ಧಾರ್ಮಿಕಸ್ಥಳೀಯ

ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಆರಂಭಗೊಂಡ ಸುಭದ್ರ ಟ್ರೇಡರ್ಸ್ | ಎಪಿಎಂಸಿ ರಸ್ತೆಯ ಕ್ರಿಸ್ತೋಫರ್ ಕಟ್ಟಡದಲ್ಲಿ ಆರಂಭಗೊಂಡ ಪೂಜಾ ಸಾಮಾಗ್ರಿಗಳ ಮಾರಾಟ ಮಳಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಧಾರ್ಮಿಕ ಕಾರ್ಯಕ್ರಮಗಳಿಗೆ ಪೂರಕವೆನಿಸಿರುವ ಪೂಜಾ ಸಾಮಗ್ರಿಗಳಿಗೆ ಇನ್ನು ಎಲ್ಲೆಂದರಲ್ಲಿ ಅಲೆದಾಡಬೇಕಾಗಿಲ್ಲ. ಪುತ್ತೂರು ಎಪಿಎಂಸಿ ರಸ್ತೆಯ ಕ್ರಿಸ್ತೋಫರ್ ಬಿಲ್ಡಿಂಗಿನಲ್ಲಿ ಸುಭದ್ರ ಟ್ರೇಡರ್ಸ್ ಗ್ರಾಹಕರ ಸೇವೆಗೆ ಸದಾ ಸಿದ್ಧವಾಗಿದೆ.

ಬ್ರಹ್ಮಕಲಶೋತ್ಸವ, ಪ್ರತಿಷ್ಠೆ ಸಹಿತ ಮದುವೆ, ಹೋಮ, ಹವನ, ಉಪನಯನ ಗೃಹಪ್ರವೇಶ ಕಾರ್ಯಕ್ರಮಗಳಿಗೆ ಅಗತ್ಯ ಇರುವ ಪೂಜಾ ಸಾಮಾಗ್ರಿಗಳೆಲ್ಲವೂ ಇಲ್ಲಿ ಲಭ್ಯ.

SRK Ladders

ವಿಶಾಲ ಮಳಿಗೆಯಲ್ಲಿ ಎಲ್ಲಾ ಪೂಜಾ ಸಾಮಗ್ರಿಗಳು ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಗ್ರಾಹಕರು ಒಂದೇ ಸೂರಿನಡಿ ಧಾರ್ಮಿಕ ಕಾರ್ಯಕ್ರಮಗಳ ಸಾಮಗ್ರಿಗಳನ್ನು ಮಿತದರದಲ್ಲಿ, ಸುಲಭವಾಗಿ ಕೊಂಡುಕೊಳ್ಳಬಹುದು. ಉತ್ತಮ ಪಾರ್ಕಿಂಗ್ ವ್ಯವಸ್ಥೆ ಇಲ್ಲಿನ ಇನ್ನೊಂದು ಪ್ಲಸ್.

ನಂದಾ ದೀಪದಂತೆ ಸಂಸ್ಥೆ ಬೆಳಗಲಿ: ಜ್ಯೋತಿಷಿ ಬಾಲಕೃಷ್ಣ ಆಚಾರ್ಯ

ಮಹಾಗಣಪತಿ ಹವನ, ಶ್ರೀ ಲಕ್ಷ್ಮೀಪೂಜೆ ನೆರವೇರಿಸಿ, ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಜ್ಯೋತಿಷಿ ಬಾಲಕೃಷ್ಣ ಆಚಾರ್ಯ, ಸಂಸ್ಥೆಯಲ್ಲಿ ಬೆಳಗಿದ ನಂದಾ ದೀಪದಂತೆ ಸಂಸ್ಥೆಯಿಂದ ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಪ್ರಯೋಜನವಾಗಲಿ. ಸಂಸ್ಥೆಯು ಉತ್ತಮ ರೀತಿಯಲ್ಲಿ ಬೆಳಗಲಿ ಎಂದು ಹಾರೈಸಿದರು.

