ಸ್ಥಳೀಯ

ಕುಂಜೂರುಪಂಜ: ಪರಿಸರ ಮಾಹಿತಿ, ಗಿಡನಾಟಿ| ಗಿಡ ನೆಟ್ಟು ಬೆಳೆಸುವುದರೊಂದಿಗೆ, ಪರಿಸರ ಸ್ವಚ್ಛತೆಯೂ ಮುಖ್ಯ: ಸಂಶುದ್ದೀನ್ ಸಂಪ್ಯ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕು ಮತ್ತು ಕುಂಜೂರುಪಂಜ ಒಕ್ಕೂಟ ಇದರ ಆಶ್ರಯದಲ್ಲಿ ಒಕ್ಕೂಟ ಸಭೆಯೊಂದಿಗೆ ಪರಿಸರ ಮಾಹಿತಿ ಮತ್ತು ಗಿಡನಾಟಿ ಕಾರ್ಯಕ್ರಮ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕು ಮತ್ತು ಕುಂಜೂರುಪಂಜ ಒಕ್ಕೂಟ ಇದರ ಆಶ್ರಯದಲ್ಲಿ ಒಕ್ಕೂಟ ಸಭೆಯೊಂದಿಗೆ ಪರಿಸರ ಮಾಹಿತಿ ಮತ್ತು ಗಿಡನಾಟಿ ಕಾರ್ಯಕ್ರಮ ನಡೆಯಿತು.

ಒಕ್ಕೂಟದ ಅಧ್ಯಕ್ಷರಾದ ಮಹಾಲಿಂಗ ನಾಯ್ಕ ಅದ್ಯಕ್ಷತೆಯಲ್ಲಿ ಕುಂಜೂರುಪಂಜ ಶ್ರೀ ಮಂಜುನಾಥ ಸಭಾಭವನದಲ್ಲಿ ನಡೆಯಿತು.

SRK Ladders

ಕಾರ್ಯಕ್ರಮದ ಉದ್ಘಾಟನೆಯನ್ನು ಜನಜಾಗೃತಿ ವಲಯಧ್ಯಕ್ಷ ಪ್ರವೀಣ್ ಚಂದ್ರ ಅಳ್ವ ದೀಪ ಬೆಳಗಿಸಿ ಉದ್ಘಾಟಿಸಿ ಯೋಜನೆಯ ಕಾರ್ಯಕ್ರಮದಲ್ಲಿ ಗಿಡ ನಾಟಿ ಕಾರ್ಯಕ್ರಮ ಒಂದು ಉತ್ತಮ ಕಾರ್ಯಕ್ರಮವಾಗಿದೆ, ನಾವೆಲ್ಲರೂ ಯೋಜನೆಯಿಂದ ಅದೆಷ್ಟೋ ಮಾಹಿತಿಗಳನ್ನು ಪಡೆದು ಮುಂದುವರೆದಿದ್ದೇವೆ. ನಮಗೆ ಬೇಕಾಗುವ ಮಾಹಿತಿಯನ್ನು ಯೋಜನೆ ನಮಗೆ ನೀಡುತ್ತಿದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಸಂಶುದ್ದಿನ್ ಸಂಪ್ಯ ಮಾತನಾಡಿ, ಗಿಡ ನಾಟಿ ಯಾಕೆ ಮಾಡಬೇಕು? ಅದರಿಂದ ನಮಗೆ ಸಿಗುವ ಪ್ರಯೋಜನವೇನು? ಅದರಲ್ಲಿ ಇರುವ ಮದ್ದಿನ ಗುಣ, ಗಿಡಗಳನ್ನು ಪರಿಸರದಲ್ಲಿ ನೆಟ್ಟರೆ ನಮಗೆ ಸಿಗುವ ಲಾಭ, ಪ್ಲಾಸ್ಟಿಕ್ ಬಳಕೆ ಪರಿಸರದಲ್ಲಿ ಇದ್ದರೆ ಅದರಿಂದ ಆಗುವ ದುಷ್ಟರಿಣಾಮದ ಬಗ್ಗೆ ವಿವರಿಸಿದರು. ಗಿಡ ನೆಟ್ಟರೆ ಅದರ ಪೋಷಣೆಯನ್ನು ನಾವು ಮಾಡಬೇಕು. ನೆಟ್ಟು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಕೈಯಲ್ಲಿದೆ ಎಂದು ಹೇಳಿ ನಾವೆಲ್ಲರೂ ಸೇರಿ ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಡೋಣ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕೃಷಿ ಮೇಲ್ವಿಚಾರಕ ಶಿವರಂಜನ್ ಮಾತನಾಡಿ, ಯೋಜನೆಯ ಹಲವು ಕಾರ್ಯಕ್ರಮದಲ್ಲಿ ಪರಿಸರ ಮಾಹಿತಿ ಗಿಡ ನಾಟಿ ಕಾರ್ಯಕ್ರಮ ಒಂದು ಗಿಡ ನಾಟಿ ಮಾಡಿದವರಿಗೆ ಅದರ ಸಂರಕ್ಷಣೆಯ ಜವಾಬ್ದಾರಿ ಇದ್ದರೆ ನಾವು ಮಾಡಿದ ಕೆಲಸ ಪರಿಣಾಮಕಾರಿ ಆಗಲು ಸಾಧ್ಯ ಎಂದು ಹೇಳಿದರು. ಬಳಿಕ ಸಂಘಗಳ ಜವಾಬ್ದಾರಿ, ಸಾಲ ಪಡೆಯುವ ಉದ್ದೇಶ, ವಿನಿಯೋಗ, ಅನುದಾನ ದ ಬಗ್ಗೆ ವಿವರಿಸಿದರು, ಬಳಿಕ ಸಸಿ ವಿತರಣೆ ಮಾಡಲಾಯಿತು.

