ಧಾರ್ಮಿಕರಾಜ್ಯ ವಾರ್ತೆಸ್ಥಳೀಯ

ಬೆಂಗಳೂರಿನಲ್ಲಿ ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ | ಬಸವನಗುಡಿಯಲ್ಲಿ ಕಾಲಜ್ಞಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಓಡಿಶಾದ ಖ್ಯಾತ ಕಾಲಜ್ಞಾನಿ | ಕಥಾಮೃತದ ಸಿಗುವ ಪ್ರಯೋಜನವಾದರೂ ಏನು?

ಓಡಿಶಾದ ಖ್ಯಾತ ಕಾಲಜ್ಞಾನಿ, ವಿಶ್ವದೆಲ್ಲೆಡೆ ಅತ್ಯಂತ ಜನಪ್ರಿಯವಾಗಿರುವ ಭವಿಷ್ಯ ಮಾಲಿಕಾದ ಅದ್ಭುತ ಜ್ಞಾನವನ್ನು ಸಿದ್ದಿಕೊಂಡಿರುವ ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ ಅವರು ನಮ್ಮ ಬೆಂಗಳೂರಿನಲ್ಲಿ ಶ್ರೀ ಮದ್ಭಾಗವತ ಮಹಾ ಪುರಾಣ ಕಥಾಮೃತ ಮತ್ತು ಭವಿಷ್ಯ ಮಾಲಿಕಾ ಪುರಾಣ ಕಾಯಕ್ರಮ ನಡೆಸಿಕೊಡಲಿದ್ದಾರೆ. ಇದೆ ಮೊದಲ ಬಾರಿಗೆ ಅವರು ಬೆಂಗಳೂರಿನಲ್ಲಿ ಆಸ್ತಿಕ ಮಹಾಶಯರನ್ನು ಹರಸಲಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಓಡಿಶಾದ ಖ್ಯಾತ ಕಾಲಜ್ಞಾನಿ, ವಿಶ್ವದೆಲ್ಲೆಡೆ ಅತ್ಯಂತ ಜನಪ್ರಿಯವಾಗಿರುವ ಭವಿಷ್ಯ ಮಾಲಿಕಾದ ಅದ್ಭುತ ಜ್ಞಾನವನ್ನು ಸಿದ್ದಿಕೊಂಡಿರುವ ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ ಅವರು ನಮ್ಮ ಬೆಂಗಳೂರಿನಲ್ಲಿ ಶ್ರೀ ಮದ್ಭಾಗವತ ಮಹಾ ಪುರಾಣ ಕಥಾಮೃತ ಮತ್ತು ಭವಿಷ್ಯ ಮಾಲಿಕಾ ಪುರಾಣ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇದೆ ಮೊದಲ ಬಾರಿಗೆ ಅವರು ಬೆಂಗಳೂರಿನಲ್ಲಿ ಆಸ್ತಿಕ ಮಹಾಶಯರನ್ನು ಹರಸಲಿದ್ದಾರೆ.

ಜೂನ್ 24ರಿಂದ ಜೂನ್ 30ರವರೆಗೆ ಪ್ರತಿದಿನ ಸಂಜೆ 4ರಿಂದ 7ರವರೆಗೆ, ನಗರದ ಬಸವನಗುಡಿಯ ಶಂಕರಪುರಂನ ಶ್ರೀ ಭಾರತೀ ತೀರ್ಥ ಸಭಾ ಭವನದಲ್ಲಿ ಅವರು ಈ ಕಾಲಜ್ಞಾನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