ಹಿಂದುಗಳಿಗೆ ಅತೀ ಅಗತ್ಯದ ಸಂಸ್ಥೆ: ಅರುಣ್ ಕುಮಾರ್ ಪುತ್ತಿಲ

ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಹಿಂದುಗಳಿಗೆ ಬಹಳ ಅವಶ್ಯಕತೆ ಇರುವ ಸಂಸ್ಥೆ. ಅದೇ ರೀತಿ ಗ್ರಾಹಕರಿಗೆ ಪೂಜಾ ಸಾಹಿತ್ಯವನ್ನು ಒದಗಿಸುವ ಶಕ್ತಿಯನ್ನು ಸಂಸ್ಥೆಗೆ ಭಗವಂತನು ನೀಡಲಿ ಎಂದು ಹಾರೈಸಿದರು.

ಒಂದೇ ಸೂರಿನಡಿ ಎಲ್ಲಾ ಧಾರ್ಮಿಕ ಸಾಮಗ್ರಿ: ಸಂಜೀವ ಮಠಂದೂರು

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಧಾರ್ಮಿಕ ವಿಧಿ ವಿಧಾನಗಳನ್ನು ಹಿಂದುಗಳು ಪೂರೈಸಬೇಕಾದರೆ ಒಂದೇ ಸೂರಿನಡಿಯಲ್ಲಿ ಎಲ್ಲಾ ಸಾಮಗ್ರಿಗಳನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಿದ ಸಂಸ್ಥೆಯ ಮಾಲಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅದೇ ರೀತಿ ಯಾವುದೇ ಕಾರ್ಯಕ್ರಮಗಳಿಗೆ ಈವೆಂಟ್ ಮ್ಯಾನೇಜ್ಮೆಂಟ್ ಬಹಳ ಅಗತ್ಯ. ಈ ನಿಟ್ಟಿನಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೂ ಸುಭದ್ರ ಸಂಸ್ಥೆಯು ಈವೆಂಟ್ ಮ್ಯಾನೇಜ್‌ಮೆಂಟ್‌ನಂತೆ ಕಾರ್ಯ ನಿರ್ವಹಿಸಲಿ ಎಂದರು.

ಗ್ರಾಹಕರ ಬೇಡಿಕೆ ಪೂರೈಸುವಂತಾಗಲಿ: ಎನ್.ಕೆ.ಜಗನ್ನಿವಾಸ ರಾವ್

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್ ಮಾತನಾಡಿ, ಸಂಸ್ಥೆಯು ಗ್ರಾಹಕರೊಂದಿಗೆ ಉತ್ತಮ ಸಂಬಂಧವಿರಿಸಿದಾಗ ವ್ಯವಹಾರ ಉತ್ತಮ ರೀತಿಯಲ್ಲಿ ನಡೆಯುತ್ತದೆ. ಗ್ರಾಹಕನಿಗೆ ಏನು ಬೇಕೋ ಅದೇ ಸುವಸ್ತುಗಳು ಸಂಸ್ಥೆಯಿಂದ ಸಿಗುವಂತಾಗಲಿ ಎಂದು ಹಾರೈಸಿದರು.

ಉತ್ತಮ ಪಾರ್ಕಿಂಗ್ ವ್ಯವಸ್ಥೆ: ಚಿದಾನಂದ ಬೈಲಾಡಿ

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಎಲ್ಲಾ ಕಡೆ ಪಾರ್ಕಿಂಗ್ ಕೊರತೆಯಿಂದ ವ್ಯವಹಾರದಲ್ಲಿ ಹಿನ್ನಡೆಯಾಗುವುದು ಸಹಜ. ಸುಭದ್ರ ಸಂಸ್ಥೆಯಲ್ಲಿ ವಿಶಾಲವಾದ ಪಾರ್ಕಿಂಗ್ ಇರುವುದರಿಂದ ಗ್ರಾಹಕರಿಗೂ ಸುಲಭವಾಗಲಿದೆ ಎಂದರು.

