ಸ್ಥಳೀಯ

ಬ್ರಹ್ಮರಕೂಟ್ಲು ಟೋಲ್ ತೆರವಿಗೆ ಒತ್ತಾಯ:ಸಾಮೂಹಿಕ ಧರಣಿ

ಈ ಸುದ್ದಿಯನ್ನು ಶೇರ್ ಮಾಡಿ

ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಗೇಟ್‌ನ್ನು ತಕ್ಷಣ ಮುಚ್ಚುವಂತೆ ಆಗ್ರಹಿಸಿ ಬಂಟ್ವಾಳದಲ್ಲಿ ಸಾಮೂಹಿಕ ಧರಣಿ ನಡೆಯಿತು. ಮಾಜಿ ಸಚಿವ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದವು.

ಧರಣಿಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ. ರಮಾನಾಥ ರೈ, “23 ವರ್ಷಗಳಿಂದ ಟೋಲ್ ಸಂಗ್ರಹಿಸಲಾಗುತ್ತಿದ್ದು, ಹಲವು ನಿಯಮಗಳನ್ನು ಉಲ್ಲಂಘಿಸಿರುವ ಟೋಲ್ ಗೇಟ್ ಜನರ ಮೇಲೆ ಅನ್ಯಾಯ ಮಾಡುತ್ತಿದೆ. ನಿಯಮಬಾಹಿರ ಹಾಗೂ ಕಾನೂನುಬಾಹಿರ ರೀತಿಯಲ್ಲಿ ನಡೆಯುತ್ತಿರುವ ಈ ಟೋಲ್ ವ್ಯವಸ್ಥೆಯನ್ನು ತೆರವುಗೊಳಿಸುವ ಹೋರಾಟಕ್ಕೆ ಸಾರ್ವಜನಿಕ ಬೆಂಬಲ ಇದೆ,” ಎಂದು ಹೇಳಿದರು.

ಟೋಲ್ ವಿರೋಧಿ ಹೋರಾಟ ಸಮಿತಿಯ ಪ್ರಮುಖ ಮುನೀರ್ ಕಾಟಿಪಳ್ಳ ಅವರು ಮಾತನಾಡಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಸಹಿತ ಹೆದ್ದಾರಿ ಅಭಿವೃದ್ಧಿ ಕಾರ್ಯಗಳಲ್ಲಿ ಅಗತ್ಯ ನಿಯಮಗಳನ್ನು ಪಾಲಿಸದೆ ಜನತೆಗೆ ತೊಂದರೆ ಉಂಟುಮಾಡುತ್ತಿದೆ ಎಂದು ಆರೋಪಿಸಿದರು. “ಜನರ ಅಹವಾಲುಗಳನ್ನು ಸ್ವೀಕರಿಸುವ ಕನಿಷ್ಠ ಸೌಜನ್ಯವೂ ಪ್ರಾಧಿಕಾರದಿಂದ ಕಾಣುತ್ತಿಲ್ಲ,” ಎಂದು ಅವರು ದೂರಿದರು.

ಪ್ರತಿಭಟನೆಯಲ್ಲಿ ಧರಣೇಂದ್ರ ಕುಮಾರ್, ಮಮತಾ ಗಟ್ಟಿ, ಪಿಯೂಸ್ ರೊಡ್ರಿಗಸ್,ಮೋಹನ್ ಶೆಟ್ಟಿ, ಶೇಖರ್, ಪದ್ಮರಾಜ್, ಎಂ.ಜಿ. ಹೆಗ್ಡೆ, ಬಿ.ಎಂ. ಭಟ್, ಸುನಿಲ್ ಕುಮಾರ್ ಬಜಲ, ಅನ್ವರ್ ಸಾದತ್, ಸುಹೈಲ್ ಖಂದಕ್ ಸೇರಿದಂತೆ ಹಲವು ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರಿನಲ್ಲಿ ಯುವ ನ್ಯಾಯವಾದಿಗಳಿಗೆ ಐಎಎಸ್–ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಗಾರ

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ವಕೀಲರ ಸಂಘ ಪುತ್ತೂರು ಇವರ…

1 of 121