆ ಬಸ್ ಟಿಕೆಟ್ ದರ ವಿಪರೀತ ಏರಿಕೆಯಾಗಿರುವುದು ಸಂಕಷ್ಟ ತಂದೊಡ್ಡಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರು ಕೆಎಸ್ಸಾರ್ಟಿಸಿ ನೂತನ ಬಸ್ ಚಾಲಕ ನಿರ್ವಾಹಕರಿಗೆ ಸಂವಹನ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ

ಪುತ್ತೂರು: ಕೆಎಸ್ಸಾರ್ಟಿಸಿ ಪುತ್ತೂರು ಘಟಕಕ್ಕೆ ನೂತನವಾಗಿ ಆಯ್ಕೆಗೊಂಡಿರುವ ಬಸ್ ಚಾಲಕ ಮತ್ತು…

1 of 141