ಮಹಾಲಿಂಗೇಶ್ವರ ಸಂಘದ ಸದಸ್ಯೆ ಮಮತಾ ಅವರ ಮನೆಗೆ ಗಾಳಿ ಮಳೆಯಿಂದ ಹಾನಿಯಾಗಿದ್ದು, ಯೋಜನೆಯಿಂದ ಮಂಜೂರಾದ 20000 ರೂ ಮಂಜೂರಾತಿ ಪತ್ರವನ್ನು ಇದೇ ಸಂದರ್ಭ ನೀಡಲಾಯಿತು.

ಗ್ರಾಮ ಪಂಚಾಯತ್ ಸದಸ್ಯೆ ಸರಸ್ವತಿ, ಒಕ್ಕೂಟದ ಪದಾಧಿಕಾರಿಗಳಾದ, ಶರ್ಮಿಳಾ, ಉಮಾವತಿ, ಜಗದೀಶ್, ರೇಣುಕಾ ಉಪಸ್ಥಿತರಿದ್ದರು.

ಮಾತೃಶ್ರೀ ಸಂಘದ ಸೀತಾಲಕ್ಷ್ಮಿ ಸ್ವಾಗತಿಸಿ, ಸೇವಾಪ್ರತಿನಿಧಿ ಆಶಾಲತಾ ವಂದಿಸಿದರು. ರೇಣುಕಾ ಕಾರ್ಯಕ್ರಮ ನಿರೂಪಿಸಿದರು, ಬಲ್ನಾಡು ಶೌರ್ಯ ಘಟಕದ ಪ್ರತಿನಿಧಿ ವಿನಯ, ಸದಸ್ಯರಾದ ಜಗದೀಶ್, ಸ್ವಾತಿ, ಸುಗಂಧಿ ಜ್ಞಾನವಿಕಾಸ ಕೇಂದ್ರದ ಸಂಯೋಜಕಿ ವಿದ್ಯಾ ಮತ್ತು ಸದಸ್ಯರು, ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2