ಸ್ಥಳೀಯ

ಸಮಾಜಸೇವೆಯ ಸಂತೃಪ್ತಿ ಅಗಣಿತ: ಎಚ್.ಆರ್. ಕೇಶವ್ |ರೋಟರಿ ಗವರ್ನರ್ ಪುತ್ತೂರು ರೋಟರಿ ಕ್ಲಬ್’ಗೆ ಅಧಿಕೃತ ಭೇಟಿ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ್ ಅವರು ಪುತ್ತೂರು ರೋಟರಿ ಕ್ಲಬ್ ಅಧಿಕೃತ ಭೇಟಿ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ದ ಪುತ್ತೂರು ಕ್ಲಬ್’ನಲ್ಲಿ ಸಾರ್ವಜನಿಕ ಸಮಾರಂಭ ನಡೆಯಿತು.

core technologies

ಸಭೆಯನ್ನುದ್ದೇಶಿಸಿ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ್ ಮಾತನಾಡಿ, ತಾನು ಸಂಪಾದಿಸಿದರಲ್ಲಿ ಒಂದಷ್ಟು ಪಾಲು ಸಮಾಜಕ್ಕಾಗಿ ಮೀಸಲಿಟ್ಟರೆ, ಅದರಿಂದ ಸಿಗುವ ಸಂತೃಪ್ತಿ ಅಗಣಿತ. ರೋಟರಿಯಂತಹ ಅಂತರಾಷ್ಟ್ರೀಯ ಸಂಸ್ಥೆ ಸಮಾಜಮುಖಿ ಚಟುವಟಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸಮಾಜದ ಅಗತ್ಯಗಳಿಗೆ ಸ್ಪಂದಿಸುತ್ತಿರುವುದು ಅತ್ಯಂತ ಮಹತ್ವದ ಸಂಗತಿ. ಪುತ್ತೂರು ರೋಟರಿ ಕ್ಲಬ್ಬಿನ ಬಹುಮುಖಿ ಸಮಾಜಪಯೋಗಿ ಕಾರ್ಯ ಆದರ್ಶಪ್ರಾಯ ಎಂದರು.

akshaya college

ಎಜಿ ನರಸಿಂಹ ಪೈ, ವಲಯ ಸೇನಾನಿ ಝೇವಿಯರ್ ಡಿಸೋಜಾ ಶುಭಹಾರೈಸಿದರು.

ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಸಮುದಾಯ ಸೇವೆ ವಿಭಾಗದಲ್ಲಿ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲಿಗೆ 5 ಲಕ್ಷ ರೂ. ವೆಚ್ಚದ ರಂಗಮಂದಿರ ಹಾಗೂ ಪಾಪೆಮಜಲು ಶಾಲೆಯ ಆವರಣ ಗೋಡೆ ನಿರ್ಮಾಣದ ಕೊಡುಗೆ ನೀಡಿದ ಅರಿಯಡ್ಕ ಚಿಕ್ಕಪ್ಪ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ, ಶಾಲೆಯೊಂದರ ಶಿಕ್ಷಕರೊಬ್ಬರ ವರ್ಷದ ವೇತನಕ್ಕೆ 1.5 ಲಕ್ಷ ರೂ. ನೀಡಿದ ಕೃಷ್ಣ ಉದಯ ಭಟ್ ಅವರನ್ನು ಸನ್ಮಾನಿಸಲಾಯಿತು.

ವೃತ್ತಿಪರ ಸೇವಾ ವಿಭಾಗದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ನಟರಾಜ್ ಹಾಗೂ ಪುತ್ತೂರು ಹಿಂದೂ ರುದ್ರಭೂಮಿಯ ಸತೀಶ್ ಅವರನ್ನು ಸನ್ಮಾನಿಸಲಾಯಿತು. ಯುವಸೇವೆ ವಿಭಾಗದಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ್ತಿಗೆ 10 ಸಾವಿರ ರೂ. ನಗದಿನೊಂದಿಗೆ ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮವನ್ನು ಎಂ.ಜಿ. ರೈ, ಝೇವಿಯರ್ ಡಿಸೋಜಾ, ಸುರೇಶ್ ಶೆಟ್ಟಿ, ಪರಮೇಶ್ವರ್ ನಿರೂಪಿಸಿದರು.

ಇದೇ ಸಂದರ್ಭ ಇಬ್ಬರು ನೂತನ ಸದಸ್ಯರನ್ನು ಕ್ಲಬ್’ಗೆ ಸೇರ್ಪಡೆಗೊಳಿಸಲಾಯಿತು. ಡಾ. ಶ್ರೀಪ್ರಕಾಶ್ ಕಾರ್ಯಕ್ರಮ ನಡೆಸಿಕೊಟ್ಟರು. 2024-25ನೇ ಸಾಲಿನ ಅಧ್ಯಕ್ಷರಾದ ಡಾ. ಶ್ರೀಪತಿ ರಾವ್ ಅವರ ಕನಸಿನ ಯೋಜನೆಯಾದ ಕ್ಯಾನ್ಸರ್ ಚಿಕಿತ್ಸಾ ಘಟಕಕ್ಕೆ ಡಾ. ಭಾಸ್ಕರ್ ರಾವ್ ಹಾಗೂ ಅನಂತ ಭಟ್ ತಮನ್ಕರ್ ಅವರು ದೇಣಿಗೆ ನೀಡಿದರು.

ಬಾಲಕೃಷ್ಣ ಆಚಾರ್ ಸಂಪಾದಕತ್ವದಲ್ಲಿ ಮೂಡಿಬಂದ ಬುಲೆಟಿನ್ ಅನ್ನು ಬಿಡುಗಡೆಗೊಳಿಸಲಾಯಿತು.

ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ಜೈರಾಜ್ ಭಂಡಾರಿ ಸ್ವಾಗತಿಸಿ, ಕಾರ್ಯದರ್ಶಿ ಸುಜಿತ್ ಡಿ. ರೈ ವಂದಿಸಿದರು. ಸುಬ್ಬಪ್ಪ ಕೈಕಂಬ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಉಪ್ಪಿನಂಗಡಿ: ಸೇತುವೆ ಕಾಮಗಾರಿ ವೇಳೆ ಮೊಸಳೆ ಪ್ರತ್ಯಕ್ಷ! ನದಿಗಿಳಿಯುತ್ತೀರಾದರೆ ಎಚ್ಚರ: ಹಲವೆಡೆ ಪತ್ತೆಯಾಗಿವೆ ಮೊಸಳೆ!!

ಉಪ್ಪಿನಂಗಡಿ: ಮುಗೇರಡ್ಕ ಸಮೀಪ ನೇತ್ರಾವತಿ ನದಿಯ ಮರಳಿನ ದಿಬ್ಬದಲ್ಲಿ ಮೊಸಳೆಯೊಂದು ವಿಶ್ರಾಂತಿ…

ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ! ಕುತ್ತಿಗೆಗೆ ಗಾಯವಾಗಿ ಗಂಭೀರ ಸ್ಥಿತಿಯಲ್ಲಿದ್ದ ವಾನರನ ರಕ್ಷಣೆ!!

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ…

1 of 118