SRK Ladders

ಈ ಗ್ರಂಥದ ಪ್ರಕಾರ ಈಗಿರುವ 795 ಕೋಟಿ ಜನರ ಪೈಕಿ ಕೇವಲ 64 ಕೋಟಿ ಜನರು ಮಾತ್ರ ಕಲಿಯುಗದಿಂದ ಸತ್ಯಯುಗಕ್ಕೆ ತೆರಳುತ್ತಾರೆ. ಮುಂದಿನ 8 ವರ್ಷಗಳಲ್ಲಿ ಜಗತ್ತು ಮೂರನೇ ಜಾಗತಿಕ ಮಹಾ ಯು ದ್ಧ, ಆಹಾ ರ ಧಾನ್ಯಗಳ ಕೊರತೆ,
ಬಿರುಗಾಳಿಗಳು ಮತ್ತು ಸುಂಟರ ಗಾಳಿಗಳು, ಪ್ರವಾಹಗಳು ಮತ್ತು ಸುನಾಮಿಗಳು, ಜ್ವಾಲಾಮುಖಿ ಸ್ಫೋಟಗಳು
ಮತ್ತು ಬೆಂಕಿಯಿಂದ ನಾಶ, ಭೂಕಂಪಗಳು, ಬರ ಮತ್ತು ಹಸಿವು, ಸಾಂಕ್ರಾಮಿಕ ರೋಗಗಳಿಂದ ಈ ಜಗತ್ತು ನಡುಗಲಿದೆ. ಈ ಪೈಕಿ ಈಗಾಗಲೇ ಕೆಲವು ಸತ್ಯವಾಗುತ್ತಿದ್ದು, ಹೀಗಾಗಿ, ಪಂ. ಶ್ರೀ ಕಾಶಿನಾಥ್ ಮಿಶ್ರ ಅವರ ಭವಿಷ್ಯ ದರ್ಪಣ ಎಲ್ಲೆಡೆ ಪ್ರಖ್ಯಾತಿ ಹೊಂದುತ್ತಿದೆ.

ಶ್ರೀ ಪುರಿಯ ಶ್ರೀ ಜಗನ್ನಾಥನ ಪರಮ ಭಕ್ತರಾದ ಪಂ. ಶ್ರೀ ಕಾಶಿನಾಥ್ ಮಿಶ್ರ ತ್ರಿಸಂಧ್ಯಾಧಾರ ಶ್ಲೋಕದ ಮೂಲಕ ಜಗತ್ತನ್ನು ರಕ್ಷಿಸಲು ತಮ್ಮ ಭಕ್ತರೊಂದಿಗೆ ಶ್ರಮಿಸುತ್ತಿದ್ದಾರೆ.

ಈ ಭವಿಷ್ಯ ಮಾಲಿಕಾ ಗ್ರಂಥಗಳನ್ನು 600 ವರ್ಷಗಳ ಹಿಂದೆ ಪಂಚ ಸಖರು ಅಂದರೆ ದ್ವಾಪರ ಯುಗದ ಭಗವಾನ್
ಶ್ರೀ ಕೃಷ್ಣನ ಪರಮ ಮಿತ್ರರು ಕಲಿಯಗದಲ್ಲಿ ಪುನರ್ಜನ್ಮ ಪಡೆದು ಬರೆದು, ಮನುಕುಲದ ಭವಿಷ್ಯ ಬರೆದಿದ್ದಾರೆ. ಈ ಕೃಷ್ಣನ ಸ್ನೇಹಿತರೆಂದರೆ ಅಚ್ಯುತಾನಂದ ದಾಸ, ಬಲರಾಮ ದಾಸ, ಶಿಶು ಅನಂತ ದಾಸ, ಯಶವಂತ ದಾಸ, ಮತ್ತು ಜಗನ್ನಾಥ ದಾಸ (ಧಾಮ, ಸುಧಾಮ, ಸುಭಾಲ, ಸುಭಾವು, ಹಾಗು ಸುಭಾಕ್ಷ.) ಈ ಗ್ರಂಥದ ಜ್ಞಾನವನ್ನು ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ ಭಕ್ತರಿಗೆ ಅನುಗ್ರಹಿಸಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿವಿ ಪ್ರಾಧ್ಯಾಪಕಿಯಾದ ಮಂಗಳಮುಖಿ; ಉನ್ನತ ಶಿಕ್ಷಣದ ಪ್ರಾಧ್ಯಾಪಕಿಯಾದದ್ದು ಇದೇ ಮೊದಲು!!

ತೃತೀಯ ಲಿಂಗಿಯೊಬ್ಬರು ವಿಶ್ವವಿದ್ಯಾಲಯವೊಂದರ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ…

1 of 4