ಸ್ಥಳೀಯ

ಬಡ ನಿರ್ಗತಿಕ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸೂರು ಸೇವೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬಡ ನಿರ್ಗತಿಕ ಕುಟುಂಬಕ್ಕೆ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಸಮಾಜದಲ್ಲಿ ನೊಂದಿರುವ ಕಷ್ಟದಲ್ಲಿರುವಂತಹ ಅಸಹಾಯಕ ಕುಟುಂಬಗಳಿಗೆ ಸೂರು ಕಟ್ಟಿಕೊಡುವ ಸೇವೆಯನ್ನು ಮಾಡುವ ಮೂಲಕ ಸಾಂತ್ವಾನವನ್ನು ನೀಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಹೇಳಿದರು.

akshaya college
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಹಾಗೂ ದಾನಿಗಳ ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಲ್ನಾಡು ಇವರ ಸಹಕಾರದೊಂದಿಗೆ ಯಮುನಾ ಅವರಿಗೆ ಮನೆ ನಿರ್ಮಿಸಿಕೊಟ್ಟಿದ್ದು, ಇದರ ಹಸ್ತಾಂತರ ಸಮಾರಂಭದಲ್ಲಿ ಮಾತನಾಡಿದರು.

ಯಮುನಾ ಇವರ ಕುಟುಂಬಕ್ಕೆ ನಾವೆಲ್ಲ ಕ್ಷೇತ್ರದ ಸೇವಕರಾಗಿ ಕುಟುಂಬಸ್ಥರ ರೀತಿಯಲ್ಲಿ ಭಾಗಿಗಳಾಗಿದ್ದೇವೆ. ಮುಂದಕ್ಕೆ ಈ ಮನೆಯಲ್ಲಿ ಯಮುನಾ ಮತ್ತು ಅವರ ಮಗಳು ದೀಪ್ತಿ ಸಂತೋಷದಿಂದ ನೆಮ್ಮದಿಯಿಂದ ಇರುವಂತಾಗಲಿ. ಮನೆ ಕಟ್ಟಿಕೊಡುವುದರೊಂದಿಗೆ ಇವರ ಮನೆಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಕೂಡ ಯೋಜನೆಯಿಂದ ಒದಗಿಸಿಕೊಡುವುದಾಗಿ ತಿಳಿಸಿದರು.
ಯಮುನಾ ಕುಟುಂಬಕ್ಕೆ ಈಗಾಗಲೇ ಪ್ರತೀ ತಿಂಗಳು ಮಾಸಾಶನ ನೀಡುತ್ತಾ ಇದ್ದೇವೆ ಎಂದು ಹೇಳಿದ ಅವರು, ಮನೆ ರಚನೆಗೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸಿದರು.

ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿಯವರು ಮಾತನಾಡಿ, ವಾತ್ಸಲ್ಯ ಮನೆ ಎಂಬುದು ಮಾತೃಶ್ರೀ ಅಮ್ಮನವರ ಕಲ್ಪನೆಯಾಗಿದೆ. ಇದು ಅತ್ಯಂತ ಬಡ ನಿರ್ಗತಿಕರ ಕುಟುಂಬಕ್ಕೆ ಕಟ್ಟಿ ಕೊಡುವ ಮನೆಯಾಗಿದ್ದು ಇದು ಯಮುನಾರವರಿಗೆ ದೊರೆತಿದೆ ಮುಂದಕ್ಕೆ ಇವರ ಜೀವನ ಬೆಳಗಲಿ ಎಂದು ಹೇಳಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಆರ್ಯಾಪು ಗ್ರಾ.ಪಂ ಅಧ್ಯಕ್ಷೆ ಗೀತಾ, ಜನಜಾಗೃತಿ ವೇದಿಕೆ ತಾಲೂಕು ನಿಕಟಪೂರ್ವ ಅಧ್ಯಕ್ಷ ಜಿ ಮಹಾಬಲ ರೈ ವಳತ್ತಡ್ಕ, ಜನಜಾಗೃತಿ ಬಲ್ನಾಡು ವಲಯ ಅಧ್ಯಕ್ಷ ಪ್ರವೀಣ್‌ಚಂದ್ರ ಆಳ್ವ, ಜ್ಞಾನವಿಕಾಸ ಯೋಜನಾಧಿಕಾರಿ ಅಮೃತಾ, ತಾಲೂಕಿನ ಯೋಜನಾಧಿಕಾರಿಗಳಾದ ಶಶಿಧರ್, ಜಿಲ್ಲಾ ಜನಜಾಗೃತಿ ವೇದಿಕೆ ಮಾಜಿ ಜಿಲ್ಲಾಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಾಜಿ ವಲಯಾಧ್ಯಕ್ಷ ಅಂಬ್ರೋಸ್ ಡಿಸೋಜ, ಶರೀಫ್ ಕುಂಜೂರುಪಂಜ, ನಿವೃತ್ತ ಶಿಕ್ಷಕರಾದ ರಾಧಾಕೃಷ್ಣ ಕಲ್ಲೂರಾಯ, ವಲಯ ಮೇಲ್ವಿಚಾರಕ ಪ್ರಶಾಂತ ಕುಮಾರ್ ಜೆ, ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ, ಕುಂಜೂರುಪಂಜ ಒಕ್ಕೂಟ ಅಧ್ಯಕ್ಷ ಮಹಾಲಿಂಗ ನಾಯ್ಕ, ಮಾಜಿ ಅಧ್ಯಕ್ಷ ನಾರಾಯಣ ಮೂಲ್ಯ, ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಲ್ನಾಡು ಇದರ ಪ್ರತಿನಿಧಿ ಮತ್ತು ಸದಸ್ಯರು ವಲಯದ ಸೇವಾಪ್ರತಿನಿಧಿಗಳು ಮತ್ತು ಯಮುನಾ ಇವರ ಸಂಬಂಧಿಕರು ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಶಶಿಧರ್ ಸ್ವಾಗತಿಸಿ ಮೇಲ್ವಿಚಾರಕರಾದ ಪ್ರಶಾಂತ್ ಕುಮಾರ್ ವಂದಿಸಿದರು.
ಬಲ್ನಾಡು ಶೌರ್ಯ, ಒಕ್ಕೂಟ ಅಧ್ಯಕ್ಷರಿಗೆ ಅಭಿನಂದನೆ:

ತಾಲೂಕು ಮತ್ತು ಜಿಲ್ಲೆಯಲ್ಲಿ ಪ್ರಥಮ ಎಂಬಂತೆ ಬಲ್ನಾಡು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ವಾತ್ಯಲ್ಯ ಮನೆ ರಚನೆಗೆ ಮನೆಯ ಅಡಿಪಾಯದಿಂದ ಹಿಡಿದು ಮನೆ ಹಸ್ತಾಂತರದವರೆಗೆ ರಾತ್ರಿ ಹಗಲೆನ್ನದೇ ದುಡಿದು ಸಹಕಾರ ನೀಡಿದ್ದಾರೆ. ಅವರಿಗೆ ಘಟಕದ ಪರವಾಗಿ ಪ್ರತಿನಿಧಿಗಳಿಗೆ ಶಾಲು ಹಾಕಿ ಫಲಪುಷ್ಪ ನೀಡಿ ಮತ್ತು ಸದಸ್ಯರಿಗೆ ಗುಲಾಬಿ ಹೂ ನೀಡಿ ಅಭಿನಂದಿಸಲಾಯಿತು. ಮನೆ ರಚನೆಯ ಸಂಪೂರ್ಣ ಜವಾಬ್ದಾರಿಯನ್ನು ಉತ್ತಮವಾಗಿ ಸಮಯಕ್ಕೆ ಸರಿಯಾಗಿ ನಿರ್ವಹಿಸಿದ ಕುಂಜೂರುಪಂಜ ಒಕ್ಕೂಟದ ಅಧ್ಯಕ್ಷ ಮಹಾಲಿಂಗ ನಾಯ್ಕ ಅವರನ್ನು ಶಾಲು ಹಾಕಿ ಫಲ ಪುಷ್ಪ ನೀಡಿ ಗೌರವಿಸಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕಡಬ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿಗರಿಂದಲೇ ಬಿಜೆಪಿ ಮುಕ್ತ | ಪತ್ರಿಕಾಗೋಷ್ಠಿಯಲ್ಲಿ ನೂರುದ್ದೀನ್ ಸಾಲ್ಮರ

ಪುತ್ತೂರು: ಹೊಸದಾಗಿ ಮೇಲ್ದರ್ಜೆಗೇರಿದ ಕಡಬ ತಾಲೂಕಿನ ಪಟ್ಟಣ ಪಂಚಾಯತ್ ಚುನಾವಣೆಯ ಗೆಲುವಿನಿಂದ ಆ…

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

1 of 108