ಮಿತದರದಲ್ಲಿ ಉತ್ತಮ ಸೇವೆ: ಭರತ್ ಗೌಡ ನೀರ್ಕಜೆ

ಸಂಸ್ಥೆಯ ಮಾಲಕ ಭರತ್ ಗೌಡ ನೀರ್ಕಜೆ ಮಾತನಾಡಿ, ಮಿತದರದಲ್ಲಿ ಉತ್ತಮ ಸೇವೆ ನೀಡುವ ಆಶಯದೊಂದಿಗೆ ಸುಭದ್ರ ಟ್ರೇಡರ್ಸ್ ಆರಂಭಗೊಂಡಿದೆ. ಗ್ರಾಹಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಮಿತದರ, ವಿಶಾಲ ಪಾರ್ಕಿಂಗ್ ವ್ಯವಸ್ಥೆ ಇಲ್ಲಿದೆ. ಎಲ್ಲರ ಸಹಕಾರವೂ ಸಂಸ್ಥೆಯ ಮೇಲಿರಲಿ ಎಂದರು.

ಶ್ರೀ ಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ವೇ.ಮೂ. ಸುಬ್ರಹ್ಮಣ್ಯ ಬಳ್ಳಕ್ಕುರಾಯ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಶುಭ ಹಾರೈಸಿದರು.

ಕ್ರಿಸ್ತೋಫರ್ ಕಟ್ಟಡದ ಮಾಲಕ ವಲೇರಿಯನ್ ಡಯಾಸ್, ಪುರುಷೋತ್ತಮ ಮುಂಗ್ಲಿಮನೆ, ಕೊಳ್ತಿಗೆ ಸಿಎ ಬ್ಯಾಂಕ್ ಅಧ್ಯಕ್ಷ ಕೆ.ಎಸ್ ವೆಂಕಟ್ರಮಣ ಗೌಡ, ಸತ್ಯಾನಂದ ಬರಡಿದುಜಲು, ಮೋನಪ್ಪ ಗೌಡ, ಜಿ.ಪಂ. ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕೃಷ್ಣಪ್ರಸಾದ್ ಕೊಚ್ಚಿ. ಶಿವಪ್ರಸಾದ್ ಕೊಚ್ಚಿ, ಕೀರ್ತನ್ ಜಾಲ್ಸೂರ್, ಸುಬ್ರಾಯ ಬಲ್ಯಾಯ ಮದ್ದ, ಪದ್ಮಯ್ಯ ಗೌಡ ಪೊಯ್ಯೆ, ಕುಶಾಲಪ್ಪ ಗೌಡ ಬದಿಯಡ್ಕ, ಪುಟ್ಟಣ್ಣ ಗೌಡ ಕುಂಡ್ರ ಕೋಡಿ, ಮೋನಪ್ಪ ಗೌಡ ಕೈಯಾಡಿ, ವಿನಯ ಜನನಿ ಫ್ಯಾನ್ಸಿ ಪುತ್ತೂರು, ರಮೇಶ್ ಗೌಡ ಮುಂಡೂರು, ರಕ್ಷಿತ್ ಕಲ್ಲಾರೆ ಸಹಿತ ಹಲವಾರು ಮಂದಿ ಗಣ್ಯರು ಆಗಮಿಸಿ ಸಂಸ್ಥೆಗೆ ಶುಭ ಹಾರೈಸಿದರು.

ಸಂಸ್ಥೆಯ ಮಾಲಕರಾದ ಶೇಷಪ್ಪ ಗೌಡ ನೀರ್ಕಜೆ, ಮೀನಾಕ್ಷಿ ಶೇಷಪ್ಪ ಗೌಡ, ಪುಷ್ಪಾಕರ ಅತಿಥಿಗಳನ್ನು ಸ್ವಾಗತಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3