pashupathi
ದೇಶಸ್ಥಳೀಯ

ಸಾನಿಯಾ ಮಿರ್ಜಾ ವಿಚ್ಛೇದನ ನಂತರದ ವಿವಾಹ?? ಮೌನ ಮುರಿದ ಭಾರತೀಯ ಕ್ರಿಕೆಟರ್ ಮುಹಮ್ಮದ್ ಶಮಿ

tv clinic
ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಝಾರೊಂದಿಗಿನ ವಿವಾಹದ ವದಂತಿಯ ಕುರಿತು ಕೊನೆಗೂ ಮೌನ ಮುರಿದಿರುವ ಭಾರತೀಯ ಕ್ರಿಕೆಟರ್ ಮುಹಮ್ಮದ್ ಶಮಿ, ಜನರು ಇಂತಹ ಸುಳ್ಳುಗಳನ್ನು ಹರಡುವುದರಿಂದ ದೂರ ಉಳಿಯಬೇಕು ಎಂದು ಮನವಿ ಮಾಡಿದ್ದಾರೆ. ಇಂತಹ ಸುಳ್ಳು ಮೀಮ್‌ ಗಳು ಮೊದಲಿಗೆ ಮನರಂಜನೆ ನೀಡುತ್ತವಾದರೂ, ಕೊನೆಗೆ ಹಾನಿಯನ್ನುಂಟು ಮಾಡುತ್ತವೆ ಎಂದು ಅವರು ಕಿವಿಮಾತು ಹೇಳಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

akshaya college

ಯೂಟ್ಯೂಬ್‌ನಲ್ಲಿ ಶುಭಂಕರ್ ಮಿಶ್ರಾರೊಂದಿಗೆ ಇತ್ತೀಚೆಗೆ ನಡೆಸಿರುವ ಸಂವಾದದಲ್ಲಿ, “ಇದು ವಿಚಿತ್ರವಾಗಿದೆ ಹಾಗೂ ಒಂದಿಷ್ಟು ಅಗ್ಗದ ತಮಾಷೆಗಾಗಿ ಇದನ್ನು ಮಾಡಲಾಗಿದೆ. ಆದರೆ, ಏನು ಮಾಡಲು ಸಾಧ್ಯ? ನಾನು ನನ್ನ ಫೋನ್ ತೆರೆದರೆ ಆ ಮೀಮ್‌ಗಳನ್ನೇ ನೋಡಬೇಕಾಗುತ್ತದೆ. ಅಂತಹ ಮೀಮ್‌ಗಳನ್ನು ತಮಾಷೆಗಾಗಿಯೇ ಮಾಡಿದ್ದರೂ, ಅಂತಹ ಮೀಮ್‌ಗಳು ಯಾರದಾದರೂ ವೈಯಕ್ತಿಕ ಬದುಕಿಗೆ ಸಂಬಂಧಿಸಿದ್ದಾಗ, ನೀವು ಆ ಕುರಿತು ಮೊದಲು ಯೋಚಿಸಬೇಕು. ನಂತರವಷ್ಟೆ ಅವನ್ನು ಹಂಚಿಕೊಳ್ಳಬೇಕು. ಈ ಜನರು ಪರಿಶೀಲನೆಗೊಳಪಡದ ಪುಟಗಳಿಂದ ಇಂತಹ ಮೀಮ್‌ಗಳನ್ನು ಹಂಚಿಕೊಂಡು, ನಂತರ ಏನನ್ನಾದರೂ ಮತ್ತು ಎಲ್ಲವನ್ನೂ ಹೇಳಿ ಹೊರಟು ಬಿಡುತ್ತಾರೆ” ಎಂದು ಮುಹಮ್ಮದ್ ಶಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ಅವರು ಪಾಕಿಸ್ತಾನದ ಕ್ರಿಕೆಟಿಗ ಶೋಯಬ್ ಮಲಿಕ್ ಅವರೊಂದಗಿನ ವಿಚ್ಛೇದನ ಪಡೆದ ನಂತರ, ಮುಹಮ್ಮದ್ ಶಮಿ ಹಾಗೂ ಸಾನಿಯಾ ಮಿರ್ಝಾ ವಿವಾಹವಾಗಲಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿತ್ತು.

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 134