pashupathi
ಸ್ಥಳೀಯ

ತ್ಯಾಜ್ಯ ವಿಲೇವಾರಿಯನ್ನು ಸಮರ್ಥವಾಗಿ ನಿಭಾಯಿಸಿದವರು ಮಧು ಎಸ್. ಮನೋಹರ್ | ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆಗಳ ಮಹಾಪೂರ | ಗಿರೀಶ್ ನಂದನ್, ಕುಳ್ಳೇಗೌಡರ ಹೆಸರೂ ಪ್ರಸ್ತಾಪ!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಗರಸಭೆ ಪೌರಾಯುಕ್ತರಾಗಿ ವರ್ಗಾವಣೆಗೊಂಡ ಮಧು ಎಸ್. ಮನೋಹರ್ ಅವರಿಗೆ ಬೀಳ್ಕೊಡುಗೆ ಸಮಾರಂಭ ಗುರುವಾರ ಪುತ್ತೂರು ಪುರಭವನದಲ್ಲಿ ನಡೆಯಿತು.

akshaya college

ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ನನ್ನ ಶಾಸಕತ್ವದ ಅವಧಿಯಲ್ಲಿ ಉತ್ತಮ ಅಧಿಕಾರಿಗಳನ್ನು ಪುತ್ತೂರಿಗೆ ಕರೆತರುವ ಬಗ್ಗೆ ಹುಡುಕಾಟ ನಡೆಸ್ತಾ ಇದ್ದೇವು. ಆಗ ಸಿಕ್ಕಿದವರು ಮಧು ಎಸ್. ಮನೋಹರ್ ಹಾಗೂ ಸಹಾಯಕ ಆಯುಕ್ತರಾಗಿದ್ದ ಗಿರೀಶ್ ನಂದನ್. ಮಧು ಅವರ ಹೆಸರಿನಲ್ಲಿ ಎಸ್ ಇದೆ. ಅದರಂತೆ ಯಾವುದೇ ಕೆಲಸಗಳಿಗೆ ಅವರಿಂದ ಎಸ್. ಎಂಬ ಪ್ರತಿಕ್ರಿಯೆಯೇ ಬರುತ್ತಿತ್ತು. ಅಲ್ಲಿ ನೋ ಎಂಬ ಪದಕ್ಕೆ ಸ್ಥಳವೇ ಇಲ್ಲ ಎಂದು ಶ್ಲಾಘಿಸಿದರು.

ಹಿಂದೆ ಪುತ್ತೂರು ತಹಸೀಲ್ದಾರ್ ಆಗಿದ್ದ ಕುಳ್ಳೇಗೌಡ ಅವರ ಕಾರ್ಯವೈಖರಿಗೆ ಜನರಿಂದ ಶ್ಲಾಘನೆ ವ್ಯಕ್ತವಾಗಿತ್ತು ಎಂದು ನೆನಪಿಸಿಕೊಂಡರು. ವೃತ್ತಿ, ಪ್ರವೃತ್ತಿ, ನಿವೃತ್ತಿ ಸರ್ಕಾರಿ ಕಾಯಕದಲ್ಲಿ ಸಾಮಾನ್ಯ. ಮಧು ಮನೋಹರ್ ವೃತ್ತಿಯ ಜೊತೆಗೆ ಪರಿಸರದ ಬಗ್ಗೆ ಕಾಳಜಿ ಹೊಂದಿದ್ದರು. ಇದರಿಂದ ತ್ಯಾಜ್ಯ ವಿಲೇವಾರಿಯನ್ನು ಸುಲಭವಾಗಿ ನಿಭಾಯಿಸಿದರು. ಶಹಬ್ಬಾಶ್ ಪಡೆದುಕೊಂಡರು. ಕಾನೂನು ಜೊತೆ ಮಾನವೀಯತೆಯನ್ನು ಬೆಳೆಸಿಕೊಂಡಿದ್ದರು ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಹೆಚ್ಚು ಸಮಯ ಒಂದೇ ಕಡೆ ಇರುವ ಅಧಿಕಾರಿಗಳನ್ನು ಯಾಕೆ ಕಳುಹಿಸುವುದಿಲ್ಲ ಎನ್ನುವ ಪ್ರಶ್ನೆ ಸಹಜವಾಗಿ ಕೇಳಿಬರುತ್ತದೆ. ಆದರೆ ಮಧು ಎಸ್. ಮನೋಹರ್ ಅವರ ವರ್ಗಾವಣೆ ವಿಚಾರ ಬರುವಾಗ ಅವರನ್ನು ಯಾಕೆ ಕಳುಹಿಸುತ್ತೀರಿ ಎಂದು ಜನ ಕೇಳುವಂತಾಗಿದೆ. ಸಾರ್ವಜನಿಕರು ಬಂದಾಗ ಅವರ ಮನಸ್ಸಿಗೆ ನೋವಾಗದಂತೆ ಅವರ ಕೆಲಸ ನಿರ್ವಹಿಸಿ ಕಳುಹಿಸುತ್ತಿದ್ದರು. ನಾನು ಅಧ್ಯಕ್ಷನಾಗಿದ್ದಾಗ ಹೊಸ ಯೋಜನೆಗಳನ್ನು ಜಾರಿಗೆ ತರುವಾಗ ಯಾವುದಕ್ಕೂ ಇಲ್ಲ ಎನ್ನದೇ ಕೆಲಸವನ್ನು ಯಶಸ್ವಿ ಮಾಡುತ್ತಿದ್ದರು ಎಂದು ಶ್ಲಾಘಿಸಿದರು.

