ಪುತ್ತೂರು: ಮುಖ್ಯರಸ್ತೆಯಿಂದ ಬೈಪಾಸ್ ಜಂಕ್ಷನ್ ಸಂಪರ್ಕಿಸುವ ಪರ್ಲಡ್ಕ ರಸ್ತೆ ಸೋಮವಾರ ಬೆಳಗ್ಗೆ ಸಂಚಾರ ದಟ್ಟಣೆಗೆ ಸಾಕ್ಷಿಯಾಯಿತು.

ಮುಖ್ಯರಸ್ತೆಯ ಕಲ್ಲಾರೆ – ದರ್ಬೆ ನಡುವೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಪರಿಣಾಮ ಒಂದು ಭಾಗದ ರಸ್ತೆಯನ್ನು ಮುಚ್ಚಲಾಗಿದೆ. ಇರುವ ಏಕಮುಖ ರಸ್ತೆಯಲ್ಲಿ ಎರಡೂ ಬದಿಯ ವಾಹನಗಳು ಚಲಿಸಬೇಕು. ಘನ ವಾಹನಗಳಾದ ಬಸ್, ಲಾರಿಗಳಿಗೆ ಇದು ತುಸು ಕಷ್ಟವಾಗಿದೆ.
ಇದರಿಂದಾಗಿ ಬಸ್, ಲಾರಿ ಮೊದಲಾದ ವಾಹನಗಳು ಪರ್ಲಡ್ಕ ಬಳಸು ದಾರಿಯಿಂದಾಗಿ ತೆರಳುತ್ತಿವೆ.
ಸೋಮವಾರ ಪುತ್ತೂರಿನ ಮಟ್ಟಿಗೆ ಜನನಿಬಿಡ ದಿನ. ಸಂತೆ ಬೇರೆ. ವಾಹನಗಳ ಸಂಖ್ಯೆಯೂ ಅಧಿಕ. ಈ ಎಲ್ಲಾದರ ಕಾರಣದಿಂದಾಗಿ ಪರ್ಲಡ್ಕ ರಸ್ತೆಯಲ್ಲಿ ತೆರಳುವ ವಾಹನಗಳು ತೆವಳುತ್ತಾ ಸಾಗುವಂತಾಯಿತು.
ಪಾಣಾಜೆ ಭಾಗದಿಂದ ಆಗಮಿಸುವ ನಾಗರಿಕರು, ವಿದ್ಯಾರ್ಥಿಗಳಿಗೆ ತುಸು ತೊಂದರೆಯಾಯಿತು.
ರಸ್ತೆಯುದ್ದಕ್ಕೂ ವಿದ್ಯುತ್ ಕಂಬಗಳು ರಸ್ತೆಯಲ್ಲೇ ಇರುವುದರಿಂದ ಬಸ್ ಗಳೆರಡು ಮುಖಾಮುಖಿಯಾದಾಗ ಬ್ಲಾಕ್ ಆಗುವ ಪರಿಸ್ಥಿತಿ ನಿರ್ಮಾಣವಾಯಿತು.