ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ಶುಕ್ರವಾರ ನಡೆದಿದೆ.
ಕುತ್ತಿಗೆಗೆ ಗಾಯವಾಗಿ ಗಂಭೀರ ಸ್ಥಿತಿಯಲ್ಲಿದ್ದ ಮಂಗವನ್ನು ಜಿಡೆಕಲ್ಲು ಕಾಲೇಜು ವಿದ್ಯಾರ್ಥಿ ಚಂದನ್ ಗಮನಿಸಿ, ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪಶು ಇಲಾಖೆಗೆ ಕೊಂಡೊಯ್ದು ಪ್ರಥಮ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯಲಾಗಿದೆ.
ಅರಣ್ಯ ಇಲಾಖೆಯ ಉಲ್ಲಾಸ್, ಸುಧೀರ್ ಹೆಗ್ಡೆ, ಉರಗ ತಜ್ಞ ತೇಜಸ್ ಅವರು ಮಂಗಳೂರು ಇಲಾಖೆಯ ಪಶುವೈದ್ಯರ ಬಳಿಗೆ ಕರೆದೊಯ್ದರು.
ಮರ್ಕಟನ ರಕ್ಷಣೆ ವೇಳೆ ವಿದ್ಯಾರ್ಥಿ ಚಂದನ್ ಅವರ ಕೈಗೆ ಮಂಗ ಕಚ್ಚಿದ್ದು, ಅವರಿಗೆ ಟಿ.ಟಿ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.


























