ಸ್ಥಳೀಯ

ಉಪ್ಪಿನಂಗಡಿ: ಸೇತುವೆ ಕಾಮಗಾರಿ ವೇಳೆ ಮೊಸಳೆ ಪ್ರತ್ಯಕ್ಷ! ನದಿಗಿಳಿಯುತ್ತೀರಾದರೆ ಎಚ್ಚರ: ಹಲವೆಡೆ ಪತ್ತೆಯಾಗಿವೆ ಮೊಸಳೆ!!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಉಪ್ಪಿನಂಗಡಿ: ಮುಗೇರಡ್ಕ ಸಮೀಪ ನೇತ್ರಾವತಿ ನದಿಯ ಮರಳಿನ ದಿಬ್ಬದಲ್ಲಿ ಮೊಸಳೆಯೊಂದು ವಿಶ್ರಾಂತಿ ಪಡೆಯುತ್ತಿರುವ ಫೊಟೋವೊಂದು ಇದೀಗ ವೈರಲ್ ಆಗಿದೆ.

core technologies

ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ಮುಗೇರಡ್ಕದಲ್ಲಿ ನೇತ್ರಾವತಿ ನದಿಗೆ ಸೇತುವೆ ಕಾಮಗಾರಿ ನಡೆಯುತ್ತಿದೆ. ಇದರ ಪಕ್ಕದ ಮರಳಿನ ದಿಬ್ಬದಲ್ಲಿ ಅ. 30ರಂದು ಸಂಜೆ ಮೊಸಳೆಯೊಂದು ವಿಶ್ರಾಂತಿ ಪಡೆಯುತ್ತಿರುವುದು ಕಂಡು ಬಂದಿದೆ.

akshaya college

ಸೇತುವೆ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರು ಮೊಸಳೆಯನ್ನು ನೋಡಿ ನಾಗರಿಕರಿಗೆ ಮಾಹಿತಿ ನೀಡಿದ್ದು, ಸ್ಥಳೀಯರು ನದಿಯಲ್ಲಿ ಮೊಸಳೆಯಿರುವ ಬಗ್ಗೆ ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದಾರೆ.

ನೇತ್ರಾವತಿ ಹಾಗೂ ಕುಮಾರಧಾರ ನದಿಗಳಲ್ಲಿ ಹಲವು ಕಡೆಗಳಲ್ಲಿ ಈಗಾಗಲೇ ಮೊಸಳೆಗಳು ಕಾಣಿಸಿಕೊಂಡಿವೆ. ಆದ್ದರಿಂದ ನದಿಗಿಳಿಯುವವರು ಎಚ್ಚರಿಕೆ ವಹಿಸಬೇಕಾದ ಅಗತ್ಯ ಇದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ! ಕುತ್ತಿಗೆಗೆ ಗಾಯವಾಗಿ ಗಂಭೀರ ಸ್ಥಿತಿಯಲ್ಲಿದ್ದ ವಾನರನ ರಕ್ಷಣೆ!!

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ…

1 of 118