ರಾಜ್ಯ ವಾರ್ತೆಸ್ಥಳೀಯ

ಪ್ರೇಯಸಿ ಜತೆ ಪೊಲೀಸ್ ಪ್ರಣಯ ಪ್ರಸಂಗ; ರೆಡ್‌ ಹ್ಯಾಂಡ್‌ ಆಗಿ ಹಿಡಿದ ಪತ್ನಿ

ಪ್ರೇಯಸಿ ಜತೆ ಇರುವಾಗಲೇ ಹೆಡ್ಕಾನ್ಸ್ಟೇಬಲ್ ಪತ್ನಿಯ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಸಿರವಾರ ಠಾಣೆ ಹೆಡ್ ಕಾನ್ಸಟೇಬಲ್ ರಾಜ್ ಮಹಮ್ಮದ್‌ನ ಅಕ್ರಮ ಸಂಬಂಧ ಹೊರಗೆ ಬಂದಿದ್ದು, ಪತ್ನಿಯೇ ಇಬ್ಬರನ್ನೂ ರೆಡ್ ಹ್ಯಾಂಡ್ ಹಿಡಿದು ಪೊಲೀಸರಿಗೆ ವಶಕ್ಕೆ ನೀಡಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಪ್ರೇಯಸಿ ಜತೆ ಇರುವಾಗಲೇ ಹೆಡ್ಕಾನ್ಸ್ಟೇಬಲ್ ಪತ್ನಿಯ ಕೈಗೆ ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಸಿರವಾರ ಠಾಣೆ ಹೆಡ್ ಕಾನ್ಸಟೇಬಲ್ ರಾಜ್ ಮಹಮ್ಮದ್‌ನ ಅಕ್ರಮ ಸಂಬಂಧ ಹೊರಗೆ ಬಂದಿದ್ದು, ಪತ್ನಿಯೇ ಇಬ್ಬರನ್ನೂ ರೆಡ್ ಹ್ಯಾಂಡ್ ಹಿಡಿದು ಪೊಲೀಸರಿಗೆ ವಶಕ್ಕೆ ನೀಡಿದ್ದಾರೆ.

ರಾಜ್ ಮಹಮ್ಮದ್‌ ಸಿರವಾರ ಠಾಣೆ ಹೆಡ್ ಕಾನ್ಸಟೇಬಲ್ ಆಗಿದ್ದರೆ ಆತನ ಪತ್ನಿ ಪ್ಯಾರಿ ಬೇಗಂ ದೇವದುರ್ಗ ಠಾಣೆ ಕಾನ್ಸ್ ಟೇಬಲ್ ಆಗಿದ್ದಾರೆ. ವಿಚ್ಚೇದಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ರಾಜ್ ಮಹಮ್ಮದ್‌ಗೆ ಹಿಂದೆಯೂ ಪತ್ನಿ ಎಚ್ಚರಿಕೆ ನೀಡಿದ್ದರು. ಆದರೂ ಬುದ್ಧಿ ಕಲಿಯದ ಆತ ಇದೀಗ ರೆಡ್‌ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ.

SRK Ladders

ಕವಿತಾಳ ಆಸ್ಪತ್ರೆಯ ಸ್ಟಾಫ್‌ ನರ್ಸ್ ಜತೆ ರಾಜ್ ಮಹಮ್ಮದ್‌ ಆಕ್ರಮ ಸಂಬಂಧ ಹೊಂದಿದ್ದು, ನಾಲ್ಕು ವರ್ಷಗಳಿಂದ ಇದು ಮುಂದುವರಿಯುತ್ತಿದೆ ಎಂದು ಆರೋಪಿಸಲಾಗಿದೆ. ಈ ಹಿಂದೆ ರಾಜ್ ಮಹಮ್ಮದ್‌ ಕವಿತಾಳ ಠಾಣೆಯಲ್ಲಿದ್ದಾಗಿನಿಂದಲೇ ಆಕ್ರಮ ಸಂಬಂಧ ಚಿಗುರಿತ್ತು. ಠಾಣೆ ಮತ್ತು ಆಸ್ಪತ್ರೆ ಎದುರು-ಬದುರಾಗಿ ಇರುವುದರಿಂದ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಪತ್ನಿ ಮನೆಯಲ್ಲಿ ಇಲ್ಲದೆ ವೇಳೆ ಇವರ ಚೆಲ್ಲಾಟ ನಡೆಯುತ್ತಿತ್ತು ಎನ್ನಲಾಗಿದೆ.

ಹಿಂದೆಯೂ ದೂರು ನೀಡಿದ್ದ ಪತ್ನಿ
ರಾಜ್ ಮಹಮ್ಮದ್‌ನ ಅಕ್ರಮ ಸಂಬಂಧದ ಬಗ್ಗೆ ಈ ಹಿಂದೆ ಪತ್ನಿ ಪ್ಯಾರಿ ಬೇಗಂ ಎಸ್‌ಪಿ ಗಮನಕ್ಕೆ ತಂದಿದ್ದರು. ಆಗ ಅವರು ಕರೆದು ಬುದ್ದಿವಾದ ಹೇಳಿದ್ದರು. ಇಷ್ಟಾದರೂ ರಾಜ್ ಮಹಮ್ಮದ್‌ ತನ್ನ ಚಾಳಿ ಬಿಟ್ಟಿರಲಿಲ್ಲ. ಇದೀಗ ಸಿರವಾರ ಪಟ್ಟಣದಲ್ಲಿ ಮನೆಯೊಂದರಲ್ಲಿ ಪ್ರೇಯಸಿ ಜತೆ ಇರುವಾಗಲೇ ಸಿಕ್ಕಿ ಬಿದ್ದಿದ್ದಾನೆ. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪ್ಯಾರಿ ಬೇಗಂ ಮನೆಯನ್ನು ಲಾಕ್ ಮಾಡಿ, ಬಳಿಕ ಕರೆ ಮಾಡಿ ಎಸ್ಪಿಗೆ ದೂರು ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯ ಠಾಣೆ ಪೊಲೀಸರು ಆಗಮಿಸಿ ಮನೆ ಲಾಕ್ ಓಪನ್ ಮಾಡಿ ಬಳಿಕ ಹೆಡ್ಕಾನ್ಸ್ಟೇಬಲ್ ರಾಜ್ ಮೊಹಮ್ಮದ್ ಮತ್ತು ಆತನ ಪ್ರೇಯಸಿಯನ್ನು ಕರೆದುಕೊಂಡು ಹೋಗಿದ್ದಾರೆ. ಸದ್ಯ ರಾಜ್ ಮೊಹಮ್ಮದ್ ವಿರುದ್ಧ ಪತ್ನಿ ದೂರು ನೀಡಲು ಮುಂದಾಗಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

1 of 4