ವಿಟ್ಲ: ವಿಟ್ಲ ಸ್ವರ ಸಿಂಚನ ಸಂಗೀತ ಶಾಲೆ ದಶ ಸಂಭ್ರಮದಲ್ಲಿದ್ದು ಡಿಸೆಂಬರ್ 14ರಂದು ವಿಟ್ಲ ಜೆ.ಎಲ್. ಆಡಿಟೋರಿಯಂನಲ್ಲಿ ನಡೆಯಲಿದೆ.
ಬೆಳಗ್ಗೆ ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ದಶಮಾನೋತ್ಸವ ಸಮಿತಿ ಅಧ್ಯಕ್ಷ ರವಿಶಂಕರ್ ಸಿ ಮೂಡಂಬೈಲು ಅಧ್ಯಕ್ಷತೆ ವಹಿಸುವರು. ವಿಶೇಷ ಆಹ್ವಾನಿತರಾಗಿ ವಿಟ್ಲ ಅರಮನೆಯ ಕೆ. ಕೃಷ್ಣಯ್ಯ, ವಿಟ್ಲ ಶ್ರೀ ಭಗವತಿ ದೇವಸ್ಥಾನದ ವ್ಯವಸ್ಥಾಪಕ ಕೇಶವ್ ಆರ್.ವಿ., ಜೇನುಗಡ್ಡದಾರಿ ಕಲಾ ಪೋಷಕ ಕಲಾ ನಿರ್ದೇಶಕ ಕುಮಾರ ಪೆರ್ನಾಜೆ ಭಾಗವಹಿಸಲಿದ್ದಾರೆ.
ಸ್ವರ ಸಿಂಚನ ಪುರಸ್ಕಾರ:
ಪಿಟೀಲು ವಾದಕ ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ್, ಹಿರಿಯ ಯಕ್ಷಗಾನ ಭಾಗವತ ಎಸ್ ಎಲ್ ಗೋವಿಂದ ನಾಯಕ್ ಪಾಲೆಚ್ಚಾರು, ಅವರಿಗೆ ಸನ್ಮಾನ ನಡೆಯಲಿದೆ.
ನಂತರ ವಿದ್ಯಾರ್ಥಿಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ವಯಲಿನ್ ಕಛೇರಿ, ಸಹ ಶಿಕ್ಷಕಿ ಸಿಂಚನ ಲಕ್ಷ್ಮಿ ಕೊಡಂದೂರು ಅವರಿಂದ ಸಂಗೀತ ಹಾಗೂ ವಯಲಿನ್ ಜುಗಲ್ ಬಂಧಿ ನಡೆಯಲಿದೆ. ಮೃದಂಗ ವಾದಕರಾಗಿ ವಿದ್ವಾನ್ ಡಾ. ವಿ.ಆರ್ ನಾರಾಯಣ ಪ್ರಕಾಶ್ ಕ್ಯಾಲಿಕಟ್, ಪಿಟೀಲು ವಾದಕರಾಗಿ ವಿದ್ವಾನ್ ಕೋಡಂಪಳ್ಳಿ ಗೋಪ ಕುಮಾರ್, ಘಟಂ ವಾದಕರಾಗಿ ವಿದ್ವಾನ್ ಆಲುವ ರಾಜೇಶ್ ಕ್ಯಾಲಿಕಟ್ ಮೃದಂಗ, ಕ್ಶಿತೀಶ ರಾಮ ಕೆ ಎಸ್ ಸುಳ್ಯ ಸಹಕರಿಸಲಿದ್ದಾರೆ ಎಂದು ಸ್ವರಸಿಂಚನ ಕಲಾತಂಡದ ಮುಖ್ಯಶಿಕ್ಷಕಿ ಸವಿತಾ ಕೊಡಂದೂರು, ರಘುರಾಮ ಶಾಸ್ತ್ರಿ ಕೊಡಂದೂರು, ಸಿಂಚನ ಲಕ್ಷ್ಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


























