Gl harusha
ರಾಜ್ಯ ವಾರ್ತೆಸ್ಥಳೀಯ

ತಾಯಿ ಮಗಳ ಸಜೀವ ದಹನ ಪ್ರಕರಣ: ಮೃತರ ಸಂಖ್ಯೆ ಮೂರಕ್ಕೆ ಏರಿಕೆ

ಮಂಗಳವಾರ ನಡೆದ್ದ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹೆಚ್ಚಿದ ಪ್ರಕರಣದಲ್ಲಿ ತಾಯಿ – ಮಗಳ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿ ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳವಾರ ನಡೆದ್ದ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹೆಚ್ಚಿದ ಪ್ರಕರಣದಲ್ಲಿ ತಾಯಿ – ಮಗಳ ಸಜೀವ ದಹನ ಪ್ರಕರಣಕ್ಕೆ ಸಂಬಂಧಿಸಿ ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.ಬೆಳಗಾವಿಯಲ್ಲಿ ನಡೆದಿದ್ದ ಈ ಘಟನೆಯಲ್ಲಿ ತಾಯಿ ಜೈಬಾನು, ಮಗಳು ಶಬಾನಾ ಸಜೀವ ದಹನವಾಗಿದ್ದರು. ತಂದೆ ದಸ್ತಗೀರಸಾಬ ಪೆಂಡಾರಿ, ಸುಭಾನ ಪೆಂಡಾರಿ ಗಾಯಾಳುಗಳಾದ್ದರಿಂದ ಮಹಾಲಿಂಗಪುರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ನೀಡಲಾಗಿತ್ತು.ಸುಭಾನ ಪೆಂಡಾರಿಗೆ ಶೇ.75 ಕ್ಕಿಂತ ಹೆಚ್ಚಿಗೆ ಗಾಯವಾದ್ದರಿಂದ ಸುಭಾನ ಅವರನ್ನು ಮಂಗಳವಾರ ಮಧ್ಯಾಹ್ನವೇ ಬೆಳಗಾವಿಯ ಸಿವ್ಹೀಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಮಧ್ಯಾಹ್ನ ಗಾಯಾಳು ಸುಭಾನ ಪೆಂಡಾರಿ ಅವರು ಚಿಕಿತ್ಸೆಗೆ ಸ್ಪಂದಿಸದೇ, ಆರೋಗ್ಯ ಸ್ಥಿತಿಯು ಗಂಭೀರವಾದ್ದರಿಂದ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ನಸುಕಿನ ಜಾವ ಆಸ್ಪತ್ರೆಯಲ್ಲಿಯೆ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Muliya
srk ladders
Pashupathi

ಈಗಾಗಲೇ ತೇರದಾಳ ಮತ್ತು ಲೋಕಾಪುರ ಎಸ್ಐ ಇಬ್ಬರು ಬೆಳಗಾವಿ ಆಸ್ಪತ್ರೆಗೆ ತೆರಳಿದ್ದಾರೆ. ಸುಭಾನ ಮೃತದೇಹವನ್ನು ನೇರವಾಗಿ ಮುಧೋಳ ತಾಲೂಕು ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡಿಸಿದ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಿದ್ದಾರೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts