ಕೃಷಿರಾಜ್ಯ ವಾರ್ತೆಸ್ಥಳೀಯ

ಪಹಣಿ ಪತ್ರ(RTC)ಕ್ಕೆ ಆಧಾರ್ ಲಿಂಕ್ ಕಡ್ಡಾಯ | ಮೊಬೈಲಿನಲ್ಲೇ ಹೀಗೆ ಲಿಂಕ್ ಮಾಡಿ…

tv clinic

ಈ ಸುದ್ದಿಯನ್ನು ಶೇರ್ ಮಾಡಿ

ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ಕೃಷಿಗೆ ಸಂಬಂಧಿಸಿದಂತೆ ಯಾವುದೇ ಯೋಜನೆಗಳನ್ನು ಜಾರಿಗೊಳಿಸಿದರು ಅದಕ್ಕೆ ದಾಖಲೆ ಮುಖ್ಯವಾಗಿದೆ. ಆಧಾರ್ ಕಾರ್ಡ್ ಜೊತೆ ಕೃಷಿಗೆ ಸಂಬಂಧಿಸಿದ ಪಹಣಿ ಕೂಡ ಮುಖ್ಯ. ಈ ಕಾರಣಕ್ಕಾಗಿ ಜಮೀನಿನ ದಾಖಲೆಗಳು ಸುರಕ್ಷಿತವಾಗಿರಿಸಲು ಪಹಣಿ ಜೊತೆ ಆಧಾರ್ ಲಿಂಕ್ ಕಡ್ಡಾಯಗೊಳಿಸಿದೆ. ಹಾಗಾದರೆ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ? ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

core technologies

ಪಹಣಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ?:
ನಿಮ್ಮ ಜಮೀನಿನ ಪಹಣಿ (rtc) ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಈಗ ತುಂಬಾ ಸುಲಭ! ನೀವು ಈ ಕೆಲಸವನ್ನು ಮನೆಯಿಂದಲೇ ಮಾಡಬಹುದು.

akshaya college

ಕಂದಾಯ ಇಲಾಖೆಯಿಂದ ಪಹಣಿಗೆ ಆಧಾರ್ ಕಾರ್ಡ ಅನ್ನು ಜೋಡಣೆ ಮಾಡಲು ಅಧಿಕೃತ ವೆಬ್ಸೈಟ್ ಲಿಂಕ್ https://landrecords.karnataka.gov.in/ ಅನ್ನು ಬಿಡುಗಡೆ ಮಾಡಲಾಗಿದೆ.

ಜಮೀನು ಹೊಂದಿರುವ ಸಾರ್ವಜನಿಕರು ಕಂದಾಯ ಇಲಾಖೆಯಿ ಈ ಅಧಿಕೃತ ವೆಬ್ಸೈಟ್ ಅನ್ನು ತಮ್ಮ ಮೊಬೈಲ್ ಬಳಕೆ ಮಾಡಿಕೊಂಡು ಭೇಟಿ ಮಾಡಿ ಮನೆಯಲ್ಲೇ ಕುಳಿತುಕೊಂಡು ನಿಮ್ಮ ಜಮೀನಿನ ಪಹಣಿಗೆ (RTC) ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು.

  1. ಮೊದಲಿಗೆ https://landrecords.karnataka.gov.in/ ವೆಬ್ ಸೈಟ್ ಗೆ ಭೇಟಿ ನೀಡಿ
  2. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು captcha code ನ್ನು ಭರ್ತಿ ಮಾಡಿ
  3. send otp ಮೇಲೆ ಕ್ಲಿಕ್ ಮಾಡಿ otp ಯನ್ನು ನಮೂದಿಸಿ.
  4. ತದನಂತರ ಇಲ್ಲಿ ಜಮೀನು ಯಾರ ಹೆಸರಿಗೆ ಇದಿಯೋ ಅವರ ಆಧಾರ್ ಸಂಖ್ಯೆಯನ್ನು ಮತ್ತು ಅಧಾರ್ ನಲ್ಲಿರುವಂತೆಯೇ ಹೆಸರನ್ನು ಹಾಕಿ ಹಾಕಿ.
  5. ನಾನು ಇಲ್ಲಿ ಸ್ವಯಂ ಪ್ರೇರಣೆಯಿಂದ ಆಧಾರ್ ಗಾಗಿ ನನ್ನ ಒಪ್ಪಿಗೆಯನ್ನು ನೀಡುತ್ತೇನೆ ಎಂಬ ಚೌಕದ ಮೇಲೆ ಕ್ಲಿಕ್ ಮಾಡಿ verify ಮೇಲೆ ಕ್ಲಿಕ್ ಮಾಡಿ.
  6. ಆಧಾರವನ್ನು ಯಶಸ್ವಿಯಾಗಿ ಪರಿಶೀಲಿಸಲಾಗಿದೆ ಎಂಬ ಸಂದೇಶ ಕಾಣಿಸುತ್ತದೆ. fetch details ಮೇಲೆ ಕ್ಲಿಕ್ ಮಾಡಿ.

ಇಷ್ಟು ಮಾಡಿದರೆ ನಿಮ್ಮ ಪಹಣಿಗೆ ಆಧಾರ್ ಲಿಂಕ್ ಆಗಿದೆ ಎಂದು ಖಚಿತ. ಈ ಪ್ರಕ್ರಿಯೆ ಉಚಿತ, ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಅಡಿಕೆ ಸಾರದಲ್ಲಿದೆ ಕ್ಯಾನ್ಸರ್ ಪ್ರತಿಬಂಧಕ ಗುಣ | ಯೆನೆಪೋಯ ವಿವಿ ವೈಜ್ಞಾನಿಕ ಸಂಶೋಧನೆಗೆ ಕ್ಯಾಂಪ್ಕೋ ಅಭಿನಂದನೆ

ಮಂಗಳೂರು: ಒಂದೆಡೆ ಅಡಿಕೆ ಕ್ಯಾನ್ಸರ್ ಕಾರಕ ಎನ್ನುವ ಚರ್ಚೆ ನಡೆಯುತ್ತಿದ್ದರೆ, ಇದೆಲ್ಲಾ…

ಸಾರ್ವಜನಿಕ ಸ್ಥಳಗಳಲ್ಲಿ ಸಾಕು ನಾಯಿ ಬಿಟ್ಟರೆ ಎಚ್ಚರಿಕೆ! ಬೀದಿ ನಾಯಿಗಳಿಗೆ ಆಹಾರ ಹಾಕಲು ಜಾಗ ಗುರುತು

ಸಾಕು ನಾಯಿಯನ್ನು ಸಾರ್ವಜನಿಕ ಸ್ಥಳದಲ್ಲಿ ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು…

ಉಪ್ಪಿನಂಗಡಿ: ಸೇತುವೆ ಕಾಮಗಾರಿ ವೇಳೆ ಮೊಸಳೆ ಪ್ರತ್ಯಕ್ಷ! ನದಿಗಿಳಿಯುತ್ತೀರಾದರೆ ಎಚ್ಚರ: ಹಲವೆಡೆ ಪತ್ತೆಯಾಗಿವೆ ಮೊಸಳೆ!!

ಉಪ್ಪಿನಂಗಡಿ: ಮುಗೇರಡ್ಕ ಸಮೀಪ ನೇತ್ರಾವತಿ ನದಿಯ ಮರಳಿನ ದಿಬ್ಬದಲ್ಲಿ ಮೊಸಳೆಯೊಂದು ವಿಶ್ರಾಂತಿ…

1 of 148