ಸ್ಥಳೀಯ

ಸುಳ್ಯದ ಆ್ಯಂಬುಲೆನ್ಸ್’ಗೆ ನ್ಯಾನೋ, ನ್ಯಾನೋಗೆ ಮತ್ತೊಂದು ಕಾರು ಢಿಕ್ಕಿ!! ಆ್ಯಂಬುಲೆನ್ಸ್’ನಲ್ಲಿದ್ದ ರೋಗಿಯನ್ನು ಪರ್ಯಾಯ ಆ್ಯಂಬುಲೆನ್ಸ್’ನಲ್ಲಿ ಶಿಫ್ಟ್!! ಕಬಕದಲ್ಲಿ ಹೆವೀ ಟ್ರಾಫಿಕ್ ಜಾಮ್!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಮಂಗಳೂರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸಿಗೆ ನ್ಯಾನೋ ಕಾರು ಡಿಕ್ಕಿ ಹೊಡೆದಿದ್ದು, ನ್ಯಾನೋ ಕಾರಿಗೆ ಮಂಗಳೂರಿನಿಂದ ಬರುತ್ತಿದ್ದ ಮತ್ತೊಂದು ಕಾರು ಢಿಕ್ಕಿಯಾದ ಘಟನೆ ಕಬಕದಲ್ಲಿ ನಡೆದಿದೆ.
ಘಟನೆಯಿಂದ ಮಂಗಳೂರು – ಪುತ್ತೂರು ಹಾಗೂ ಪುತ್ತೂರು – ವಿಟ್ಲ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಯಿತು.
ಘಟನೆಯಲ್ಲಿ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆ್ಯಂಬುಲೆನ್ಸ್ ನಲ್ಲಿದ್ದ ರೋಗಿ ಹಾಗೂ ರೋಗಿಯ ಕಡೆಯವರನ್ನು ಪರ್ಯಾಯ ಆ್ಯಂಬುಲೆನ್ಸ್ ನಲ್ಲಿ ಮಂಗಳೂರಿಗೆ ಕಳುಹಿಸಿಕೊಡಲಾಯಿತು.
ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನ ಆ್ಯಂಬುಲೆನ್ಸ್ ಎಂದು ಗುರುತಿಸಲಾಗಿದ್ದು, ಮಂಗಳೂರಿಗೆ ರೋಗಿಯೋರ್ವರನ್ನು ಕೊಂಡೊಯ್ಯಲಾಗುತ್ತಿತ್ತು. ಆ್ಯಂಬುಲೆನ್ಸ್ ಗೆ ಕಬಕದ ಶಾಲಾ ರಸ್ತೆಯಿಂದ ನೇರವಾಗಿ ಮುಖ್ಯರಸ್ತೆಗೆ ಬಂದ ನ್ಯಾನೊ ಡಿಕ್ಕಿಯಾಗಿದೆ. ಇದೇ ಸಂದರ್ಭ ಮಂಗಳೂರು ಕಡೆಯಿಂದ ಬಂದ ಮತ್ತೊಂದು ಕಾರು ನ್ಯಾನೋಗೆ ಅಪ್ಪಳಿಸಿದೆ ಎಂದು ತಿಳಿದುಬಂದಿದೆ.
ಸಂಚಾರಿ ಠಾಣೆ ಪೋಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 2