Gl harusha
ಸ್ಥಳೀಯ

ಹೆಚ್ಚುತ್ತಿದೆ ತಂಬಾಕು ವ್ಯಸನಿ ಮಹಿಳೆಯರ ಸಂಖ್ಯೆ: ಬಾಲಕೃಷ್ಣ ಪೊರ್ದಾಳ್ ! ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ವಿಶ್ವ ತಂಬಾಕು ವಸ್ತು ವಿರೋಧಿ ದಿನಾಚರಣೆ

ಮಹಿಳಾ ಸಬಲೀಕರಣ ಎನ್ನುತ್ತಲೇ ಇನ್ನೊಂದೆಡೆ ತಂಬಾಕು ಸೇವಿಸುವ ಮಹಿಳೆಯರ ಸಂಖ್ಯೆಯೂ ಅಧಿಕವಾಗುತ್ತಿದೆ ಎಂದು ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಳವಳ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಹಿಳಾ ಸಬಲೀಕರಣ ಎನ್ನುತ್ತಲೇ ಇನ್ನೊಂದೆಡೆ ತಂಬಾಕು ಸೇವಿಸುವ ಮಹಿಳೆಯರ ಸಂಖ್ಯೆಯೂ ಅಧಿಕವಾಗುತ್ತಿದೆ ಎಂದು ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ಕಳವಳ ವ್ಯಕ್ತಪಡಿಸಿದರು.

srk ladders
Pashupathi
Muliya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಪುತ್ತೂರು ತಾಲೂಕು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ವತಿಯಿಂದ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪುತ್ತೂರು ಕಚೇರಿಯಲ್ಲಿ ನಡೆದ ವಿಶ್ವ ತಂಬಾಕು ವಸ್ತು ವಿರೋಧಿ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ತಂಬಾಕು ಸೇವನೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ನಿಮಗೆಲ್ಲಾ ಅರಿವಿದೆ. ಪ್ರತಿವರ್ಷ ತಂಬಾಕು ಸೇವನೆಯಿಂದಲೇ 70- 80 ಲಕ್ಷದಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಹಾಗಾಗಿ ತಂಬಾಕಿನಿಂದಾಗುವ ದುಷ್ಪರಿಣಾಮದ ತೀವ್ರತೆಯ ಬಗ್ಗೆ ತಿಳಿದುಕೊಳ್ಳಬೇಕು. ಇನ್ನೂ ಕಳವಳದ ವಿಷಯವೇನೆಂದರೆ ತಂಬಾಕು ಸೇವಿಸುವ ಮಹಿಳೆಯರ ಸಂಖ್ಯೆಯೂ ಹೆಚ್ಚುತ್ತಿದೆ ಎನ್ನುವುದು. 2019ರಲ್ಲಿ 3.8%ರಷ್ಟು ಮಹಿಳೆಯರು ತಂಬಾಕು ಸೇವಿಸುತ್ತಿದ್ದರು. ಇದರ ಪ್ರಮಾಣ 2024ರಲ್ಲಿ 6.2%ಕ್ಕೆ ಏರಿಕೆಯಾಗಿದೆ ಎಂದರು.

ಮಾದಕ ವಸ್ತುಗಳ ಜಾಲ ದಿನದಿಂದ ದಿನಕ್ಕೆ ವ್ಯಾಪಕ ಆಗುತ್ತಲೇ ಹೋಗುತ್ತಿದೆ. ಆದ್ದರಿಂದ ತಂಬಾಕಿನ ಬಗ್ಗೆ ಜಾಗೃತಿ ಮೂಡಿಸಲೇ ಬೇಕಾಗಿದೆ. ಇಂದು ಎಳೆ ವಯಸ್ಸಿನಲ್ಲೇ ಮಕ್ಕಳು ಅಮಲು ಪದಾರ್ಥಗಳ ದಾಸರಾಗುತ್ತಿರುವ ದೃಶ್ಯವನ್ನು ನಾವು ಕಾಣುತ್ತಿದ್ದೇವೆ. ಮಕ್ಕಳು ಮಾದಕ ಪದಾರ್ಥಗಳ ಕಲಿಕೆ ಆರಂಭಿಸುವುದು ಸ್ವೀಟ್ ಸುಪಾರಿಯಿಂದ. ಬಳಿಕ ದೊಡ್ಡ ದೊಡ್ಡ ಚಟಗಳಿಗೆ ಬಲಿ ಬೀಳುತ್ತಾರೆ. ಹಾಗಾಗಿ ಮಕ್ಕಳು ತಪ್ಪು ಮಾಡದಂತೆ ಎಚ್ಚರ ವಹಿಸಿ. ಜಾಗೃತಿಯನ್ನು ಪಡೆದುಕೊಳ್ಳಿ. ಮಕ್ಕಳ ಬಗ್ಗೆ ಜಾಗರೂಕರಾಗಿರಿ ಎಂದು ಕಿವಿಮಾತು ಹೇಳಿದರು.

ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಲೊಕೇಶ್ ಹೆಗ್ಡೆ ಮಾತನಾಡಿ, ಅಮಲು ಪದಾರ್ಥಗಳ ಸೇವನೆಗೆ ಸ್ವಯಂ ಪ್ರೇರಿತರಾಗಿ ಮುಂದಾಗಬೇಕು ಎಂದರು.

ಒಕ್ಕೂಟದ ಅಧ್ಯಕ್ಷ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಸುಬ್ರಹ್ಮಣ್ಯಕ್ಕೆ ದಿನದ 3 ಹೊತ್ತು ರೈಲು ಸೇವೆ| ಮಂಗಳೂರು – ಪುತ್ತೂರು ರೈಲು ಓಡಾಟ ವಿಸ್ತರಣೆ: ಬದಲಾದ ಸಮಯ ಹೀಗಿದೆ

ಮಂಗಳೂರು-ಕಬಕ ಪ್ಯಾಸೆಂಜ‌ರ್ ರೈಲು ಸೇವೆಯನ್ನು ಇದೀಗ ಸುಬ್ರಹ್ಮಣ್ಯಕ್ಕೆ ವಿಸ್ತರಿಸಿ ಕೇಂದ್ರ