ಪುತ್ತೂರು: ಕಿಲ್ಲೆ ಮೈದಾನದ ನಗರಸಭೆ ವಾಹನ ಶೆಡ್ಡ್’ನಲ್ಲಿ ದಾಸ್ತಾನು ಇಟ್ಟಿದ್ದ ಖಾಸಗಿ ಸಂಸ್ಥೆಯ ಸಾಮಗ್ರಿಗಳನ್ನು ನಗರಸಭೆ ಅಧಿಕಾರಿಗಳು ಕೊನೆಗೂ ತೆರವುಗೊಳಿಸಿದ್ದಾರೆ.
ನಗರಸಭೆಯ ತ್ಯಾಜ್ಯ ವಿಲೇವಾರಿ ವಾಹನಗಳ ಪಾರ್ಕಿಂಗ್ ಶೆಡ್ಡನ್ನು ಖಾಸಗಿ ಎಲೆಕ್ಟ್ರೋನಿಕ್ಸ್ ಅಂಗಡಿಯ ಫ್ರಿಡ್ಜ್, ಟಿವಿ, ಇನ್ನಿತರ ಸಾಮಗ್ರಿಗಳನ್ನು ಇಡಲು ನಗರಸಭೆ ಅವಕಾಶ ನೀಡಿತ್ತು. ಇದರಿಂದ ತ್ಯಾಜ್ಯ ವಿಲೇವಾರಿ ವಾಹನಗಳು ಮಳೆಗೆ ನೆನೆಯುತ್ತಾ ಹೊರಗಡೆ ಪಾರ್ಕಿಂಗ್ ಮಾಡುವಂತಾಗಿತ್ತು.
ಕಳೆದೆರಡು ವರ್ಷಗಳ ಹಿಂದೆ ನಿರ್ಮಿಸಿದ್ದ ಈ ಪಾರ್ಕಿಂಗ್ ಶೆಡ್ಡನ್ನು ದಾಸ್ತಾನು ಇಡಲು ಅನಧಿಕೃತವಾಗಿ ಅವಕಾಶ ಕೊಟ್ಟಿರುವುದನ್ನು ನಗರಸಭೆ ವಿಪಕ್ಷ ನಾಯಕ ಎಚ್. ಮಹಮ್ಮದ್ ಆಲಿ ವಿರೋಧಿಸಿ, ನಗರಸಭೆ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು.
ಇದರಿಂದ ವಿಚಲಿತರಾದ ಅಧಿಕಾರಿಗಳು, ವಾಹನ ಶೆಡ್ಡಿನಲ್ಲಿರಿಸಿದ್ದ ಸಾಮಗ್ರಿಗಳನ್ನು ಖಾಲಿ ಮಾಡಿಸಿದರು.