Gl harusha
ಸ್ಥಳೀಯ

ರೋಟರಿ ಕ್ಲಬ್ rotary club ಪುತ್ತೂರು ಯುವದಿಂದ ಮಾನಸಿಕ ಅಸ್ವಸ್ಥ ಮಹಿಳೆಯ ರಕ್ಷಣೆ ಪುನರ್ವಸತಿ ಕೇಂದ್ರಕ್ಕೆ ಸೇರ್ಪಡೆ

ಕಳೆದ ಅನೇಕ ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಇಡ್ಕಿದು ಗ್ರಾಮದ ಸೂರ್ಯ ಎಂಬಲ್ಲಿನ ಬಸ್ಸು ತಂಗುದಾಣದಲ್ಲಿ ವಾಸ್ತವ್ಯವನ್ನು ಹೂಡಿಕೊಂಡಿದ್ದ ಸುಮಾರು 50 ವರ್ಷ ಪ್ರಾಯದ ಕಮಲ kamala ಎಂಬ ಮಹಿಳೆಯನ್ನು ಪ್ರಾಧ್ಯಾಪಕಿ ಗೀತಾ ಕೊಂಕೋಡಿ ಅವರ ವಿನಂತಿಯ ಮೇರೆಗೆ ಪುತ್ತೂರು ರೋಟರಿ ಕ್ಲಬ್ ಇದರ ಮಾಜಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಗ್ರಾಮಸ್ಥರ ಸಹಕಾರದಿಂದ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕಳೆದ ಅನೇಕ ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಇಡ್ಕಿದು ಗ್ರಾಮದ ಸೂರ್ಯ ಎಂಬಲ್ಲಿನ ಬಸ್ಸು ತಂಗುದಾಣದಲ್ಲಿ ವಾಸ್ತವ್ಯವನ್ನು ಹೂಡಿಕೊಂಡಿದ್ದ ಸುಮಾರು 50 ವರ್ಷ ಪ್ರಾಯದ ಕಮಲ ಎಂಬ ಮಹಿಳೆಯನ್ನು ಪ್ರಾಧ್ಯಾಪಕಿ ಗೀತಾ ಕೊಂಕೋಡಿ ಅವರ ವಿನಂತಿಯ ಮೇರೆಗೆ ಪುತ್ತೂರು ರೋಟರಿ ಕ್ಲಬ್ ಇದರ ಮಾಜಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಗ್ರಾಮಸ್ಥರ ಸಹಕಾರದಿಂದ ಪುನರ್ವಸತಿ ಕೇಂದ್ರಕ್ಕೆ ಸೇರಿಸಿದರು.

srk ladders
Pashupathi
Muliya

ಈ ಮಾನಸಿಕ ಅಸ್ವಸ್ಥ ಮಹಿಳೆಯು ಬಸ್ಸು ತಂಗುದಾಣದಲ್ಲಿ ವಾಸ್ತವ ಹೂಡಿರುವ ಕಾರಣ, ಹಾಗೂ ಕೆಲವೊಮ್ಮೆ ಈಕೆ ಮಾಡುವ ಹಾವಭಾವಗಳಿಂದ ಶಾಲೆಗೆ ಹೋಗುವ ಮಕ್ಕಳಿಗೆ ಈ ತಂಗುದಾಣದಲ್ಲಿ ನಿಲ್ಲಲು ಭಯವಾಗುತ್ತಿದ್ದು ಗ್ರಾಮ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಸಾರ್ವಜನಿಕರು ದೂರನ್ನು ನೀಡಿದ್ದರು.

ಈ ಮಹಿಳೆಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸುವಲ್ಲಿ ಗ್ರಾಮ ಪಂಚಾಯತ್ ಪಿ.ಡಿ.ಓ ಗೋಕುಲದಾಸ್ ಭಕ್ತ, ಗ್ರಾ. ಪ
ಉಪಾಧ್ಯಕ್ಷ ಪದ್ಮನಾಭ ಸಾಪಲ್ಯ, ಗ್ರಾ.ಪ ಸದಸ್ಯೆ ಭಾಗೀರಥಿ ಹಾಗೂ ಪುಷ್ಪಾವತಿ, ಪುರುಷೋತ್ತಮ, ಮಹಿಳಾ ಮತ್ತು ಮಕ್ಕಳ ಇಲಾಖೆಯ ವಿಟ್ಲ ಘಟಕದ ಮೇಲ್ವಿಚಾರಕಿ ಸೋಮಕ್ಕ, ಅಂಗನವಾಡಿ ಕಾರ್ಯಕರ್ತೆ ಕುಸುಮ, ಕೃಷಿಕರಾದ ಸುಬ್ರಾಯ ಭಟ್ ಕೊಂಕೋಡಿ, ಮಾನಸಿಕ ಅಸ್ವಸ್ಥತೆಯ ಅಕ್ಕನ ಮಗ ಸತೀಶ ಹಾಗೂ ಗ್ರಾಮಸ್ಥರು ಸಹಕರಿಸಿದರು.

ಮಹಿಳೆಯನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸುವಲ್ಲಿ ಪುತ್ತಿಲ ಪರಿವಾರದ ಆಂಬುಲೆನ್ಸ್ ಸೇವೆಯನ್ನು ಶ್ರೀ ಸುಜಿತ್ ಅವರು ನೀಡಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