ಸ್ಥಳೀಯ

ವಿಟ್ಲದಲ್ಲಿ ಸರಣಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಚಹರೆ ಪತ್ತೆ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ವಿಟ್ಲ: ಮೇಗಿನಪೇಟೆಯ ಎರಡು ಅಂಗಡಿಗಳಿಗೆ ಶುಕ್ರವಾರ ರಾತ್ರಿ ಕಳ್ಳರು ನುಗ್ಗಿ ಹಣ ಹಾಗೂ ದಿನಸಿ ಸಾಮಗ್ರಿ ಕದ್ದೊಯ್ದಿದ್ದಾರೆ.
ವಿಟ್ಲ ಪೊಲೀಸ್ ಠಾಣೆಯ ಹಿಂಭಾಗ, ವಶ ಪಡಿಸಿಕೊಂಡ ವಾಹನಗಳನ್ನು ಸಂಗ್ರಹಿಸಿಡುವ ಸ್ಥಳವಿದ್ದು, ಅದಕ್ಕೆ ಹೋಗುವ ರಸ್ತೆಯಲ್ಲೇ ಮಹಮ್ಮದ್ ಹಾಜಿ ಮಾಲಿಕತ್ವದ ದಿನಸಿ ಅಂಗಡಿಯಿದ್ದು, ಅದಕ್ಕೆ ಕಳ್ಳರು ಕನ್ನ ಹಾಕಿದ್ದಾರೆ.

core technologies

ದಿನಸಿ ಅಂಗಡಿಯಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಕಳ್ಳರ ಕೃತ್ಯ ಹಾಗೂ ಮುಖ ಚಹರೆ ಪತ್ತೆಯಾಗಿದೆ. ಸಿಸಿ ಟಿವಿಯಲ್ಲಿ ಇಬ್ಬರು ಕಳ್ಳರು ಕೃತ್ಯ ಎಸಗಿರುವುದು ಕಾಣಿಸುತ್ತಿದೆ. ದಿನಸಿ ಅಂಗಡಿಯ ಹಿಂಭಾಗದಲ್ಲಿ ಛಾವಣಿಯ ಹಂಚು ತೆಗೆದು ಒಳ ನುಗ್ಗಿರುವ ಕಳ್ಳರು, ಕ್ಯಾಶ್ ಕೌಂಟರ್ ನಲ್ಲಿದ್ದ ರೂ 8000 ಮತ್ತು ಕಟ್ಟಿಟ್ಟಿದ್ದ ದಿನಸಿ ಸಾಮಗ್ರಿಗಳನ್ನು ಅಪಹರಿಸಿದ್ದಾರೆ.

akshaya college

ಬಳಿಕ ಪಕ್ಕದ ದೀಪಕ್ ಬೀಡಿ ಕಂಟ್ರಾಕ್ಟರ್ ನಿಸಾರ್ ವಿ.ಎಸ್. ಅವರಿಗೆ ಸೇರಿದ ಬೀಡಿ ಬ್ರ್ಯಾಂಚ್ ಹಿಂಬದಿ ಬಾಗಿಲು ಮುರಿದು, ಒಳ ನುಗ್ಗಿದ ಕಳ್ಳರು, ಸಂಪೂರ್ಣ ಜಾಲಾಡಿ ಅಲ್ಲಿದ್ದ ಚಿಲ್ಲರೆ ಹಣವನ್ನು ಕದ್ದಿದ್ದಾರೆ. ಬಳಿಕ ಠಾಣೆಯಿಂದ ತುಸು ದೂರವಿರುವ ಮೇಗಿನ ಪೇಟೆಯಲ್ಲಿರುವ ಫೆಲಿಕ್ಸ್ ಪಾಯಸ್ ಅವರ ಕೋಳಿಯ ಅಂಗಡಿಯ ಕಿಟಕಿ ಕಿತ್ತು ತೆಗೆದು ಒಳ ನುಗ್ಗಿದ ಕಳ್ಳರು, ಅಲ್ಲಿ ಕೂಡ ಒಂದಷ್ಟು ನಗದು ದೋಚಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಇದ್ದರೂ ವಿಟ್ಲ ಪೇಟೆಯಲ್ಲೇ ಕಳ್ಳರ ಕೈಚಳಕ ತೋರಿಸಿ, ಪರಾರಿಯಾಗಿರುವುದು ಆಶ್ಚರ್ಯಕರವಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ! ಕುತ್ತಿಗೆಗೆ ಗಾಯವಾಗಿ ಗಂಭೀರ ಸ್ಥಿತಿಯಲ್ಲಿದ್ದ ವಾನರನ ರಕ್ಷಣೆ!!

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ…

1 of 118