ಸ್ಥಳೀಯ

ಕಡಬ: ಸ್ವಾಮೀಜಿಯ ಭಾವಚಿತ್ರವನ್ನು ಅವಮಾನಕರವಾಗಿ ಚಿತ್ರಿಸಿ ವಾಟ್ಸಾಪ್ ಸ್ಟೇಟಸ್: ಯುವಕ ಕ್ಷಮೆಯಾಚನೆ..!

ಈ ಸುದ್ದಿಯನ್ನು ಶೇರ್ ಮಾಡಿ

ಹಿಂದೂ ಸ್ವಾಮೀಜಿಯ ಭಾವಚಿತ್ರವನ್ನು ಯುವಕನೊಬ್ಬ ಅವಮಾನಕರವಾಗಿ ಚಿತ್ರಿಸಿ ವಾಟ್ಸಾಪ್ ಸ್ಟೇಟಸ್ ಹಾಕಿದ ಘಟನೆ ಕಡಬದಲ್ಲಿ ನಡೆದಿದೆ.

ಯುವಕನನ್ನು ಅನ್ವರ್ ವೆರೈಟಿ ಎಂದು ಗುರುತಿಸಲಾಗಿದೆ.

SRK Ladders

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹಿಂದೂ ಸಮಾಜ ತ್ರೀವ್ರ ಅಕ್ರೋಶ ವ್ಯಕ್ತಪಡಿಸಿದೆ.

ಇದೀಗ ಹಿಂದೂ ಸಮಾಜದ ಅಕ್ರೋಶಕ್ಕೆ ಮಣಿದು ಅನ್ವರ್ ವೆರೈಟಿ ಎಂಬಾತನು ಕಡಬ ದುರ್ಗಾಂಬಿಕಾ ಅಮ್ಮನವರ ದೇವಾಲಯಕ್ಕೆ ಬಂದು ಸಮಸ್ತ ಹಿಂದೂ ಸಮಾಜಕ್ಕೆ ಕ್ಷಮೆಯಾಚಿಸಿ ಇನ್ನು ಮುಂದಕ್ಕೆ ಹಿಂದೂ ಸಮಾಜದ ಬಗ್ಗೆ ಅಥವಾ ಹಿಂದೂ ಧಾರ್ಮಿಕ ವಿಷಯಗಳಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಅಪ್ಪಿ ತಪ್ಪಿಯು ಅವಹೇಳನವಾಗಿ ಅಥವಾ ಅವಮಾನಕರ ವಿಚಾರಗಳನ್ನು ಹಿಂದೂ ಸಮಾಜಕ್ಕೆ ದಕ್ಕೆ ಮಾಡುವುದಿಲ್ಲ ಎಂದೂ ತಪ್ಪೊಪ್ಪಿಕೊಂಡಿರುತ್ತಾನೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3