ಸ್ಥಳೀಯ

ಅಂಗನವಾಡಿಗೆ ಕನ್ನ: ಗರ್ಭಿಣಿಯರಿಗೆ, ಮಕ್ಕಳಿಗೆ ತರಿಸಿದ್ದ ಆಹಾರ ಸಾಮಗ್ರಿ ಕಳವು!

ವಿಟ್ಲದ ನೆತ್ರಕೆರೆ ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಮತ್ತು ಪುಟಾಣಿಗಳಿಗಾಗಿ ತಂದಿರಿಸಿದ್ದ ಪೌಷ್ಟಿಕ ಆಹಾರ ಸಾಮಗ್ರಿ ಮತ್ತು ಗ್ಯಾಸ್ ಹಂಡೆ, ರೆಗ್ಯುಲೇಟರ್ ಇತ್ಯಾದಿಗಳನ್ನು ಕಳವುಗೈಯಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ವಿಟ್ಲ: ವಿಟ್ಲದ ನೆತ್ರಕೆರೆ ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಮತ್ತು ಪುಟಾಣಿಗಳಿಗಾಗಿ ತಂದಿರಿಸಿದ್ದ ಪೌಷ್ಟಿಕ ಆಹಾರ ಸಾಮಗ್ರಿ ಮತ್ತು ಗ್ಯಾಸ್ ಹಂಡೆ, ರೆಗ್ಯುಲೇಟರ್ ಇತ್ಯಾದಿಗಳನ್ನು ಕಳವುಗೈಯಲಾಗಿದೆ.
ಕಳ್ಳರು ತೂಕದ ಯಂತ್ರ, ಗ್ಯಾಸ್ ಹಂಡೆ, ರೆಗ್ಯುಲೇಟರ್ ಜತೆಯಲ್ಲಿ ಗರ್ಭಿಣಿಯರಿಗೆ ಮತ್ತು ಪುಟಾಣಿಗಳಿಗಾಗಿ ತಂದಿರಿಸಿದ್ದ ಪೌಷ್ಟಿಕ ಆಹಾರ ಕಳವುಗೈದ ಬಗ್ಗೆ ವ್ಯಾಪಕ ಜನತೆ ಹಿಡಿಶಾಪ ಹಾಕುತ್ತಿದೆ.

ಒಟ್ಟು 50,000/- ರೂ.ಗಳಿಗೂ ಅಧಿಕ ಮೌಲ್ಯದ ಸಾಮಗ್ರಿಗಳನ್ನು ಕಳವುಗೈಯಲಾಗಿದೆ ಎಂದು ಅಂಗನವಾಡಿ ಮೇಲ್ವಿಚಾರಕಿ ಲತಾ ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದೆ.

SRK Ladders

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3