ಪುತ್ತೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬನ್ನೂರು ವಲಯದ ಬೆಳ್ಳಿಪ್ಪಾಡಿ ಕಾರ್ಯಕ್ಷೇತ್ರದ ಕೂಟೇಲು ಸುಬ್ರಹ್ಮಣ್ಯ ಸಂಘದ ಸದಸ್ಯರಾದ ಗಂಗಾಧರ ಅವರ ಸಹೋದರನಿಗೆ ಸಂಪೂರ್ಣ ಸುರಕ್ಷಾ ಆರೋಗ್ಯ ವಿಮೆಯ ಮೊತ್ತವನ್ನು ಹಸ್ತಾಂತರ ಮಾಡಲಾಯಿತು.
80 ಸಾವಿರ ರೂಪಾಯಿ ಮೊತ್ತವನ್ನು ವಲಯ ಜನಜಾಗೃತಿ ಅಧ್ಯಕ್ಷ ರಾಮಣ್ಣ ಗುಂಡೋಲೆ ಹಸ್ತಾಂತರಿಸಿದರು.
ವಲಯದ ಮೇಲ್ವಿಚಾರಕರು, ಸೇವಾ ಪ್ರತಿನಿಧಿ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.