ತ್ಯಾಜ್ಯ ವಿಲೇವಾರಿ ದೊಡ್ಡ ತಲೆನೋವಾಗಿತ್ತು. ಆಗ ನಮಗೆ ಸಿಕ್ಕಿದ ದಕ್ಷ ಅಧಿಕಾರಿಗಳು ಮಧು ಎಸ್. ಮನೋಹರ್ ಹಾಗೂ ಶಬರೀನಾಥ್. ಇಂದು ಬನ್ನೂರು ಡಂಪಿಂಗ್ ಯಾರ್ಡ್ ಝೀರೋ ತ್ಯಾಜ್ಯ ಘಟಕವಾಗಿದೆ. ಮುಳಿಯ ಟ್ರಸ್ಟ್ ಮೂಲಕ ಸಿ.ಎನ್.ಜಿ. ಘಟಕ ಸ್ಥಾಪಿಸಿ, ಇದು ರಾಜ್ಯದಲ್ಲೇ ಮೊದಲು ಎಂಬ ಹೆಗ್ಗಳಿಕೆಯನ್ನು ಪುತ್ತೂರು ನಗರಸಭೆ ಪಡೆದುಕೊಂಡಿದೆ. ಇದರ ಕ್ರೆಡಿಟ್ ಮಧು ಎಸ್. ಮನೋಹರ್ ಅವರಿಗೆ ಸೇರಿದೆ.

ಬನ್ನೂರು ಡಂಪಿಂಗ್ ಯಾರ್ಡಿನ ಸಿ.ಎನ್.ಜಿ. ಘಟಕ ಮುಖ್ಯಸ್ಥ ಕೃಷ್ಣ ನಾರಾಯಣ ಮುಳಿಯ ಮಾತನಾಡಿ, ಬದಲಾವಣೆ ಸಾಮಾನ್ಯ. ಆದರೆ ಮಧು ಎಸ್. ಮನೋಹರ್ ಅವರನ್ನು ಕಳುಹಿಸಿಕೊಡುವುದು ಕಷ್ಟ. ಅದಕ್ಕೆ ಸಾಕ್ಷಿ ಇಷ್ಟು ಸಂಖ್ಯೆಯಲ್ಲಿ ಸೇರಿದ ಜನ. ಇದು ಪುತ್ತೂರಿನ ಮಟ್ಟಿಗೆ ಪ್ರಥಮ. ಮಧು ಎಸ್. ಮನೋಹರ್ ಅವರಿಗೆ ಪರಿಸರದ ಮೇಲಿದ್ದ ಪ್ರೀತಿಯಿಂದಾಗಿ ಬನ್ನೂರು ಡಂಪಿಂಗ್ ಯಾರ್ಡನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವಾಯಿತು. ನಾವು ಯೋಜನೆಯೊಂದನ್ನು ಮುಂದಿಟ್ಟಾಗ ಅದರ ಮುಂದೆ ಏನಾಗಬೇಕು ಎನ್ನುವುದನ್ನು ಅವರು ತಿಳಿಸುತ್ತಿದ್ದರು. ನಗರಸಭೆ ಮೇಲ್ದರ್ಜೆಗೇರಿದಾಗ ಮಧು ಎಸ್. ಮನೋಹರ್ ಅವರು ಕಮೀಷನರ್ ಆಗಿ ಮತ್ತೆ ಪುತ್ತೂರಿಗೆ ಬರಲಿ ಎಂದು ಹಾರೈಸಿದರು.

ನಗರಸಭೆ ಪೌರಾಯುಕ್ತರಾಗಿದ್ದ ಮಧು ಎಸ್. ಮನೋಹರ್ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ತಹಸೀಲ್ದಾರ್ ಬಿ.ಎಸ್. ಕೂಡಲಗಿ, ತಾಪಂ ಇಓ ನವೀನ್ ಭಂಡಾರಿ, ಬಿಇಓ ಲೊಕೇಶ್, ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಉಲ್ಲಾಸ್ ಪೈ, ವಾಣಿಜ್ಯ ಸಂಘದ ಅಧ್ಯಕ್ಷ ವಾಮನ್ ಪೈ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಪೌರಾಯುಕ್ತೆ ವಿದ್ಯಾ ಎಸ್. ಕಾಳೆ, ಪೌರ ಸೇವಾ ಸಂಘದ ಅಧ್ಯಕ್ಷ ರವಿ ಕುಮಾರ್, ಪೌರ ಕಾರ್ಮಿಕ ಸಂಘದ ಅಣ್ಣಪ್ಪ, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಗುತ್ತಿಗೆದಾರರ ಪರವಾಗಿ ಮುರಳೀಕೃಷ್ಣ ಹಸಂತ್ತಡ್ಕ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ನಗರಸಭೆ ಅಭಿಯಂತರ ಶಬರೀನಾಥ್ ಶುಭ ಹಾರೈಸಿದರು.

ಗೌರಿ ಬನ್ನೂರು ಪ್ರಾರ್ಥಿಸಿ, ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಜು.24(ನಾಳೆ): ಜರ್ನಲಿಸ್ಟ್ ಯೂನಿಯನ್‌ನಿಂದ ಪತ್ರಿಕಾ ದಿನಾಚರಣೆ-ಹಿರಿಯ ಪತ್ರಕರ್ತ ಡಾ. ನರೇಂದ್ರ ರೈ ದೇರ್ಲರಿಗೆ ಸನ್ಮಾನ

ಪುತ್ತೂರು: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ಪತ್ರಿಕಾ…

1 of 116