ರಾಜ್ಯ ವಾರ್ತೆಸ್ಥಳೀಯ

ಮನೆಗೆ ಬೆಂಕಿ ಹಚ್ಚಿದ ಮಹಿಳೆ: ಬಂಧನ!!

ಈ ಸುದ್ದಿಯನ್ನು ಶೇರ್ ಮಾಡಿ

ಕಾಸರಗೋಡು: ಯುವಕನ ಜೊತೆ ವಾಸವಾಗಿದ್ದ ವಿವಾಹಿತ ಮಹಿಳೆ ಮನೆಗೆ ಬೆಂಕಿ ಹಚ್ಚಿದ ಘಟನೆ ಪೆರ್ಮುದೆ ಸಮೀಪದ ಮಾಣಿತ್ತಡ್ಕದಲ್ಲಿ ನಡೆದಿದೆ.

akshaya college

ಮಾಣಿತ್ತಡ್ಕದ ನಯನ ಕುಮಾರ್ ಜೊತೆ ವಾಸವಾಗಿದ್ದ ವಿವಾಹಿತೆ ಉಷಾ ಸೋಮವಾರ ರಾತ್ರಿ ಕೃತ್ಯ ನಡೆಸಿದ್ದಾಳೆ. ಇಬ್ಬರ ನಡುವೆ ಉಂಟಾದ ವೈಮನಸ್ಸು ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಉಷಾಳನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಉಷಾ ವಿವಾಹಿತೆಯಾಗಿದ್ದು, ಪತಿ ಮತ್ತು ಇಬ್ಬರು ಮಕ್ಕಳಿದ್ದಾರೆ. ಒಂದೂವರೆ ವರ್ಷದ ಹಿಂದೆ ಪತಿ, ಮಕ್ಕಳನ್ನು ತ್ಯಜಿಸಿ ನಯನ ಕುಮಾರ್ ಜೊತೆ ವಾಸವಾಗಿದ್ದಳು. ಸೋಮವಾರ ರಾತ್ರಿ ನಯನ ಕುಮಾರ್ ನ ತಾಯಿ ಮಾತ್ರ ಮನೆಯಲ್ಲಿದ್ದ ಸಂದರ್ಭದಲ್ಲಿ ಸೀಮೆ ಎಣ್ಣೆ ಸುರಿದು ಉಷಾ ಮನೆಗೆ ಬೆಂಕಿ ಹಚ್ಚಿದ್ದು, ಹೆಂಚು ಹಾಸಿದ ಮನೆ ಭಾಗಶಃ ಹಾನಿಗೊಂಡಿದೆ.

ನಯನ ಕುಮಾರ್ ನ ತಾಯಿ ಮನೆಯಿಂದ ಓಡಿ ಹೋದ ಕಾರಣ ಅಪಾಯ ತಪ್ಪಿದ್ದು, ಸ್ಥಳಕ್ಕೆ ತಲುಪಿದ ಪರಿಸರ ವಾಸಿಗಳು ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದರು. ನಯನ ಕುಮಾರ್ ನ ತಾಯಿ ನೀಡಿದ ದೂರಿನಂತೆ ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರು ಕೆಎಸ್ಸಾರ್ಟಿಸಿ ನೂತನ ಬಸ್ ಚಾಲಕ ನಿರ್ವಾಹಕರಿಗೆ ಸಂವಹನ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಾಗಾರ

ಪುತ್ತೂರು: ಕೆಎಸ್ಸಾರ್ಟಿಸಿ ಪುತ್ತೂರು ಘಟಕಕ್ಕೆ ನೂತನವಾಗಿ ಆಯ್ಕೆಗೊಂಡಿರುವ ಬಸ್ ಚಾಲಕ ಮತ್ತು…

1 of 141